‘ಬಳೆ’ ರಗಳೆ; ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕ್ಯಾಟಗರಿ ನಾನಲ್ಲ ಎಂದ ಸುದೀಪ್

Published : Sep 23, 2019, 11:49 AM IST
‘ಬಳೆ’ ರಗಳೆ; ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕ್ಯಾಟಗರಿ ನಾನಲ್ಲ ಎಂದ ಸುದೀಪ್

ಸಾರಾಂಶ

ಪೈಲ್ವಾನ್ ಪೈರಸಿ ಬಗ್ಗೆ ಕಿಚ್ಚ ಸುದೀಪ್ ಮಾತನಾಡುವ ಭರದಲ್ಲಿ ‘ನಾನು ಹಾಕಿದ್ದು ಬಳೆಯಲ್ಲ, ಕಡಗ ಅಲ್ಲ’ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದರು | ತಮ್ಮ ಮಾತಿಗೆ ಸುದೀಪ್ ಈಗ ಸ್ಪಷ್ಟನೆ ಕೊಟ್ಟಿದ್ದಾರೆ. 

ಬಹುನಿರೀಕ್ಷಿತ ಕಿಚ್ಚ ಸುದೀಪ್ ‘ಪೈಲ್ವಾನ್’ ಪೈರಸಿ ಮಾಡಿದ ರಾಕೇಶ್ ಬಂಧನದ ನಂತರ ಸಾಕಷ್ಟು ಬೆಳವಣಿಗೆಗಳು ನಡೆದವು. ಕಿಚ್ಚ ಸುದೀಪ್- ದರ್ಶನ್ ಅಭಿಮಾನಿಗಳ ನಡುವೆ ವಾಕ್ಸಮರ ತಾರಕ್ಕೇರಿತು. ಪೈರಸಿ ಬಗ್ಗೆ ಸುದೀಪ್ ಮಾತನಾಡುವ ಭರದಲ್ಲಿ, ‘ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ’  ಎಂದು ಟ್ವೀಟ್ ಮಾಡಿದ್ದರು. 

ಪೈರಸಿ ಕಾಟಕ್ಕೆ ‘ಪೈಲ್ವಾನ್’ 5 ಕೋಟಿ ಲಾಸ್?

 

ಇಲ್ಲಿ ಕೈಗೆ ಹಾಕಿರುವುದು ಬಳೆಯಲ್ಲ, ಕಡಗ ಎಂದಿರುವುದು ಚರ್ಚಾಸ್ಪದವಾಗಿದೆ. ಸುದೀಪ್ ಮಹಿಳಾ ಮಣಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸ್ಟಾರ್ ನಟನಾಗಿ ಇಂತಹ ಮಾತುಗಳನ್ನಾಡಬಾರದು ಎಂಬ ಮಾತುಗಳು ಕೇಳಿ ಬಂದವು. ಇದೀಗ ಸುದೀಪ್ ತಮ್ಮ ಮಾತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. 

" ನಾನು ಬಳಸಿರುವ ‘ಬಳೆ’ ಪದವನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಮಹಿಳೆಯರಿಗೆ ಪ್ರತಿಕ್ರಿಯೆ ಇದು. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕ್ಯಾಟಗರಿ ನಾನಲ್ಲ. ಎಲ್ಲಾ ಮಹಿಳೆಯರ ಬಗ್ಗೆ ಗೌರವವಿದೆ. ಈ ಬಗ್ಗೆ ನಾನು ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ ಎಂದಿದ್ದಾರೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮೈಸೂರಿನಲ್ಲಿ ಕಿಚ್ಚನ ಹವಾ; 'ಮಾರ್ಕ್' ಸಕ್ಸಸ್ ಬೆನ್ನಲ್ಲೇ ಅಭಿಮಾನಿಗಳ ಜೊತೆ ಸುದೀಪ್ ಸಿನಿಮಾ ವೀಕ್ಷಣೆ!
India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!