'ಯಶ್-19' ಸಮರ ತಯಾರಿ ಫೈನಲ್: ಗೋವಾ ಡ್ರಗ್ಸ್ ಮಾಫಿಯಾ ಕಥೆಯಲ್ಲಿ ರಾಕಿಭಾಯ್

By Govindaraj S  |  First Published Sep 13, 2023, 8:23 PM IST

ಯಶ್ 19ನೇ ಚಿತ್ರಕ್ಕೆ ಕಾಯ್ತಿರೋ ಅಭಿಮಾನಿಗಳ ಉಪವಾಸ  ಒಂದು ವರ್ಷ ಐದು ತಿಂಗಳಿಗೆ ಮುಗಿಯೋ ಹಾಗೆ ಕಾಣಿಸ್ತಿದೆ. ಇಷ್ಟು ದಿನ ನೆಕ್ಸ್ಟ್ ಸಿನಿಮಾ ಕಥೆ ಸೆಲೆಕ್ಷನ್ ಟೆನ್ಷನ್ನಲ್ಲಿದ್ದ ಯಶ್ಗೆ ಭರ್ಜರಿ ಕಥೆಯೇ ಸಿಕ್ಕಿದೆ. 


ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿ ಆಗಲೇ ಒಂದೂವರೆ ವರ್ಷ ಆಗ್ತಾ ಇದೆ. ಆದರೆ ಯಶ್ ಮಾತ್ರ ವೇಯ್ಟಿಂಗ್. ಹೊಸ ಸಿನಿಮಾ ಅನೌನ್ಸ್ ಆಗಿಲ್ಲ. ಅರ್ಜೆಂಟ್ ಮಾಡಲ್ಲ.. ಎಲ್ಲವೂ ಪಕ್ಕಾ ಆಗದೇ ಅಖಾಡಕ್ಕೆ ಇಳಿಯಲ್ಲ ಅಂತಿರೋ ಯಶ್, 19ನೇ ಸಿನಿಮಾಗೆ ಕಾಯಿಸ್ತಾನೇ ಇದ್ದಾರೆ. ಹಾಗಂತ ಸೈಲೆಂಟ್ ಆಗಿ ಸುಮ್ನೆ ಕೂತಿಲ್ಲ. ಈಗ ಆಲ್ ಸೆಟ್.. ಗೋ ಶೂಟ್ ಅಂತಿರೋ ಯಶ್ ಕಣ್ಣು ಇನ್ನೊಂದು ಮಾಫಿಯಾ ಸ್ಟೋರಿ ಕಡೆ ತಿರುಕ್ಕೊಂಡಿದೆ. ಯಶ್ ಮೊದಲಿನಿಂದಾನೂ ಹಾಗೆ.. ಒಂದು ಸಿನಿಮಾದಿಂದ ಒಂದು ಸಿನಿಮಾಗೆ ಯೋಚನೆ ಮಾಡೋ ಸ್ಟೈಲೇ ಡಿಫರೆಂಟ್. ಈಗಲೂ ಅಷ್ಟೇ, ದೊಡ್ಡದಾಗೆ ಅಖಾಡಕ್ಕೆ ಇಳಿದಿದ್ದಾರೆ. 

ಯಶ್ 19ನೇ ಚಿತ್ರಕ್ಕೆ ಕಾಯ್ತಿರೋ ಅಭಿಮಾನಿಗಳ ಉಪವಾಸ  ಒಂದು ವರ್ಷ ಐದು ತಿಂಗಳಿಗೆ ಮುಗಿಯೋ ಹಾಗೆ ಕಾಣಿಸ್ತಿದೆ. ಇಷ್ಟು ದಿನ ನೆಕ್ಸ್ಟ್ ಸಿನಿಮಾ ಕಥೆ ಸೆಲೆಕ್ಷನ್ ಟೆನ್ಷನ್ನಲ್ಲಿದ್ದ ಯಶ್ಗೆ ಭರ್ಜರಿ ಕಥೆಯೇ ಸಿಕ್ಕಿದೆ. ಕೆಜಿಎಫ್ ಧೂಳಿನಲ್ಲಿ ಚಿನ್ನದ ಬೆಳೆ ಬೆಳೆದಿದ್ದ ರಾಕಿ ಈ ಭಾರಿ ಗೋವಾ ಕಡಲ ಕಿನಾರೆಗೆ ಹಾರಿದ್ದಾರೆ. ಅಮ್ಮನಿಗಾಗಿ ಪ್ರಪಂಚದಲ್ಲಿರೋ ಚಿನ್ನವನ್ನೆಲ್ಲ ತಂದು ಕೊಡೋದಾಗಿ ಪ್ರಾಮಿಸ್ ಮಾಡಿ ಯುದ್ಧ ಮಾಡಿದ್ದ ರಾಕಿಭಾಯ್, ಈಗ ಡ್ರಗ್ಸ್ ಮಾಫಿಯಾ ಕಥೆ ಆಯ್ಕೆ ಮಾಡ್ಕೊಂಡಿದ್ದಾರೆ ಅನ್ನೋ ಸುದ್ದಿ ಕೇಳಿ ಬರ್ತಾ ಇದೆ. 60ರ ದಶಕದ ಕಥೆಗೆ ಫೈನಲ್ ಟಚ್ ಕೊಟ್ಟಾಗಿದೆ. 

