ಅವರೇ ನನ್ನ 'ದ್ರೋಣಾಚಾರ್ಯರು' ಎಂದ ರಿಷಬ್ ಶೆಟ್ಟಿ; 'ಕಾಂತಾರ' ಸೃಷ್ಟಿಕರ್ತನ 'ಗುರು' ಇವರೇ ನೋಡಿ!

Published : Oct 16, 2025, 07:53 PM IST
Rishab Shetty

ಸಾರಾಂಶ

'ನಾವೆಲ್ಲಾ ಹೈಸ್ಕೂಲ್, ಪಿಯುಸಿ ಹಾಗೂ ಕಾಲೇಜ್ ಓದುತ್ತಿದ್ದಾಗ ನಾವು ಅವರ ಸಿನಿಮಾ ನೋಡುತ್ತಿದ್ದೆವು. ಅವರು ನಮ್ಮ ಊರಾದ ಕುಂದಾಪುರದವರೇ ಆಗಿದ್ದರಿಂದ, ಹಾಗೂ ಅವರು ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದರಿಂದ  ಅವರು ನಮ್ಮ ಆರಾಧ್ಯ ದೈವ ಎನ್ನುವಂತೆ ಆಗಿದ್ದರು.

ಕುಂದಾಪುರದಲ್ಲಿ ರಿಷಬ್ ಶ್ಟೆಟು ಹೇಳಿದ್ದೇನು?

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರನ್ನು 'ದ್ರೋಣಾಚಾರ್ಯ' ಎಂದು ಕರೆದಿದ್ದಾರೆ 'ಕಾಂತಾರ ಖ್ಯಾತಿಯ ನಟ-ನಿರ್ದೇಶಕ ರಿಷಬ್ ಶೆಟ್ಟಿ. 'ಕಾಂತಾರ ಚಾಪ್ಟರ್ 1' ಸಿನಿಮಾ ಸದ್ಯ ಜಗತ್ತಿನೆಲ್ಲೆಡೆ ಸಖತ್ ಸೌಂಡ್ ಮಾಡುತ್ತ, ಹಳೆಯ ಎಲ್ಲಾ ದಾಖಲೆಗಳನ್ನೆಲ್ಲ ಮುರಿಯುತ್ತ ಸಾಗುತ್ತಿದೆ. ಈ ವೇಳೆ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು (Rishab Shetty) ಸಾಕಷ್ಟು ಕಡೆ ತಮ್ಮ ಲೈಫ್ ಜರ್ನಿ ಹಾಗೂ ಬಾಲ್ಯದ ಬಗ್ಗೆ ಮಾತನ್ನಾಡುತ್ತಿದ್ದಾರೆ. ಈ ಸಮಯದಲ್ಲಿ ರಿಷಬ್ ಶೆಟ್ಟಿಯವರು ತಮ್ಮ 'ಗುರುಗಳು' ಯಾರು, ಯಾಕೆ ಎಂಬ ಬಗ್ಗೆ ಹೇಳಿದ್ದಾರೆ.

ರಿಷಬ್ ಶೆಟ್ಟಿಯವರು ತಮ್ಮ ಹುಟ್ಟೂರಾದ ಕುಂದಾಪುರದಲ್ಲಿ ಇತ್ತೀಚೆಗೆ ಮಾತನ್ನಾಡುತ್ತ 'ನಾವೆಲ್ಲಾ ಹೈಸ್ಕೂಲ್, ಪಿಯುಸಿ ಹಾಗೂ ಕಾಲೇಜ್ ಓದುತ್ತಿದ್ದಾಗ ನಾವು ಉಪೇಂದ್ರ ಅವರ ಸಿನಿಮಾ ನೋಡುತ್ತಿದ್ದೆವು. ಅವರು ನಮ್ಮ ಊರಾದ ಕುಂದಾಪುರದವರೇ ಆಗಿದ್ದರಿಂದ ಸಹಜವಾಗಿಯೇ ಅವರು ನಮ್ಮ ಆರಾಧ್ಯ ದೈವ ಎನ್ನುವಂತೆ ಆಗಿದ್ದರು.

