ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಯಾವುದು ಗೊತ್ತಾ? 1959ರಲ್ಲೇ ಏಳು ಭಾಷೆಗಳಲ್ಲಿ ಡಬ್ ಆಗಿತ್ತು!

Published : Nov 17, 2026, 09:11 PM IST
Mahishasura Mardini

ಸಾರಾಂಶ

ಭಾರತೀಯ ಚಿತ್ರರಂಗ ಇಂದು ಪ್ಯಾನ್ ಇಂಡಿಯಾ ಮತ್ತು ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಬೆಳೆದಿದೆ. ಆದರೆ 1959ರಲ್ಲೇ ಡಾ. ರಾಜ್‌ಕುಮಾರ್ ಅಭಿನಯದ ಸಿನಿಮಾ ಒಂದು 7 ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು.

ಬೆಂಗಳೂರು: ಭಾರತೀಯ ಸಿನಿಮಾ ರಂಗದ ಕಲ್ಪನೆ ಸಂಪೂರ್ಣ ಬದಲಾಗಿದೆ. ಪ್ಯಾನ್‌ ಇಂಡಿಯಾ ಕಾಮನ್‌ ಮಾತಾದರೆ, ಪ್ಯಾನ್‌ ವರ್ಲ್ಡ್‌ ಕಲ್ಪನೆಗಳು ತೆರೆದುಕೊಳ್ಳುತ್ತಿವೆ. ಹಿಂದೆ ಭಾರತೀಯ ಚಿತ್ರರಂಗವು ಭಾಷೆ ಮತ್ತು ಪ್ರಾದೇಶಿಕ ಗಡಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇವತ್ತು ಹಾಗಿಲ್ಲ.

ಅಣ್ಣಾವ್ರು ಆವತ್ತೇ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಿದ್ದರು

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗಗಳು ತಮ್ಮ ತಮ್ಮ ರಾಜ್ಯದ ಪ್ರೇಕ್ಷಕರಿಗಾಗಿ ಮಾತ್ರ ಸಿನಿಮಾ ಮಾಡುತ್ತಿದ್ದವು. ಆಗ ಬಾಲಿವುಡ್‌ ಸಿನಿಮಾಗಳನ್ನು ಮಾತ್ರ ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿತ್ತು. ಒಂದು ಭಾಷೆಯ ಹಿಟ್ ಸಿನಿಮಾಗಳನ್ನು ಬೇರೆ ಭಾಷೆಗೆ ರೀಮೇಕ್ ಅಥವಾ ಡಬ್ ಮಾಡಲಾಗುತ್ತಿತ್ತು. ಆದರೆ 'ಬಾಹುಬಲಿ', 'ಕೆಜಿಎಫ್', 'ಆರ್‌ಆರ್‌ಆರ್' ನಂತಹ ಸಿನಿಮಾಗಳ ಯಶಸ್ಸಿನ ನಂತರ ಭಾಷಾ ಗಡಿಗಳು ಅಳಿಸಿಹೋದವು.

ಕಥೆ ಮತ್ತು ತಂತ್ರಜ್ಞಾನದಲ್ಲಿ ಶ್ರೀಮಂತಿಕೆ ಬಂತು. ಒಂದೇ ಸಿನಿಮಾವನ್ನು ಏಕಕಾಲಕ್ಕೆ ದೇಶದ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡುವ ಮೂಲಕ 'ಪ್ಯಾನ್‌ ಇಂಡಿಯಾ' ಟ್ರೆಂಡ್ ಶುರುವಾಯಿತು. ಇದರಿಂದ ಇಡೀ ದೇಶದ ಪ್ರೇಕ್ಷಕರು ಒಟ್ಟಾಗಿ ಎಲ್ಲಾ ಭಾಷೆಯ ಉತ್ತಮ ಸಿನಿಮಾಗಳನ್ನು ನೋಡಿ ಸಂಭ್ರಮಿಸುವಂತಾಯಿತು. ಇದೀಗ ಭಾರತೀಯ ಚಿತ್ರರಂಗವು ದೇಶದ ಗಡಿಯನ್ನೂ ದಾಟಿ Pan-World ಮಟ್ಟಕ್ಕೆ ಬೆಳೆಯುತ್ತಿದೆ. OTT ವೇದಿಕೆಗಳು, ಸಾಮಾಜಿಕ ಜಾಲತಾಣಗಳು ಹಾಗೂ ಆಸ್ಕರ್‌ನಂತಹ ಅಂತಾರಾಷ್ಟ್ರೀಯ ಪ್ರಶಸ್ತಿಗಳು ನಮ್ಮ ಸಿನಿಮಾಗಳಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮನ್ನಣೆ ತಂದುಕೊಟ್ಟಿವೆ.

