
ಅವನೊಬ್ಬ ಖಾಲಿ ಮನುಷ್ಯ!
ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಸೃಷ್ಟಿಸಿರುವ 'ಕಾಂತಾರ ಚಾಪ್ಟರ್ 1' ಎಂಬ ಸಿನಿಮಾ ಮಾಯಾಜಾಲ ಜಗತ್ತಿನ ಹಲವು ಕಡೆಗಳಲ್ಲಿ ಅಬ್ಬರಿಸುತ್ತಿದೆ. ವಿಶ್ವದಾದ್ಯಂತ 7000 ಕಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಾಣುತ್ತಿದೆ ಕಾಂತಾರ-1. ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾದ ಬಳಿಕ ರಷಿಬ್ ಶೆಟ್ಟಿಯವರು ತಮ್ಮ ಸಿನಿಮಾ ಜರ್ನಿ ಹಾಗೂ ಪ್ರಮುಖವಾಗಿ ಈ ಕಾಂತಾರ- 1 (Kantara Chapter 1) ಮೂಡಿಬಂದಿರುವ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ.
ಒಂದು ಕಡೆ ರಿಷಬ್ ಶೆಟ್ಟಿಯವರ ಸಿನಿಮಾ ಪ್ರಪಂಚದಾದ್ಯಂತ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದ್ದು, 2ನೇ ದಿನ್ನ ಅಂತ್ಯದ ಹೊತ್ತಿಗೇ 100 ಕೋಟಿ ಕ್ಲಬ್ ಸೇರಿ ಮುನ್ನುಗ್ಗುತ್ತಿದೆ. ಕನ್ನಡ ಸಿನಿಮಾವೊಂದು ಈ ಪರಿ ಸಕ್ಸಸ್ ಕಾಣುತ್ತಿದ್ದ ಈ ಸಮಯದಲ್ಲಿ ಒಬ್ಬ ವ್ಯಕ್ತಿ ಮಾತ್ರ ರಿಷಬ್ ಶೆಟ್ಟಿಗೆ 'ಅವನೊಬ್ಬ ಖಾಲಿ ಮನುಷ್ಯ' ಎಂದಿದ್ದಾರೆ. ಅದೂ ಕೂಡ ಕ್ಯಾಮೆರಾ ಮುಂದೆ, ಜಗತ್ತಿನ ಭಯವೇ ತಮಗಿಲ್ಲ ಎಂಬಂತೆ..! ಅಷ್ಟೇ ಅಲ್ಲ, 'ಅವನೊಬ್ಬ ಖಾಲಿ ಖಾಲಿ ಮನುಷ್ಯ, ಒಳಗಡೆ ಏನೂ ಇಲ್ಲ. ಇರೋದು ಖಾಲಿ ಜೋಳಿಗೆ ಅಷ್ಟೇ. ಯಾರು ಏನೇ ಕೊಟ್ಟರು ತುಂಬಿಸಿಕೊಳ್ಳುತ್ತಾನೆ' ಎಂದಿದ್ದಾರೆ.
ಅಷ್ಟೇ ಅಲ್ಲ, 'ರಿಷಬ್ ತಮ್ಮನ್ನು ಯಾವತ್ತೂ ಖಾಲಿಯಾಗಿಯೇ ಇಟ್ಟುಕೊಳ್ಳಲು ಇಷ್ಟಪಡುವ ಮನುಷ್ಯ. ಜಗತ್ತು ಕೊಡ್ತಾ ಹೋಗ್ಬೇಕು, ಅವ್ರು ತುಂಬಿಸಿಕೊಳ್ತಾ ಹೋಗ್ತಾರೆ. ಪ್ರತಿದಿನ ಕಲೀಬೇಕು, ಪ್ರತೀ ದಿನ ಹೊಸ ಹೊಸ ಮನುಷ್ಯರು ಸಿಗ್ತಾನೇ ಇರ್ತಾರೆ, ಒಳ್ಳೊಳ್ಳೆಯ ಮನುಷ್ಯರು.. ಅದೇ ಅವ್ರ ದೊಡ್ಡ ಭಾಗ್ಯ, ಪ್ರತಿಯೊಬ್ಬರ ಬಳಿಯೂ ಕಲಿಯೋಕೆ ಸಿಗುತ್ತೆ.. ಅದಕ್ಕೇ ರಿಷಬ್ ಯಾವಾಗ್ಲೂ ಖಾಲಿಯಾಗಿರೋಕೇ ಇಷ್ಟಪಡ್ತಾನೆ' ಎಂದಿದ್ದಾರೆ. ಆ ವ್ಯಕ್ತಿಯ ಮಾತು ಕೇಳಿ ರಿಷಬ್ ಶೆಟ್ಟಿ ಅಭಿಮಾನಿಗಳು ಸಿಕ್ಕಾಪಟ್ಟೆ ಉರಿದುಕೊಳ್ಳದಂತೂ ಪಕ್ಕಾ! ಆದರೆ, 'ಅವ್ನೊಬ್ಬ ಖಾಲಿ ಮನುಷ್ಯ' ಅಂದಿರೋ ವ್ಯಕ್ತಿಗೆ ಯಾರೂ ಏನೂ ಮಾಡಕೋಗಲ್ಲ!