Tap to resize

Latest Videos

ಗಣೇಶ ಹಬ್ಬದಲ್ಲಿ ಸಿಹಿ ಕಡುಬು ಕೊಡ್ತಾರೆ ರಾಕಿ?: ಯಶ್ 19ನೇ ಸಿನಿಮಾ ನಿರ್ಮಾಣ ಮಾಡೋದು ಯಾರು?

ಇನ್ನೇನಿದ್ರೂ ಸಿನಿಮಾ ಘೋಷಣೆ ಅಷ್ಟೇ ಬಾಕಿ. ಯಶ್ ಅವರಿಗೆ ಗೋವಾ ಅತ್ತೆ ಮನೆ. ಯಾಕಂದ್ರೆ ರಾಧಿಕಾ ಪಂಡಿತ್ ಹುಟ್ಟೂರು ಗೋವಾ. ಎಲ್ಲ ಖುಷಿಗಳಿಗೆ ತವರೂರು ಗೋವಾ. ಅದೇ ಗೋವಾದ ಪುಟ್ಟ ಊರಿನಲ್ಲಿ ನಡೆಯೋ ಕಥೆಯನ್ನ ಜಗತ್ತಿಗೇ ಹೇಳೋಕೆ ಹೊರಟಿದ್ದಾರೆ ಅನ್ನೋದು ಸುವರ್ಣ ನ್ಯೂಸ್ಗೆ ಸಿಕ್ಕ ಇನ್ಫರ್ಮೇಷನ್. ಗೋವಾ ಟು ರಷ್ಯಾದವರೆಗೆ ಚಾಚಿಕೊಳ್ಳೋ ಸಿನಿಮಾಕ್ಕೆ ಮಲಯಾಳಂ ಡೈರೆಕ್ಟರ್ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಅಧಿಕೃತವಾಗಿ ಘೋಷಣೆ ಆಗಿಲ್ಲ. ಆದರೆ ಇದೇ ಫೈನಲ್ ಅನ್ನೋದು ಪಕ್ಕಾ ಸುದ್ದಿ. 

ಪಾರ್ಟಿ ಪಾರ್ಟಿ ಡಾಲಿ ಧನಂಜಯ್ ಫುಲ್ ಪಾರ್ಟಿ: ಪಾರ್ಟಿಯಲ್ಲಿ ಯಶ್, ರಕ್ಷಿತ್, ಪ್ರೇಮ್, ನಿಖಿಲ್

ಯಶ್ 19 ಸಿನಿಮಾಗೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕಿಯನ್ನ ಆಯ್ಕೆ ಮಾಡಿಕೊಂಡಿರುವ ಯಶ್, ಈ ಚಿತ್ರದ ಮೂಲಕ ನಿರ್ಮಾಣಕ್ಕೂ ಇಳಿಯಲಿದ್ದಾರೆ ಅನ್ನೋ ಗುಟ್ಟು ಹೊರಬಿದ್ದಿದೆ. ಗೌರಿ ಗಣೇಶ ಹಬ್ಬದ ದಿನವೇ ಹೊಸ ಸಿನಿಮಾ ಅನೌನ್ಸ್ ಮಾಡೋಕೆ ಯಶ್ ರೆಡಿಯಾಗಿದ್ದಾರೆ. ಹಬ್ಬಕ್ಕೆ ಇನ್ನೊಂದು ವಾರವೂ ಇಲ್ಲ. ಆದರೆ ಸುದ್ದಿಯಂತೂ ಜೋರಾಗಿದೆ. ಸುದ್ದಿ ಪಕ್ಕಾ ಆದ್ರೆ ಭಾರತೀಯರೆಲ್ಲ ಗಣಪತಿ ಬಪ್ಪಾ ಮೋರಯಾ ಅಂತಾ ಕುಣಿದ್ರೆ, ಯಶ್ ಫ್ಯಾನ್ಸ್ ಎಲ್ಲ ರಾಕಿಂಗ್ ಸ್ಟಾರ್ ಬಪ್ಪ ಮೋರಯಾ ಅಂತಾ ಪಟಾಕಿ ಹೊಡೆಯೋದು ಗ್ಯಾರಂಟಿ.

click me!