ಇಂದು ನಿರ್ದೇಶಕರು ಕೇವಲ ಭಾರತೀಯರನ್ನು ಮಾತ್ರವಲ್ಲದೆ.. ಪ್ರಪಂಚದಾದ್ಯಂತ ಇರುವ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಹಾಲಿವುಡ್‌ಗೆ ಸರಿಸಮನಾಗಿ ಸಿನಿಮಾ ಮಾಡುತ್ತಿದ್ದಾರೆ. ಜಪಾನ್, ಅಮೆರಿಕ, ಯುರೋಪ್‌ನಂತಹ ದೇಶಗಳಲ್ಲೂ ಅಲ್ಲಿನ ಸ್ಥಳೀಯ ಭಾಷೆಗಳಿಗೆ ಡಬ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿವೆ. ಹೀಗೆ ಪ್ರಾದೇಶಿಕವಾಗಿದ್ದ ಭಾರತೀಯ ಸಿನಿಮಾ, ಈಗ ಇಡೀ ಜಗತ್ತೇ ತಿರುಗಿ ನೋಡುವಂತೆ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದೆ. ಸಂತೋಷದ ವಿಚಾರವೇ..

ಆದರೆ ನಿಮಗೆ ಬಹುಷ ಈ ವಿಚಾರ ಗೊತ್ತಿರಲಿಕ್ಕಿಲ್ಲ. ಈ ಪ್ಯಾನ್‌ ಇಂಡಿಯಾ ಕಲ್ಪನೆ ಹುಟ್ಟಿಕೊಳ್ಳುವ ಮೊದಲೇ ನಮ್ಮ ಕರ್ನಾಟಕದ ಹೆಮ್ಮೆಯ ಸಿನಿಮಾವೊಂದು ಇವತ್ತಿನ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನೂ ಮೀರಿಸುವ ಲೇವೆಲ್‌ಗೆ ಹಿಟ್‌ ಆಗಿತ್ತು. ಅದು ಬೇರೆ ಯಾವುದೂ ಅದಲ್ಲ. ʼಮಹಿಷಾಸುರ ಮರ್ದಿನಿʼ ಡಾ.ರಾಜ್‌ ಕುಮಾರ್‌ ಅಭಿನಯದ ಈ ಸಿನಿಮಾವು 1959 ರಲ್ಲಿ ತೆರೆಕಂಡಿತ್ತು.

ಬಿಎಸ್‌ ರಂಗಾ ನಿರ್ದೇಶನದ ಈ ಚಿತ್ರವು ಆಗಿನ ಕಾಲದಲ್ಲೇ ಬರೋಬ್ಬರಿ 7 ಭಾಷೆಗಳಿಗೆ ಡಬ್‌ ಆಗಿ ಸಂಚಲನ ಮೂಡಿಸಿತ್ತು. ಹಿಂದಿಯಲ್ಲಿ ದುರ್ಗಾ ಮಾತಾ ಎಂಬ ನಾಮಕರಣದೊಂದಿಗೆ ರಿಲೀಸ್‌ ಆಗಿದ್ದರೆ.. ಇನ್ನುಳಿದ ಎಲ್ಲಾ ಭಾಷೆಗಳಲ್ಲೂ ಮಹಿಷಾಸುರ ಮರ್ದಿನಿ ಎಂಬ ಹೆಸರಿನಲ್ಲೇ ಬಿಡುಗಡೆಯಾಗಿತ್ತು. ಆ ಮೂಲಕ ಡಾ.ರಾಜ್‌ ಅವರ ಸಿನಿಮಾವೊಂದು 1959ರಲ್ಲಿ ಪ್ಯಾನ್‌ ಇಂಡಿಯಾ ಚಿತ್ರವಾಗಿ ಹೊರಹೊಮ್ಮಿತ್ತು. ಇನ್ನು, ಈ ಚಿತ್ರದಲ್ಲಿ ವಿ ನಾಗಯ್ಯ, ಉದಯ್‌ಕುಮಾರ್, ನರಸಿಂಹರಾಜು ಮೊದಲಾದವರು ನಟಿಸಿದ್ದರು. ಜಿಕೆ ವೆಂಕಟೇಶ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಚಿತ್ರದ ಇನ್ನೊಂದು ವಿಚಾರ ಏನೆಂದರೆ ರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಮೊದಲ ಬಾರಿಗೆ ಗಾಯಕರಾಗಿ ತುಂಬಿತು ಮನವ ಹಾಡು ಹಾಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಮಾಯಣ ಅಬ್ಬರದ ನಡುವೆ ವರ್ಷಕ್ಕೆ ₹200 ಕೋಟಿ ಗಳಿಕೆಯ 3 ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ನಟ ಸೂರ್ಯ!
ಅಡ್ವಾನ್ಸ್ ಕೊಟ್ಟು ಮರೆತ ನಿರ್ಮಾಪಕ.. ನೆನಪಿಸಿ ಕಾಲೆಳೆದು 'ಲೇಡಿ ಪವರ್ ಸ್ಟಾರ್' ಪಟ್ಟ ಪಡೆದ 'ಸೀತೆ'