
ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ನೋಡ್ತಿದ್ದ ಉತ್ತರ ಕರ್ನಾಟಕದ ಮಲ್ಲಮ್ಮ (Mallamma)ನನ್ನು ಈಗ ವೀಕ್ಷಕರು ಟಿವಿಯಲ್ಲಿ ನೋಡ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 (Boss Kannada Season 12) ರ ಮನೆಗೆ ಎಂಟ್ರಿ ಆಗಿರುವ ಮಲ್ಲಮ್ಮ, ಮುಗ್ದಾರದ್ರೂ ಚೆನ್ನಾಗಿಯೇ ಆಟ ಆಡ್ತಿದ್ದಾರೆ. ಆಟಕ್ಕೂ ಸೈ, ಮಾತಿಗೂ ಸೈ ಅನ್ನೋದನ್ನು ಮಲ್ಲಮ್ಮ ಸಾಭೀತುಪಡಿಸ್ತಿದ್ದಾರೆ. ನಿನ್ನೆ ನಡೆದ ಟಾಸ್ಕ್ ನಲ್ಲಿ ಮಲ್ಲಮ್ಮ ಅಧ್ಬುತವಾಗಿ ಆಟವಾಡಿದ್ದಾರೆ. ಮಲ್ಲಮ್ಮನಿಗೆ ಬೆಂಗಳೂರು ಕನ್ನಡ ಅರ್ಥ ಮಾಡಿಕೊಳ್ಳೋದು ಸ್ವಲ್ಪ ಕಷ್ಟವಾದ್ರೂ, ಬಿಗ್ ಬಾಸ್ ಮನೆಯ ಎಲ್ಲರ ನೆಚ್ಚಿನ ಅಮ್ಮನಾಗಿ ಮಲ್ಲಮ್ಮ ಮನಸ್ಸು ಕದಿಯುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಬರುವ ಮುನ್ನ ಮಲ್ಲಮ್ಮ, ಯುಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ಮೂಲಕ ಲಕ್ಷಾಂತರ ಜನರ ಮನಸ್ಸು ಗೆದ್ದಿದ್ದರು.
ʻಮಲ್ಲಮ್ಮ ಟಾಕ್ಸ್ʼ (Mallamma_talks) ಹೆಸರಿನ ಯುಟ್ಯೂಬ್ ಚಾನೆಲ್ ನಲ್ಲಿ ಮಲ್ಲಮ್ಮ ಅವರ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಮಲ್ಲಮ್ಮ ಬಿಗ್ ಬಾಸ್ ಮನೆ ಸೇರಿದ ಮೇಲೆ ಬಿಗ್ ಬಾಸ್ ಗೆ ಹೊರಡುವ ಮುನ್ನ ಅವರ ತಯಾರಿ ಹೇಗಿತ್ತು ಎಂಬ ವಿಡಿಯೋಗಳನ್ನು ಒಂದೊಂದೇ ಪೋಸ್ಟ್ ಮಾಡಲಾಗ್ತಿದೆ. ವಿಡಿಯೋದಲ್ಲಿ ಮಲ್ಲಮ್ಮ,ಭಾಗರ್ವಿ ಎಲ್ ಎಲ್ ಬಿ ನಟ ಹಾಗೂ ಸದಾ ಮಲ್ಲಮ್ಮನಿಗೆ ಬೆನ್ನೆಲುಬಾಗಿ ನಿಂತಿರುವ ಮನೋಜ್ ಹಾಗೂ ಪಲ್ಲವಿ ಜೊತೆ ಮಾತನಾಡಿದ್ದಾರೆ. ಏನೆಲ್ಲ ಶಾಪಿಂಗ್ ಮಾಡಿದ್ವಿ ಎಂಬುದನ್ನು ಹಂಚಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ಮಲ್ಲಮ್ಮನ ಸಂಬಳದ ಬಗ್ಗೆ ಮಾತನಾಡಲಾಗಿದೆ. ಮಲ್ಲಮ್ಮ, ಬಿಗ್ ಬಾಸ್ ಗೆದ್ರೆ ಅದ್ರ ಹಣದಲ್ಲಿ ಪಾರ್ಟಿ ಮಾಡ್ತೇನೆ ಎಂದಿದ್ದಾರೆ. ಎಲ್ಲ ಸೇರಿ ಪಾರ್ಟಿ ಮಾಡೋಣ ಬನ್ರಿ ಎನ್ನುವ ಮಲ್ಲಮ್ಮ, ಸಾಲ ಇದ್ದಿದ್ದೆ ಎನ್ನುವ ಮೂಲಕ ಜೀವನದ ಪಾಠ ಹೇಳಿದ್ದಾರೆ.
Naa Ninna Bidalaare: ಅಪ್ಪ-ಮಗಳು ಒಂದಾಗ್ತಿದ್ದಂತೆಯೇ ಟ್ವಿಸ್ಟೋ ಟ್ವಿಸ್ಟ್! ದೃಷ್ಟಿ ತೆಗೆದ ನೆಟ್ಟಿಗರು
ಬಿಗ್ ಬಾಸ್ ಗೆದ್ದು ಕೈಗೆ ಹಣ ಬಂದ್ರೆ ಮನೆ ಖರೀದಿ ಮಾಡ್ಬೇಕು, ಸಾಲ ತೀರಿಸ್ಬೇಕು ಅಂತ ಸ್ಪರ್ಧಿಗಳು ಈಗಾಗ್ಲೇ ಪ್ಲಾನ್ ಮಾಡಿರ್ತಾರೆ. ಈ ಬಗ್ಗೆ ಮಲ್ಲಮ್ಮನ ಅಭಿಪ್ರಾಯ ಭಿನ್ನವಾಗಿದೆ. ಹಣ ನೋಡಿದ್ರೆ ಖರ್ಚು ಮಾಡೋಕೆ ಮನಸ್ಸು ಬರಲ್ಲ ಎಂದಿದ್ದಾರೆ ಮಲ್ಲಮ್ಮ.
