
ಬೆಂಗಳೂರು(ಆ.05): ಕೆಪಿ'ಎಲ್'ನಿಂದ ಕಿಚ್ಚ ಸುದೀಪ್ ನೇತೃತ್ವದ ರಾಕ್'ಸ್ಟಾರ್ಸ್ ತಂಡವನ್ನು ಕೈಬಿಟ್ಟಿದ್ದಕ್ಕೆ ಸ್ವತಃ ತಂಡದ ನಾಯಕರಾದ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
‘ಕೆಪಿಎಲ್ನಿಂದ ರಾಕ್ ಸ್ಟಾರ್ಸ್ ತಂಡವನ್ನ ಆಡಿಸದೆ ಇರೋದಕ್ಕೆ ನಮಗೆ ತುಂಬ ಬೇಸರವಾಗಿದೆ. ಕೆಪಿಎಲ್ನಿಂದ ರಾಕ್ ಸ್ಟಾರ್ಸ್ ತಂಡವನ್ನ ಆಡದಂತೆ ಮಾಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧಾರ ಅಸಂಮಜಯ. ನಮಗೆ ಮಾಹಿತಿ ನೀಡಿ ಈ ನಿರ್ಧಾರ ಕೈಗೊಳ್ಳಬೇಕಿತ್ತು. ನನ್ನ ಅಥವಾ ತಂಡದ ಮಾಲೀಕ ರಾಜು ಗೌಡ ಜೊತೆ ಮಾತನಾಡಿ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ ನಮ್ಮನ್ನ ಸಂಪರ್ಕಿಸದೆ ರಾಕ್ ಸ್ಟಾರ್ಸ್ ತಂಡವನ್ನ ಕೆಪಿಎಲ್ನಿಂದ ಹೊರಕ್ಕೆ ಹಾಕಿರುವುದು ಬೇಸರ ಮೂಡಿಸಿದೆ. ಕೆಎಸ್ಸಿಎಗೆ ಮಾತಿಗೆ ಬೆಲೆ ಕೊಟ್ಟು ಕೆಪಿಎಲ್ನಿಂದ ನಮ್ಮ ತಂಡ ಹಿಂದೆ ಸರಿದಿದೆ. ಆದರೆ ಕೆಪಿಎಲ್ಗಾಗಿ ನಮ್ಮ ತಂಡ ಎಷ್ಟು ಶ್ರಮಿಸಿದೆ ಅನ್ನೋದು ನಾಯಕನಾಗಿ ನನಗೆ ತಿಳಿದಿದೆ. ಪ್ರತಿ ವರ್ಷವೂ ಕೆಪಿಎಲ್ನಲ್ಲಿ ಆಡಬೇಕು ಅನ್ನೋ ಇಚ್ಚೆಯಿಲ್ಲ. ಆದರೆ ನಮಗೆ ಉತ್ತಮ ವಿದಾಯ ಸಿಗಬೇಕಿತ್ತು’
- ಕಿಚ್ಚ ಸುದೀಪ್, ರಾಕ್ ಸ್ಟಾರ್ಸ್ ನಾಯಕ
ಕಳೆದ ಮೂರು ವರ್ಷ ಕೆಪಿಎಲ್'ನಲ್ಲಿ ಆಡಿ ಮನರಂಜನೆ ನೀಡಿದ್ದ ಚಿತ್ರ ನಟರ ತಂಡ ಈ ಸಲ ಆಡ್ತಿಲ್ಲ. ಕೆಪಿಎಲ್'ನಲ್ಲಿ ಆಡುವಂತೆ ರಾಕ್ ಸ್ಟಾರ್ಸ್ ತಂಡದೊಂದಿಗೆ ಮೂರು ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಮೂರು ವರ್ಷ ಆಡಿಸಲಾಗಿತ್ತು. ಈ ಸಲ ಸುದೀಪ್ ತಂಡವನ್ನ ಆಹ್ವಾನಿಸಿಲ್ಲ. ಹೊಸ ಬಿಡ್'ನೊಂದಿಗೆ ಹೊಸ ತಂಡಗಳನ್ನ ಸಿದ್ದಪಡಿಸಿದ್ದೇವೆ. ಹೀಗಾಗಿ ಈ ಸಲ 7 ತಂಡಗಳು ಕೆಪಿಎಲ್'ನಲ್ಲಿ ಆಡಲಿವೆ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಸುವರ್ಣ ನ್ಯೂಸ್ಗೆ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.