ಲಿಪ್‌ಲಾಕ್‌ ವಿವಾದಕ್ಕೆ ಖಾರವಾಗಿ ಉತ್ತರಿಸಿದ ನೀರ್‌ದೋಸೆ ಬೆಡಗಿ

Published : Sep 23, 2019, 09:35 AM IST
ಲಿಪ್‌ಲಾಕ್‌ ವಿವಾದಕ್ಕೆ ಖಾರವಾಗಿ ಉತ್ತರಿಸಿದ ನೀರ್‌ದೋಸೆ ಬೆಡಗಿ

ಸಾರಾಂಶ

ಲಿಪ್ ಲಾಕ್ ವೈರಲ್; ನಟನೆಯ ಇತಿಮಿತಿಗಳು ಗೊತ್ತು ಎಂದ ಹರಿಪ್ರಿಯಾ | ಸೃಜನ್ ಲೋಕೇಶ್ ಜೊತೆಗಿನ ಕಿಸ್ಸಿಂಗ್ ಸೀನ್ ಗೆ ಖಾರವಾಗಿ ಉತ್ತರಿಸಿದ ಹರಿಪ್ರಿಯಾ  

ನಾನು ಕಲಾವಿದೆ. ಒಂದು ಪಾತ್ರದ ಅಗತ್ಯಕ್ಕೆ ತಕ್ಕಂತೆ ನಟಿಸುವಾಗ ಇಷ್ಟುಚಿಕ್ಕ ವಿಷಯಗಳೆಲ್ಲ ಸಹಜ. ಅಷ್ಟಾಗಿಯೂ ನನಗೂ ನಟನೆಯ ಇತಿ-ಮಿತಿಗಳು ಗೊತ್ತಿವೆ. ಯಾವತ್ತಿಗೂ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ಆಗುವ ಹಾಗೆ ನಟಿಸುವ ಮಾತೇ ಇಲ್ಲ...!

- ಕನ್ನಡದ ಚಿತ್ರ ಪ್ರೇಮಿಗಳಿಗೆ ನಟಿ ಹರಿಪ್ರಿಯಾ ನೀಡುವ ಭರವಸೆ ಇದು. ಇಷ್ಟಕ್ಕೂ ಈಗ ಅವರು ಈ ರೀತಿ ಭರವಸೆ ನೀಡುವುದಕ್ಕೆ ಕಾರಣವಾಗಿದ್ದು ‘ಎಲ್ಲಿದ್ದೇ ಇಲ್ಲಿ ತನಕ’ ಚಿತ್ರದಲ್ಲಿನ ಲಿಪ್‌ಲಾಕ್‌ ದೃಶ್ಯದ ವಿವಾದ.

ಸೃಜನ್‌ ಲೋಕೇಶ್‌ ಜತೆಗೆ ಹರಿಪ್ರಿಯಾ ನಾಯಕಿ ಆಗಿ ಅಭಿನಯಿಸಿರುವ ‘ಎಲ್ಲಿದ್ದೇ ಇಲ್ಲಿ ತನಕ’ ಚಿತ್ರವೀಗ ಹಾಡುಗಳ ಮೂಲಕ ಸದ್ದಿ ಮಾಡುತ್ತಿದೆ. ಚಿತ್ರದ ರೊಮ್ಯಾಂಟಿಕ್‌ ಹಾಡಿನ ಲಿರಿಕಲ್‌ ವಿಡಿಯೋ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆ ಹಾಡಿನ ಸನ್ನಿವೇಶವೊಂದರಲ್ಲಿ ನಟ ಸೃಜನ್‌ ಲೋಕೇಶ್‌ ಹಾಗೂ ಹರಿಪ್ರಿಯಾ ಲಿಪ್‌ಲಾಕ್‌ ಮಾಡಿದ್ದಾರೆ. ಇದೇ ದೃಶ್ಯಕ್ಕೀಗ ಚಿತ್ರಪ್ರೇಮಿಗಳಿಂದ ಪರ​​-ವಿರೋಧ ವ್ಯಕ್ತವಾಗಿದೆ. ಕೆಲವರು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ವಿರೋಧಿಸಿದ್ದಾರೆ. ‘ನಟನೆ ಹೆಸರಲ್ಲಿ ಲಿಪ್‌ಲಾಕ್‌ ಮಾಡುವುದು ಸರಿಯೇ’ ಎನ್ನುವುದು ವಿರೋಧಿಗಳ ವಾದ.

ವೈರಲ್ ಆಯ್ತು ಸೃಜನ್-ಹರಿಪ್ರಿಯಾ ಲಿಪ್ ಲಾಕ್.. ರೋಮ್ಯಾಂಟಿಕ್ ಹಾಡು ಇಂಪಾಗಿದೆ!

