ಮದ್ವೆಯಾಗೋಕೆ ದೀಪಿಕಾಳಂತ ಹುಡುಗಿ ಬೇಕು ಎಂದ ಬಾಲಿವುಡ್ ನಟ: ಕಾರಣ ಇದು

By Suvarna News  |  First Published Jun 4, 2020, 1:37 PM IST

ಬಾಲಿವುಡ್ ನಟ ಕಾರ್ತಿಕ್ ಆರ್ಯನ್‌ಗೆ ದೀಪಿಕಾ ಅಂದ್ರೆ ಇಷ್ಟಾನಾ..? ಹೌದು.. ಹೀಗೊಂದು ಮಾತನ್ನು ಕಾರ್ತಿಕ್ ಸ್ವತಃ ಹೇಳಿದ್ದಾರೆ. ದೀಪಿಕಾ ಇಷ್ಟಾಗೋದಕ್ಕೆ ಕಾರಣವನ್ನೂ ಹೇಳಿದ್ದಾರೆ. ಏನಿದು ಸೀಕ್ರೇಟ್ ಲವ್..? ಇಲ್ಲಿ ಓದಿ.


ನಟ ಕಾರ್ತಿಕ್ ಆರ್ಯನ್ ದೀಪಿಕಾ ಬಗ್ಗೆ ತಮ್ಮ ಇಷ್ಟವನ್ನು ಅಡಗಿಸಿಟ್ಟವರಲ್ಲ. ಇತ್ತೀಚೆಗೆ ಇನ್‌ಸ್ಟಾಗ್ರಾಂ ಲೈವ್‌ ಸೆಷನ್‌ನಲ್ಲಿ ಈ ವಿಚಾರವನ್ನು ಅವರೇ ಬಹಿರಂಗಪಡಿಸಿದ್ದಾರೆ.

ಮದುವೆಯಾಗೋದಾದ್ರೆ ದೀಪಿಕಾ ಪಡುಕೋಣೆಯಂಥಾ ಹುಡುಗಿಯೇ ಬೇಕು ಎಂದಿರುವ ಕಾರ್ತಿಕ್ ಆರ್ಯನ್ ಅದಕ್ಕೆ ತಾವು ಕೊಡೋ ಕಾರಣವನ್ನು ಫ್ಯಾನ್ಸ್‌ ಮುಂದೆ ಬಿಚ್ಚಿಟ್ಟಿದ್ದಾರೆ.

Tap to resize

Latest Videos

ಅಯ್ಯಯ್ಯೋ... ಸಾರಾರನ್ನು ನೀರಿಗೆ ತಳ್ಳಿಯೇ ಬಿಟ್ರಾ ಕಾರ್ತಿಕ್ ಆರ್ಯನ್?

ಇನ್‌ಸ್ಟಾ ಲೈವ್‌ನಲ್ಲಿದ್ದ ಕಾರ್ತಿಕ್‌ಗೆ ನೀವು ಮದುವೆಯಾಗೋ ಹುಡುಗಿ ಹೇಗಿರಬೇಕು ಎಂಬ ಪ್ರಶ್ನೆಯೊಂದು ಸಿಕ್ಕಿತ್ತು. ಇದಕ್ಕೆ ಉತ್ತರಿಸಿದ ಅವರು, ನಾನು ದೀಪಿಕಾ ಪಡುಕೋಣೆಯಂತ ಹುಡುಗಿಯನ್ನು ಮದುವೆಯಾಗಬೇಕು. ತನ್ನ ಪತಿಯನ್ನು ಹೆಮ್ಮೆಯಿಂದ ತೋರಿಸುವಂತಹ ಹುಡುಗಿಯಾಗಬೇಕು ಎಂದಿದ್ದಾರೆ.

ನಟ ರಣವೀರ್‌ ಸಿಂಗ್‌ನ್ನು ವಿವಾಹವಾಗಿರುವ ದೀಪಿಕಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ. ನೀವು ಕತ್ರೀನಾ ಜೊತೆ ಯಾವಾಗ ತೆರೆ ಹಂಚಿಕೊಳ್ತೀರೀ ಎಂ ಪ್ರಶ್ನೆಗೆ ಉತ್ತರಿಸಿ, ನಾನು ದೀಪಿಕಾ ಜೊತೆ ತುಂಬಾ ಚೆನ್ನಾಗಿ ಕಾಣಬಹುದು. ನಿಮಗೆ ನಮ್ಮ ಜೋಡಿ ಇಷ್ಟವಾಗಬಹುದೇ ಎಂದು ಹಾಸ್ಯದ ಜೊತೆಗೇ ಮನಸಿನ ಹಂಬಲವನ್ನೂ ತಿಳಿಸಿದ್ದಾರೆ.

#DheemeDheemeChallenge ಗೆ ನಟನ ಸಹಾಯ ಕೇಳಿದ ದೀಪಿಕಾ ಪಡುಕೋಣೆ

ಕಾರ್ತಿಕ್ ಆರ್ಯನ್ ಅವರ ಪತಿ, ಪತ್ನಿ ಓರ್ ವೋ ಸಿನಿಮಾ ಪ್ರಮೋಷನ್ ಸಂದರ್ಭ ಧೀಮೆ, ಧೀಮೆ ಸಾಂಗ್‌ ಸ್ಟೆಪ್ ಕಲಿಸಿಕೊಡುವಂತೆ ದೀಪಿಕಾ ಕಾರ್ತಿಕ್‌ಗೆ ಕೇಳಿದ್ದರು. ಇಬ್ಬರೂ ಫ್ಯಾನ್ಸ್‌ಗಾಗಿ ಡ್ಯಾನ್ಸ್‌ ಕೂಡಾ ಮಾಡಿದ್ದರು.

click me!