ಬಿಗ್ ಬಾಸ್ ಸಂಬಳದ ಬಗ್ಗೆ ಮಲ್ಲಮ್ಮ ಹೇಳಿದ್ದೇನು? :
ಬಿಗ್ ಬಾಸ್ ನಿಮಗೆ ಸಂಬಳ ಕೊಡ್ತಾರಾ ಎನ್ನುವ ಪ್ರಶ್ನೆಗೆ ಮಲ್ಲಮ್ಮ ಹೌದು ಎಂದಿದ್ದಾರೆ. ಸಂಬಳ ಇಲ್ಲ ಅಂದ್ರೆ ಯಾರು ಅಲ್ಲಿಗೆ ಹೋಗ್ತಾರೆ, ಅದಕ್ಕೆ ಇಷ್ಟೆಲ್ಲ ಏಕೆ ಖರ್ಚು ಮಾಡ್ಬೇಕು ಎಂದ ಮಲ್ಲಮ್ಮ, ಬ್ಯಾಂಕ್ ಡಿಟೇಲ್ ಕೊಟ್ಟಿದ್ದೇನೆ ಎಂದಿದ್ದಾರೆ. ಮಲ್ಲಮ್ಮ ಬಿಗ್ ಬಾಸ್ ಮನೆಗೆ ಹೋಗೋ ಮೊದಲು ಒಂದಿಷ್ಟು ಮೆಡಿಕಲ್ ಚೆಕಪ್ ನಡೆದಿದೆ. ಬ್ಲಡ್ ಟೆಸ್ಟ್ ಕೂಡ ಮಾಡಲಾಗಿದೆ.
BBK 12: ಜಾನ್ವಿ ರೀತಿಯಲ್ಲಿರೋ ಆಂಟಿಗಳಂದ್ರೆ ನನಗಿಷ್ಟ ಎಂದ ಅಭಿಷೇಕ್ ಫ್ಲರ್ಟ್
ಬಿಗ್ ಬಾಸ್ ಮನೆಗೆ ಏನೆಲ್ಲ ತೆಗೆದುಕೊಂಡು ಹೋಗ್ತಿದ್ದಾರೆ ಮಲ್ಲಮ್ಮ? :
ಮಲ್ಲಮ್ಮ ಬಿಗ್ ಬಾಸ್ ಗೆ ಹೋಗೋ ಮೊದಲು ಒಂದಿಷ್ಟು ಬ್ಲೌಸ್ ಸ್ಟಿಚ್ ಆಗಿತ್ತು. ಬಿಗ್ ಬಾಸ್ ಸ್ಪರ್ಧಿಗಳಿಗೆ ಡ್ರೆಸ್ ಸ್ಟಿಚ್ ಮಾಡಿಕೊಡುವ ಪಲ್ಲವಿ ಈ ಬಾರಿ ತಮ್ಮವರೇ ಆದ ಮಲ್ಲಮ್ಮ ಅವರಿಗೆ ಬ್ಲೌಸ್ ಸ್ಟಿಚ್ ಮಾಡಿದ್ದಾರೆ. ವಿಡಿಯೋ ಮಾಡೋ ಟೈಂನಲ್ಲಿ ಇನ್ನೊಂದಿಷ್ಟು ಬ್ಲೌಸ್ ಸ್ಟಿಚ್ಚಿಂಗ್ ನಡೀತಾ ಇತ್ತು. ಅಷ್ಟೇ ಅಲ್ಲ, ಹೊಸ ಹೊಸ ಸೀರೆಗಳನ್ನು ಮಲ್ಲಮ್ಮ ಬಿಗ್ ಬಾಸ್ ಗೆ ಅಂತಾನೇ ಖರೀದಿ ಮಾಡಿದ್ದಾರೆ.
ನಟ ಮನೋಜ್ ಕೆಲಸಕ್ಕೆ ಶ್ಲಾಘನೆ :
ಮಲ್ಲಮ್ಮ ಅವರನ್ನು ಮಾತನಾಡಿಸ್ತಾ, ಅವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ಪೋಸ್ಟ್ ಮಾಡ್ತಿರೋರು ನಟ ಮನೋಜ್. ಅನೇಕರಿಗೆ ಈ ಸತ್ಯ ಇತ್ತೀಚಿಗೆ ತಿಳಿದಿದೆ. ಇಷ್ಟು ದಿನ ಧ್ವನಿ ಮಾತ್ರ ಕೇಳ್ತಾ ಇದ್ವಿ. ಈಗ ವಿಡಿಯೋ ಮಾಡೋದು ಯಾರು ಎಂಬ ಸತ್ಯ ಗೊತ್ತಾಗಿದೆ. ನಿಮ್ಮ ತಾಳ್ಮೆಗೆ ಸಲಾಂ ಅಂತ ಅನೇಕರು ಮನೋಜ್ ಹಾಗೂ ಪಲ್ಲವಿ ಕೆಲ್ಸವನ್ನು ಶ್ಲಾಘಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.