ಮೆಗಾಸ್ಟಾರ್ ಜೊತೆ ಕಿಚ್ಚ : ಮತ್ತೊಂದು 'ಈಗ' ಪಾತ್ರವಾ ?

Published : Aug 08, 2017, 05:49 PM ISTUpdated : Apr 11, 2018, 01:01 PM IST
ಮೆಗಾಸ್ಟಾರ್ ಜೊತೆ ಕಿಚ್ಚ : ಮತ್ತೊಂದು 'ಈಗ' ಪಾತ್ರವಾ ?

ಸಾರಾಂಶ

ವಿಶೇಷ ಅಂದರೆ ಈ ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಶುರು ಮಾಡಲಿದ್ದಾರೆ. ಸದ್ಯಕ್ಕೆ ಗಾಂಧಿನಗರದಲ್ಲಿ ಓಡಾಡುತ್ತಿರುವ ಬ್ರೇಕಿಂಗ್ ನ್ಯೂಸ್ ಇದು

ನಟ ಸುದೀಪ್ ಅವರು ಮೆಗಸ್ಟಾರ್ ಚಿರಂಜೀವಿ ಜತೆ ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಚಿರಂಜೀವಿ ಅವರ 151ನೇ ಚಿತ್ರದ ‘ಉಯ್ಯಾಲವಾಡ ನರಸಿಂಹರೆಡ್ಡಿ’ ಚಿತ್ರದಲ್ಲಿ ಕಿಚ್ಚ ಪಾಳೆಗಾರರ ನಾಯಕನಾಗಿ ನಟಿಸುತ್ತಿರುವುದು ಖಚಿತವಾಗಿದೆ. ಈಗಾಗಲೇ ಈ ಚಿತ್ರಕ್ಕೆ ಒಪ್ಪಿಗೆ ಕೊಟ್ಟಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಈಗಷ್ಟೆ ಬಂದಿರುವ ಸುದ್ದಿಯಂತೆ ಇದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಲಿದೆ.

‘ಉಯ್ಯಾಲವಾಡ ನರಸಿಂಹರೆಡ್ಡಿ’ ಚಿತ್ರದ ನಂತರ ಶುರುವಾಗಲಿದ್ದು, ಇದು ಮಲ್ಟಿಸ್ಟಾರ್ ಸಿನಿಮಾ. ಅಂದರೆ ಸುದೀಪ್ ಹಾಗೂ ಚಿರಂಜೀವಿ ಇಬ್ಬರೂ ಹೀರೋಗಳೇ. ವಿಶೇಷ ಅಂದರೆ ಈ ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಶುರು ಮಾಡಲಿದ್ದಾರೆ. ಸದ್ಯಕ್ಕೆ ಗಾಂಧಿನಗರದಲ್ಲಿ ಓಡಾಡುತ್ತಿರುವ ಬ್ರೇಕಿಂಗ್ ನ್ಯೂಸ್ ಇದು. ಹೌದು, ಟಾಲಿವುಡ್‌ನ ಮೆಗಸ್ಟಾರ್ ಹಾಗೂ ಸ್ಯಾಂಡಲ್‌ವುಡ್‌ನ ಕಿಚ್ಚ ಇಬ್ಬರು ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಇಬ್ಬರು ಜತೆಯಾಗಿ ಚಿತ್ರ ಮಾಡುವುದು ಖಚಿತವಾಗಿ ಎನ್ನುತ್ತಿದೆ ಮೂಲಗಳು.

ಅಂದಹಾಗೆ ಕನ್ನಡ ಮತ್ತು ತೆಲುಗಿನಲ್ಲಿ ಶುರುವಾಗಲಿರುವ ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ಯಾರೆಂಬುದು ಸದ್ಯಕ್ಕೆ ಗುಟ್ಟಾಗಿದೆ. ಆದರೆ, ಆಂಧ್ರದಲ್ಲಿ ಕನ್ನಡದ ಹಲವು ಡಬ್ ಸಿನಿಮಾಗಳನ್ನು ವಿತರಣೆ ಮಾಡಿರುವ ಮತ್ತು ಸುದೀಪ್ ಅವರಿಗೆ ಆತ್ಮೀಯರು ಆಗಿರುವ ವ್ಯಕ್ತಿಯೊಬ್ಬರು ಚಿರು ಮತ್ತು ಸುದೀಪ್ ಜತೆಯಾಗಿ ನಟಿಸುತ್ತಿರುವ ಸುದ್ದಿಯನ್ನು ಖಚಿತಪಡಿಸುತ್ತಾರೆ. ಸುದೀಪ್ ಅವರ ‘ಸ್ಪರ್ಶ’ ಹಾಗೂ ‘ಧಮ್’ ಚಿತ್ರಗಳನ್ನು ವಿತರಣೆ ಮಾಡಿದವರು. ಜತೆಗೆ ಇತ್ತೀಚೆಗೆ ‘ದಂಡುಪಾಳ್ಯಂ’ ಚಿತ್ರವನ್ನು ಇವರೇ ವಿತರಣೆ ಮಾಡಿದ್ದಾರೆ. ಹೀಗಾಗಿ ಇತ್ತ ಸುದೀಪ್, ಅತ್ತ ಚಿರಂಜೀವಿ ಕುಟುಂಬಕ್ಕೂ ಆಪ್ತರಾಗಿರುವ ಈ ವ್ಯಕ್ತಿ ಹೇಳುವಂತೆ ಈ ಇಬ್ಬರು ಜತೆಯಾಗಿ ಮತ್ತೆ ನಟಿಸುತ್ತಿರುವುದನ್ನು ಖಚಿತ ಮಾಡಿದ್ದಾರೆ. ಹಾಗೆ ನೋಡಿದರೆ ಚಿರಂಜೀವಿ ಈಗಾಗಲೇ ಕನ್ನಡಕ್ಕೆ ಬಂದು ಹೋಗಿದ್ದಾರೆ.

ತುಂಬಾ ವರ್ಷಗಳ ಹಿಂದೆ ಬಂದ ‘ಸಿಪಾಯಿ’ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಂದಿಗೆ ಕಾಣಿಸಿಕೊಂಡವರು ಚಿರು. ಅದೇ ರೀತಿ ಈಗ ಕಿಚ್ಚ ಮತ್ತು ಚಿರು ‘ಸಿಪಾಯಿ’ ದಿನಗಳನ್ನು ನೆನಪಿಸುವಂತೆ ಜತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರವನ್ನು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ತಯಾರಿಸುತ್ತಿರುವುದು. ಆದರೆ, ಈ ಬಗ್ಗೆ ಮಾಹಿತಿ ಕೇಳುವುದಕ್ಕೆ ಸುದೀಪ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ?

(ಕನ್ನಡಪ್ರಭ ವಾರ್ತೆ)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ಕಿಚ್ಚ’ಬ್ಬಿಸಿದ ಯುದ್ಧ: ತೇಪೆ, ಬೆಣ್ಣೆ ಹಚ್ಚಿದರೂ ನಿಲ್ಲುತ್ತಿಲ್ಲ!
ಕಾಂತಾರಾ ಹಿಂದಿಕ್ಕಿದ ಧುರಂಧರ್‌: 876 ಕೋಟಿ ಸಂಪಾದನೆಯ ದಾಖಲೆ