ಅದ್ಯಾಕೆ ಅಂದ್ರೆ, ಈ ಮಾತನ್ನು ಯಾವುದೋ ಸಾಮಾನ್ಯ ವ್ಯಕ್ತಿಯೊಬ್ಬರು ಹೇಳಿದ್ದಲ್ಲ. ಅದನ್ನು ಹೇಳಿರೋರು ದೊಡ್ಡ ವಿಐಪಿ, ಜಗತ್ತೇ ಗುರುತಿಸುವ, ಗೌರವಿಸುವವ್ಯಕ್ತಿ. ಆ ಕಾರಣಕ್ಕೇ ಅವರು ರಿಷಬ್ ಶೆಟ್ಟಿಯವರ ಬಗ್ಗೆ ಅಷ್ಟು ನೇರವಾಗಿ 'ಅವನೊಬ್ಬ ಖಾಲಿ ವ್ಯಕ್ತಿ' ಎಂದಿದ್ದಾರೆ. ಹಾಗಿದ್ದರೆ ಹಾಗೇ ಹೇಳಿಯೂ ಆರಾಂ ಆಗಿ ಓಡಾಡಿಕೊಂಡಿರುವ ಆ ಪರ್ಸನ್ ಯಾರು? ಅವರು ಮತ್ಯಾರೂ ಅಲ್ಲ, ಸ್ವತಃ ರಿಷಬ್ ಶೆಟ್ಟಿಯವರೇ..!. ಖಾಸಗಿ ಚಾನೆಲ್ ಸಂದರ್ಶನವೊಂದರಲ್ಲಿ ಸ್ವತಃ ರಿಷಬ್ ಶೆಟ್ಟಿಯವರೇ ಈ ಮಾತು ಹೇಳಿದ್ದಾರೆ. ಇಲ್ಲಿಗೆ ಈ ಕಥೆ ಮುಗಿಯಿತು.., ಇಷ್ಟೇ ಆಗಿರೋದು ಇನ್ನೇನಿಲ್ಲ ಮಾರಾಯ್ರೇ..!
ಅಂದಹಾಗೆ, ಇನ್ನು, ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಗ್ಗೆ ಹೆಚ್ಚು ಹೇಳಲೇಬೇಕಿಲ್ಲ. ಅವರೇ ಈ 'ಕಾಂತಾರ ಚಾಪ್ಟರ್ -1' ರ ರೂವಾರಿ. ಅವರೇ ಇಡೀ ಸಿನಿಮಾದ ಹೈಲೈಟ್ ಹಾಗೂ ಈ ಸಿನಿಮಾ ಆಗೋದಕ್ಕೆ ಕಾರಣ. ಜೊತೆಗೆ, ನಾಯಕಿ ರುಕ್ಮಿಣಿ ವಸಂತ್ ಸೇರಿದಂತೆ ಇಡೀ ಚಿತ್ರತಂಡದ ಪರಿಶ್ರಮ ಈ ಚಿತ್ರದಲ್ಲಿದೆ. ಹೀಗೆ ಹಲವರ ಪ್ರತಿಭೆ ಹಾಗೂ ಪರಿಶ್ರಮ ಮೇಳೈಸಿದ್ದ ಟೀಮ್ ವರ್ಕ್ ಮೂಲಕ ಇಂದು ಕಾಂತಾರ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.