ಹರಿಪ್ರಿಯಾ ಈ ವಿವಾದಕ್ಕೀಗ ಪ್ರತಿಕ್ರಿಯೆ ನೀಡಿದ್ದಾರೆ. ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದವರಿಗೆ ಮೊದಲು ಧನ್ಯವಾದ ಹೇಳಿದ್ದಾರೆ. ಹಾಗೆಯೇ ಹಾಡಿನ ಸನ್ನಿವೇಶವನ್ನು ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ. ‘ಈ ಹಿಂದೆ ನಾನು ಅಭಿನಯಿಸಿದ್ದ ‘ರಿಕ್ಕಿ’ ಚಿತ್ರದಲ್ಲೂ ಇಂತಹದೊಂದು ಸೀನ್‌ ಇತ್ತು. ಆಗ ಮಾತನಾಡದವರು, ಟೀಕಿಸದೆ ಇದ್ದವರು, ಈಗ ಯಾಕೆ ಮಾತನಾಡುತ್ತಿದ್ದಾರೆನ್ನುವುದು ಅರ್ಥವಾಗುತ್ತಿಲ್ಲ. ಉದ್ದೇಶ ಪೂರ್ವಕವಾಗಿ ಟೀಕಿಸುವವರಿಗೆ ಉತ್ತರ ನೀಡುವ ಅಗತ್ಯವಿಲ್ಲ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ನಾನೊಬ್ಬ ಕಲಾವಿದೆ. ಒಂದು ಪಾತ್ರದ ಅಗತ್ಯಕ್ಕೆ ತಕ್ಕಂತೆ ನಟಿಸುವಾಗ ಇಷ್ಟುಚಿಕ್ಕ ವಿಷಯಗಳೆಲ್ಲ ಸಹಜ. ಅಷ್ಟಾಗಿಯೂ ನನಗೂ ನಟನೆಯ ಇತಿ-ಮಿತಿಗಳು ಗೊತ್ತಿವೆ. ಯಾವತ್ತಿಗೂ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ಆಗುವ ಹಾಗೆ ನಟಿಸುವ ಮಾತೇ ಇಲ್ಲ’ ಎಂದು ಭರವಸೆ ನೀಡಿದ್ದಾರಲ್ಲದೆ, ‘ಇದೊಂದು ರೊಮ್ಯಾಂಟಿಕ್‌ ಲವ್‌ ಸ್ಟೋರಿ ಸಿನಿಮಾ. ನಾನಿಲ್ಲಿ ಓರ್ವ ಮಾರ್ಡನ್‌ ಹುಡುಗಿ. ಪ್ರೀತಿಯ ತೀವ್ರತೆಗಳನ್ನು ತೋರಿಸುವಾಗ ಬರುವ ದೃಶ್ಯವದು. ಅದನ್ನು ಸನ್ನಿವೇಶಕ್ಕೆ ತಕ್ಕಂತೆ ನೋಡಬೇಕು. ಆದರೆ ಅದನ್ನು ಟೀಕಿಸುವ, ವಿರೋಧಿಸುವ ದೃಷ್ಟಿಯಲ್ಲಿ ನೋಡಿದರೆ ಅದು ಕೆಟ್ಟದಾಗಿ ಕಾಣುತ್ತದೆ’ ಎನ್ನುವುದು ಹರಿಪ್ರಿಯಾ ಅವರ ಸ್ಪಷ್ಟನೆ.

ಕುರೂಪಿಗೆ ಮರುಳಾದ್ರಾ ‘ರಾಣಿ ಅಮೃತಮತಿ’ ಹರಿಪ್ರಿಯಾ?

ನಟಿ ಹರಿಪ್ರಿಯಾ ‘ನೀರ್‌ದೋಸೆ’ ಚಿತ್ರದಲ್ಲೂ ತುಂಬಾನೆ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದರು. ಅದರಿಂದಲೂ ಟೀಕೆಗೆ ಒಳಗಾಗಿದ್ದರು. ಕೊನೆಗೆ ಚಿತ್ರದಲ್ಲಿನ ಅವರ ಅಭಿನಯಕ್ಕೆ ಮೆಚ್ಚುಗೆಯ ಮಹಾಪೂರವೇ ಸಿಕ್ಕಿತ್ತು. ಈಗಲೂ ಅವರು ಅಂತಹದೇ ವಿವಾದದಲ್ಲಿ ‘ಎಲ್ಲಿದ್ದೇ ಇಲ್ಲಿ ತನಕ’ಚಿತ್ರದ ಲಿಪ್‌ಲಾಕ್‌ ದೃಶ್ಯದ ಮೂಲಕ ಸಿಲುಕಿದ್ದಾರೆ. ಆದರೆ ಇಲ್ಲಿ ಅವರನ್ನು ಟೀಕಿಸಿದವರಿಗಿಂತ ಬೆಂಬಲಕ್ಕೆ ನಿಂತವರ ಸಂಖ್ಯೆ ಜಾಸ್ತಿಯಿದೆ ಎನ್ನುವುದು ವಿಶೇಷ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ತೂಗುದೀಪ The Devil Movie ವಿಮರ್ಶೆ ಮಾಡೋ ಹಾಗಿಲ್ಲ, ಕಾಮೆಂಟ್ಸ್‌ ಮಾಡಂಗಿಲ್ಲ: ಕೋರ್ಟ್‌ನಿಂದ ತಡೆ
Bigg Boss: ಮತ್ತೆ ರಕ್ಷಿತಾ ಶೆಟ್ಟಿ, ಗಿಲ್ಲಿ ನಟನನ್ನು ಟಾರ್ಗೆಟ್‌ ಮಾಡಿ ಕುಟುಕಿದ ಕಾವ್ಯ ಶೈವ! ಈ ರೀತಿ ಮಾಡೋದ್ಯಾಕೆ?