ಕಪಿಲ್ ಶರ್ಮಾ ಮಾಲೀಕತ್ವದ ಕಾಪ್ಸ್ ಕೆಫೆ ಮೇಲೆ ಮತ್ತೆ ಗುಂಡಿನ ದಾಳಿ

Published : Oct 16, 2025, 07:50 PM IST
kapil sharma cafe attacked

ಸಾರಾಂಶ

Kapil Sharma cafe: ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ಕೆಫೆಯ ಮೇಲೆ ದುಷ್ಕರ್ಮಿಗಳು ಮತ್ತೊಮ್ಮೆ ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ 4 ತಿಂಗಳಲ್ಲಿ ಇದು 3ನೇ ದಾಳಿಯಾಗಿದ್ದು, ಲಾರೆನ್ಸ್ ಬಿಸ್ಣೋಯ್ ಗ್ಯಾಂಗ್‌ನ ಸದಸ್ಯರಾದ ಗೋಲ್ಡಿ ಧಿಲ್ಲೊನ್ ಮತ್ತು ಕುಲ್ದೀಪ್ ಸಿಧು ಈ ದಾಳಿ ಹೊಣೆ ಹೊತ್ತುಕೊಂಡಿದ್ದಾರೆ.

ಕಪಿಲ್ ಶರ್ಮಾ ಕೆನಡಾ ಕೆಫೆ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ನವದೆಹಲಿ: ದಿ ಕಪಿಲ್ ಶರ್ಮಾ ಶೋ ಖ್ಯಾತಿಯ ಕಾಮಿಡಿಯನ್ ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ಕೆಫೆಯ ಮೇಲೆ ದುಷ್ಕರ್ಮಿಗಳು ಮತ್ತೆ ಗುಂಡಿನ ದಾಳಿ ನಡೆಸಿದ್ದಾರೆ. ಕಳೆದ 4 ತಿಂಗಳಲ್ಲಿ ನಡೆದಿರುವ 3ನೇ ದಾಳಿ ಇದಾಗಿದೆ. ಕೆನಡಾದ ಸರ್ರೆಯಲ್ಲಿರುವ ಕಪಿಲ್ ಶರ್ಮಾ ಅವರ ಕಾಪ್ಸ್ ಕೆಫೆಯಲ್ಲಿ ಈ ಘಟನೆ ನಡೆದಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಗ್ಯಾಂಗ್‌ಸ್ಟಾರ್ ಗೋಲ್ಡ್ ಧಿಲ್ಲೊನ್ ಹಾಗೂ ಕುಲ್ದೀಪ್ ಸಿಧು ಅವರು ಈ ದಾಳಿಯ ಹೊಣೆ ಹೊತ್ತಿದ್ದಾರೆ ಇವರಿಬ್ಬರು ಲಾರೆನ್ಸ್ ಬಿಸ್ಣೋಯ್ ಗ್ಯಾಂಗ್‌ನ ಭಾಗವಾಗಿದ್ದು, ಈ ದಾಳಿಯನ್ನು ತಾವೇ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ದಾಳಿಯ ಹೊಣೆ ಹೊತ್ತುಕೊಂಡ ಧಿಲ್ಲೊನ್ ಹಾಗೂ ಸಿಧು

ಕಾಪ್ಸ್ ಕೆಫೆ ಮೇಲೆ ದಾಳಿಯ ವೀಡಿಯೋ ವೈರಲ್ ಆಗಿದ್ದು, ವಾಹನದೊಳಗೆ ಕುಳಿತು ಕೆಫೆ ಮೇಲೆ ದಾಳಿ ಮಾಡಲಾಗಿದೆ. ವ್ಯಕ್ತಿಯೊಬ್ಬ ತನ್ನ ಗನ್ ಹೊರಗೆ ತೆಗದೆಉ ಕಾರಿನ ಕಿಟಕಿ ಮೂಲಕ ಹಲವು ಬಾರಿ ಗುಂಡು ಹಾರಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಧಿಲ್ಲೊನ್ ಹಾಗೂ ಸಿಧು ಇಬ್ಬರು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಈ ಹೊಟೇಲ್‌ನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾರೆ. ನಾನು ಕುಲ್ದೀಪ್ ಸಿಧು ಹಾಗೂ ಗೋಲ್ಡಿ ಧಿಲ್ಲೊನ್ ಕಾಪ್ಸ್‌ ಕೆಫೆಯಲ್ಲಿ ನಡೆದ ಗುಂಡಿನ ದಾಳಿಯ ಹೊಣೆ ಹೊರುತ್ತೇವೆ. ನಮಗೆ ಸಾರ್ವಜನಿಕರ ಮೇಲೆ ಯಾವುದೇ ದ್ವೇಷ ಇಲ್ಲ ಎಂದು ಅವರು ದಾಳಿಯ ನಂತರ ಹೇಳಿದ್ದಾರೆ.

