ಕೆಜಿಎಫ್‌ ಡಿಜಿಟಲ್‌ ಹಕ್ಕು 18 ಕೋಟಿಗೆ ಮಾರಾಟ

Published : Dec 27, 2018, 08:50 AM ISTUpdated : Dec 27, 2018, 11:16 AM IST
ಕೆಜಿಎಫ್‌ ಡಿಜಿಟಲ್‌ ಹಕ್ಕು 18 ಕೋಟಿಗೆ ಮಾರಾಟ

ಸಾರಾಂಶ

ಪ್ರಶಾಂತ್‌ ನೀಲ್‌ ನಿರ್ದೇಶನದ ‘ಕೆಜಿಎಫ್‌’ ಚಿತ್ರ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿದೆ. ಐದು ಭಾಷೆಗಳಲ್ಲೂ ದಾಖಲೆ ಕಲೆಕ್ಷನ್‌ ಮಾಡಿದ ನಂತರ ಈಗ ಡಿಜಿಟಲ್‌ ಹಕ್ಕು ಮಾರಾಟದಲ್ಲಿ ದಾಖಲೆ ಮಾಡಿದೆ. ಕೆಜಿಎಫ್‌ ಡಿಜಿಟಲ್‌ ಹಕ್ಕು ರು.18 ಕೋಟಿಗೆ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ. ದಾಖಲೆ ಮೊತ್ತ ನೀಡಿ ಡಿಜಿಟಲ್‌ ಹಕ್ಕು ಖರೀದಿಸಿರುವುದು ಅಮೆಜಾನ್‌ ಪ್ರೈಮ್‌.

ಇತ್ತೀಚೆಗೆ ಕನ್ನಡ ಸಿನಿಮಾಗಳ ಡಿಜಿಟಲ್‌ ಹಕ್ಕುಗಳು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುತ್ತಿದೆ. ಆದರೆ ‘ಕೆಜಿಎಫ್‌’ ಚಿತ್ರದ ಮಾರಾಟ ಎಲ್ಲವನ್ನೂ ಮೀರಿಸಿ ಮುಂದೆ ಹೋಗಿದೆ. ಕಂಡುಕೇಳರಿಯದಷ್ಟುಮೊತ್ತಕ್ಕೆ ಮಾರಾಟವಾಗಿರುವುದು ಕನ್ನಡದ ಮತ್ತು ಕನ್ನಡಿಗರ ಶಕ್ತಿಯನ್ನು ಡಿಜಿಟಲ್‌ ಜಗತ್ತಿಗೆ ತೋರಿಸಿದಂತಾಗಿದೆ. ಈ ಚಿತ್ರದಿಂದಾಗಿ ಡಿಜಿಟಲ್‌ ಮಾರಾಟದ ವ್ಯಾಪ್ತಿ ಹಿಗ್ಗಿದಂತಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದರಿಂದ ನಿಚ್ಚಳವಾಗಿದೆ.

ಅಮೆಜಾನ್‌, ನೆಟ್‌ಫ್ಲಿಕ್ಸ್‌ಗಳು ಸಿನಿಮಾ ಖರೀದಿಸುವುದರಿಂದ ಸಿನಿಮಾ ನಿರ್ಮಿಸುವವರಿಗೆ ಹೆಚ್ಚಿನ ಬಲ ಸಿಕ್ಕಿದೆ. ಇದೀಗ ಹೆಚ್ಚು ಮೊತ್ತಕ್ಕೆ ಸಿನಿಮಾ ಮಾರಾಟವಾಗುತ್ತಿರುವುದು ಜಾಸ್ತಿ ಹಣ ಹೂಡಲು ಧೈರ್ಯ ತುಂಬಿದಂತಾಗಿದೆ. ಅಮೆಜಾನ್‌ ಪ್ರೈಮ್‌ ಸಂಸ್ಥೆ ‘ಕೆಜಿಎಫ್‌’ನ ಐದು ಭಾಷೆಯ ಚಿತ್ರಗಳನ್ನೂ ಖರೀದಿಸಿದೆ ಎನ್ನಲಾಗಿದೆ. ಇದು ಕನ್ನಡದ ಮಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಧೈರ್ಯ ತುಂಬುವುದಕ್ಕೂ ಸಹಾಯ ಮಾಡಿದಂತಾಗಿದೆ. ಈ ಎಲ್ಲಾ ಕಾರಣದಿಂದಾಗಿ ವಿಜಯ್‌ ಕಿರಗಂದೂರು ನಿರ್ಮಾಣದ, ಯಶ್‌ ಅಭಿನಯದ ‘ಕೆಜಿಎಫ್‌’ ಚಿತ್ರ ಮಹಾಸಾಧನೆ ಮಾಡಿದೆ ಎನ್ನಬಹುದು.

