ವೈರಲ್ ಆಯ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪೋಸ್ಟ್; ಏನದು 'ಅಪ್ಪು' ಮ್ಯಾಟರ್ ನೋಡಿ!

Published : Oct 16, 2025, 05:26 PM IST
Ashwini Puneeth Rajkumar

ಸಾರಾಂಶ

'ಕರ್ನಾಟಡಕ ರತ್ನ' ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ. ಆದರೆ, ಅವರ ನೆನಪುಗಳು ಶಾಶ್ವತವಾಗಿದೆ. ಪುನೀತ್ ಅವರು ಕೊನೆಯದಾಗಿ ನಟಿಸಿರುವ 'ಗಂಧದ ಗುಡಿ' ಕಿರುಚಿತ್ರವನ್ನು ಕೂಡ ಇದೇ ಪಿಆರ್‌ಕೆ ಪ್ರೊಡಕ್ಷನ್ ಮೂಲಕ ಬಿಡುಗಡೆ ಮಾಡಲಾಗಿದೆ.

ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಪೋಸ್ಟ್

ಅಶ್ವಿನಿ ಪುನೀತ್‌ ರಾಜ್‌ಕುಮಾರ್ (Ashwini Puneeth Rajkumar) ಅವರು ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅದರಲ್ಲಿ ಅವರು "ಅಭಿಮಾನಿಗಳಿಂದ, ಅಭಿಮಾನಿಗಳಿಗಾಗಿ.. ಅಪ್ಪು ಕನಸೊಂದು ನನಸಾಗುತ್ತಿದೆ.. ಹೊಸಬೆಳಕೊಂದು ಮತ್ತೆ ಮೂಡಲಿದೆ.. ಒಂದು ಪವರ್‌ಫುಲ್ ಬೆಳಕು.. ಸೂರ್ಯನೊಬ್ಬ, ಚಂದ್ರನೊಬ್ಬ.. ರಾಜನೂ ಒಬ್ಬ.. ಅಭಿಮಾನ, ನಗು, ನೆನಪುಗಳೆಲ್ಲಾ ಒಂದೇ ವೇದಿಕೆಯಲ್ಲಿ ಸೇರುವ ಸಮಯ.."ಎಂದು ಹೇಳುವ ಮೂಲಕ ಬಹಳಷ್ಟು ಕುತೂಹಲ ಮೂಡಿಸಿದ್ದಾರೆ. ಹಾಗಿದ್ದರೆ ಅದೇನು?

ಟೀಸರ್ ಮೂಲಕ ಟ್ರೇಲರ್ ಬಗ್ಗೆ ಮಾಹಿತಿ

ಹೌದು, ಟೀಸರ್ ಮೂಲಕ ಟ್ರೇಲರ್ ಬಗ್ಗೆ ಮಾಹಿತಿ ನೀಡಿದ್ದಾರೆ ದಿವಂಗತ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ . ಹಾಗಿದ್ದರೆ ಟ್ರೇಲರ್ ಏನಕ್ಕೆ ಬರ್ತಿದೆ? ಅದು appu PRK App. ಅಂದ್ರೆ, Appu PRK APP' ಲಾಂಚ್ ಆಗ್ತಿದೆ. ಹೌದು, ಇದೇ 18 ಅಕ್ಟೋಬರ್ 2025 ರಂದು (18 October 2025) ಶನಿವಾರ ಅಪ್ಪು ಪಿಆರ್‌ಕೆ ಆಪ್ ಬಿಡುಗಡೆ ಆಗಲಿದ್ದು, ಅದನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ಟೀಸರ್ ಪೋಸ್ಟ್ ಮೂಲಕ ಬಹಿರಂಗ ಮಾಡಿದ್ದಾರೆ.

ಹೌದು, ಡಾ ರಾಜ್‌ಕುಮಾರ್ ಮಗ, ಕನ್ನಡದ ನಟ ಹಾಗೂ 'ಕರ್ನಾಟಡಕ ರತ್ನ' ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ. ಆದರೆ, ಅವರ ನೆನಪುಗಳು ಶಾಶ್ವತವಾಗಿದೆ. ಪುನೀತ್ ಅವರು ಕೊನೆಯದಾಗಿ ನಟಿಸಿರುವ 'ಗಂಧದ ಗುಡಿ' ಕಿರುಚಿತ್ರವನ್ನು ಕೂಡ ಇದೇ ಪಿಆರ್‌ಕೆ ಪ್ರೊಡಕ್ಷನ್ ಮೂಲಕ ಬಿಡುಗಡೆ ಮಾಡಲಾಗಿದೆ. ಇದೀಗ ಅಪ್ಪು ಪಿಆರ್‌ಕೆ ಆಪ್ ಮೂಲಕ ನಿಧನರಾಗಿರುವ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳು ಹಾಗೂ ಅವರ ಸಮಾಜಸೇವೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.

ಪಿಆರ್‌ಕೆ ಪ್ರೊಡಕ್ಷನ್ ಲಾಂಚ್

ಡಾ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಆ ಕುಟುಂಬದ ಅಭಿಮಾನಿಗಳು ಅಂದು (18 October 2025) ಅಪ್ಪು ಪಿಆರ್‌ಕೆ ಪ್ರೊಡಕ್ಷನ್ ಲಾಂಚ್ ಮಾಡಲಿರುವ ಅಪ್ಪು ಪಿಆರ್‌ಕೆ ಆಪ್ ಈವೆಂಟ್‌ಗೆ ಹಾಜರಿ ಹಾಕಲಿದ್ದಾರೆ. ಅದೇ ರೀತಿ, ಆ ಬಳಿಕ ಅಪ್‌ಅನ್ನು ಬಳಕೆ ಮಾಡಬಹುದು. ಇದು ಅಪ್ಪು ಅಭಿಮಾನಿಗಳು ಹಾಗೂ ದೊಡ್ಮನೆ ಫ್ಯಾನ್ಸ್‌ ಪಾಲಿಗೆ ಸಂತಸದ ಸುದ್ದಿ ಎನ್ನಬಹುದು. ಒಟ್ಟಿನಲ್ಲಿ, ಇದೀಗ ಅಕ್ಟೋಬರ್ 18ರಂದು ಪುನೀತ್ ರಾಜ್‌ಕುಮಾರ್ ಅವರ ನೆನಪಿಗಾಗಿ ಹೊಸ ಹಾಗೂ ಇಂದಿನ ಟ್ರೆಂಡ್‌ಗೆ ಅನುಕೂಲಕರ ಹಾಗೂ ತಾಂತ್ರಿಕವೂ ಆಗಿರುವ ಆಪ್‌ ಬಿಡುಗಡೆ ಆಗಲಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!