ನಮ್ಮ ಜೊತೆ ಯಾರು ವಿವಾದ ಹೊಂದಿದ್ದಾರೋ ಅವರು ನಮ್ಮಿಂದ ದೂರ ಇರಬೇಕು. ಯಾರು ಅಕ್ರಮ ಕೆಲಸದಲ್ಲಿ ತೊಡಗಿದ್ದಾರೋ ಹಾಗೂ ಜನರಿಗೆ ಹಣ ಪಾವತಿ ಮಾಡುತ್ತಿಲ್ಲವೋ ಅವರು ಸಿದ್ಧವಾಗಿರಬೇಕು ಎಂದು ಹೇಳಿದ್ದಾರೆ. ಜೊತೆಗೆ ಬಾಲಿವುಡ್‌ನಲ್ಲಿ ಯಾರು ಧರ್ಮದ ವಿರುದ್ಧ ಮಾತನಾಡುತ್ತಾರೋ ಅವರು ಕೂಡ ಸಿದ್ಧವಾಗಿರಬೇಕು. ಬುಲೆಟ್ ಯಾವ ಕಡೆಯಿಂದ ಬೇಕಾದರೂ ಬರಬಹುದು ಎಂದು ಸಂದೇಶದಲ್ಲಿ ಹೇಳಲಾಗಿದೆ.

ಇದಕ್ಕೂ ಮೊದಲು ಕಾಪ್ಸ್‌ ಕೆಫೆ ಮೇಲೆ ಆಗಸ್ಟ್‌ 8ರಂದು ನಡೆದ ದಾಳಿಯಲ್ಲಿ 25 ಗುಂಡು ಹಾರಿಸಲಾಗಿತ್ತು  ದಾಳಿಯ ವಿಡಿಯೋದಲ್ಲಿ ನಾವು ನಮ್ಮ ಟಾರ್ಗೆಟ್‌ಗೆ ಕರೆ ಮಾಡಿದೆವು ಆದರೆ ಅವರು ನಮ್ಮ ಮಾತು ಕೇಳಲಿಲ್ಲ, ಹೀಗಾಗಿ ನಾವು ಕ್ರಮ ಕೈಗೊಳ್ಳಬೇಕಾಯ್ತು. ಈಗಲೂ ಅವನು ನಮ್ಮ ಮಾತು ಕೇಳದೇ ಹೋದರೆ ಮುಂದಿನ ಕ್ರಮವನ್ನುಮುಂಬೈನಲ್ಲಿ ಕೈಗೊಳ್ಳಲಾಗುತ್ತದೆ ಎಂದು ಹೇಳುವುದು ಕೇಳಿಸುತ್ತಿದೆ. ಈ ಬೆದರಿಕೆ ಸಂದೇಶದಿಂದಾಗಿ ಕಪಿಲ್ ಶರ್ಮಾ ನಿವಾಸಕ್ಕೆ ಭದ್ರತೆ ಹೆಚ್ಚಿಸುವಂತಾಯ್ತು. ಇದಕ್ಕೂ ಮೊದಲು ಜುಲೈ 10ರಂದು ಮೊದಲ ಬಾರಿ ದಾಳಿ ನಡೆದಿತ್ತು. ಆಗ ಕೆಫೆ ಒಳಗೆ ಉದ್ದೋಗಿಗಳು ಇದ್ದರು. ಆ ದಾಳಿಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. ಆದರೆ ಕೆಫೆಯ ಕಿಟಕಿ ಗಾಜುಗಳು ಗುಂಡಿನ ದಾಳಿಯಿಂದ ಜಖಂಗೊಂಡಿದ್ದವು.

4 ತಿಂಗಳಲ್ಲಿ 3ನೇ ಬಾರಿ ಗುಂಡಿನ ದಾಳಿ

ಈ ಮೊದಲ ದಾಳಿಯ ನಂತರ ಪ್ರತಿಕ್ರಿಯಿಸಿದ ಭಯೋತ್ಪಾದಕ ಸಂಘಟನೆ ಬಾಬರ್ ಖಲ್ಸ್ ಇಂಟರ್‌ನ್ಯಾಷನಲ್‌ನ ಸದಸ್ಯನೋರ್ವ ಪ್ರತಿಕ್ರಿಯಿಸಿ ಕಪಿಲ್ ಶೋದಲ್ಲಿ ನಿಹಾಂಗ್ ಸಿಖ್‌ಗಳ ಸಂಪ್ರದಾಯಿಕ ಧಿರಿಸಿನ ಬಗ್ಗೆ ಕಪಿಲ್ ಶರ್ಮಾ ಶೋದಲ್ಲಿ ವ್ಯಂಗ್ಯ ಮಾಡಲಾಗಿತ್ತು. ಇದು ಆ ಸಮುದಾಯದ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದೆ ಎಂದು ಹೇಳಿದರು. ಇದು ಕಪಿಲ್ ಕೆಫೆ ಮೇಲೆ 4 ತಿಂಗಳಲ್ಲಿ ನಡೆದ 3ನೇ ಗುಂಡಿನ ದಾಳಿಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?