ಇದರ ನಡುವೆಯೇ ಹಿಂದಿಯಲ್ಲಿ ಐದು ದಿನಕ್ಕೆ ಕೆಜಿಎಫ್‌ 16 ಕೋಟಿ ಗಳಿಸಿದೆ ಎಂದು ಹಿಂದಿನ ಅಧಿಕೃತ ಗಳಿಕಾತಜ್ಞ ತರಣ್‌ ಆದಶ್‌ರ್‍ ಟ್ವೀಟ್‌ ಮಾಡಿದ್ದಾರೆ.

ಬಾಕ್ಸಾಫೀಸ್‌ನಲ್ಲಿ 200 ಕೋಟಿ ಬಾಚುತ್ತಾ ಕೆಜಿಎಫ್?

ಕನ್ನಡದಲ್ಲಿ ಕಲರ್ಸ್‌, ಹಿಂದಿಯಲ್ಲಿ ಸೋನಿ

ಮೊದಲೆಲ್ಲಾ ಡಿಜಿಟಲ್‌ ಹಕ್ಕು ಮತ್ತು ಸ್ಯಾಟಲೈಟ್‌ ಹಕ್ಕು ಒಂದೇ ಸಂಸ್ಥೆಗೆ ನೀಡುವ ಪರಿಪಾಠ ಇತ್ತು. ಅದರಿಂದ ಒಂದೇ ಮೊತ್ತಕ್ಕೆ ಎರಡೂ ಹಕ್ಕುಗಳು ಮಾರಾಟವಾಗುತ್ತಿದ್ದವು. ಆದರೆ ಈಗ ಆ ಪರಿಪಾಠ ಬದಲಾಗಿದೆ. ಡಿಜಿಟಲ್‌ ರೈಟ್‌ ಬೇರೆ, ಸ್ಯಾಟಲೈಟ್‌ ಹಕ್ಕು ಬೇರೆ ಅನ್ನುವ ಥರ ಆಗಿದೆ. ಅಮೆಜಾನ್‌ ಪ್ರೈಮ್‌ ಕೆಜಿಎಫ್‌ನ ಡಿಜಿಟಲ್‌ ಹಕ್ಕು ಪಡೆದುಕೊಂಡಿದೆ. ಕನ್ನಡ ಚಿತ್ರದ ಸ್ಯಾಟಲೈಟ್‌ ಹಕ್ಕನ್ನು ಕಲರ್ಸ್‌ ಕನ್ನಡ ದಾಖಲೆ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ. ಕೆಜಿಎಫ್‌ನ ಹಿಂದಿ ಅವತರಣಿಕೆಯನ್ನು ಸೋನಿ ಚಾನೆಲ್‌ ಖರೀದಿಸಿದೆ. ಅದೂ ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಅಲ್ಲಿಗೆ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕಿನಿಂದಾಗಿಯೇ ಚಿತ್ರದ ಬಜೆಟ್‌ ಮೊತ್ತ ವಾಪಸ್‌ ಬರಲಿದೆ ಎನ್ನಲಾಗಿದೆ. ಆ ಕಾರಣದಿಂದಲೂ ಕೆಜಿಎಫ್‌ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮೈಲಿಗಲ್ಲು.

ಕೆಜಿಎಫ್ ನೋಡಿ ಯಶ್‌ಗೆ ಸುಮಲತಾ ವಿಶ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?
ಕುಟುಂಬವೇ ಹೆಮ್ಮೆಪಡುವಂತೆ ಮಾಡಿದ Kiccha Sudeep ಮಗಳು ಸಾನ್ವಿ! ಇದಪ್ಪಾ..ಸಾಧನೆ ಅಂದ್ರೆ..!