ಅವರು ಬಿಟ್ಟಿದ್ದ ಉದ್ದ ಕೂದಲು, ಪ್ಯಾಂಟ್ ಎತ್ತಿ ಹಿಡಿದುಕೊಂಡು 'ಬರಿ ಓಳು ಬರಿ ಓಳು' ಅಂತ ಆ ಕಡೆ ಈ ಕಡೆ ನೋಡುತ್ತಿದ್ದರೆ ನಮಗೆ ಅವರೇ ಆದರ್ಶವಾಗಿ ಬಿಟ್ಟಿದ್ದರು. ಉಪೇಂದ್ರ ಅವರೇ ನನಗೆ 'ದ್ರೋಣಾಚಾರ್ಯರು' ಎಂದಿದ್ದಾರೆ ನಟ-ನಿರ್ದೇಶಕರಾಗಿ ಇದೀಗ ವಿಶ್ವವಿಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ. ಅವರಿಗೆ ಕಾಶೀನಾಥ್ ಗುರುಗಳು ಎಂದಿದ್ದಾರೆ, ಆದರೆ ನಮಗೆ ಉಪೇಂದ್ರ ಅವರೇ ಗುರುಗಳು ಎಂದಿದ್ದಾರೆ ರಿಷಬ್ ಶೆಟ್ಟಿಯವರು.

ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ

ಹೌದು, ಮಂಗಳೂರು ಉಡುಪಿ-ಕುಂದಾಪುರ ಮೂಲದ ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರು ಹಲವರ ಪಾಲಿಗೆ ಗುರು. ಕಾರಣ, ಅಂದಿನ ಕಾಲದಲ್ಲಿ ಆ ಕಡೆಯಿಂದ ಬಂದವರಲ್ಲಿ ಉಪೇಂದ್ರ ಅವರು ತುಂಬಾ ಖ್ಯಾತಿ ಪಡೆದಿದ್ದರು ಜೊತೆಗೆ, ಭಾರೀ ಕ್ರೇಜ್ ಹಾಗೂ ಟ್ರೆಂಡ್ ಹುಟ್ಟುಹಾಕಿದ್ದರು. ಇದೀಗ ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಕೂಡ ತಮ್ಮ ಗುರುಗಳು ಉಪೇಂದ್ರ ಎಂದಿದ್ದಾರೆ.

ಆ ಮೂಲಕ ನಟ ಉಪೇಂದ್ರ ಅವರು ಅಂದು, ಆ ಊರಿನ ಕಡೆಯವರಿಗೆ ಆರಾಧ್ಯ ದೈವವಾಗಿದ್ದರು ಎಂಬುದಂತೂ ಪಕ್ಕಾ ಆಯ್ತು. ಆ ಕಡೆಯವರಿಗೆ ಅಂತಲ್ಲ, ಇಡೀ ಕನ್ನಡನಾಡು ಉಪೇಂದ್ರ ಅವರಿಗೆ ಹುಚ್ಚಾಗಿತ್ತು. ಈಗಲೂ ಕೂಡ ಅವರಿಗೆ ಹಲವು ಫ್ಯಾನ್ಸ್ ಇದ್ದಾರೆ. ಕೆಲವರಿಗೆ ಅವರು ದ್ರೋಣಾಚಾರ್ಯರೂ ಆಗಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಸಿನಿಮಾ

ಅಂದಹಾಗೆ, ರಿಷಬ್ ಶೆಟ್ಟಿಯವರ 'ಕಾಂತಾರ ಚಾಪ್ಟರ್ 1' ಸಿನಿಮಾ ಜಗತ್ತಿನೆಲ್ಲೆಡೆ 7 ಬಾಷೆಗಳಲ್ಲಿ 7000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲಿ ಈ ವರ್ಷದ ಅತೀ ಹೆಚ್ಚಿನ ಗಳಿಕೆಯ ಎರಡನೇ ಸಿನಿಮಾವಾಗಿ ಕಾಂತಾರ ಚಾಪ್ಟರ್ 1ಇದೆ. ಮೊದಲನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ 'ಛಾವಾ' ಸಿನಿಮಾ ಇದೆ. ಆದರೆ, ಛಾವಾ ಸಿನಿಮಾವನ್ನು ಇದೇ ವಾರದಲ್ಲಿ ಹಿಂದಿಕ್ಕಿ 'ಕಾಂತಾರ-1' ಚಿತ್ರವು ನಂಬರ್ ಒನ್ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಒಟ್ಟಿನಲ್ಲಿ ಉಪೇಂದ್ರ ಶಿಷ್ಯ ರಿಷಬ್ ಶೆಟ್ಟಿಯವರು ಗುರುಗಳನ್ನೂ ಮೀರಿಸಿದ ಶಿಷ್ಯರಾಗಿ ಜಗತ್ತಿನಾದ್ಯಂತ ಹೆಸರು ಮಾಡುತ್ತಿದ್ದಾರೆ ಎನ್ನಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