
ಪ್ಯಾನ್ ಇಂಡಿಯಾ ಸ್ಟಾರ್ ಯಶ್!
ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರು ಈಗ ಇಂಟರ್‌ನ್ಯಾಷನಲ್ ಪ್ರಸಿದ್ಧಿ ಪಡೆದ ನಟ. ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ ಅವರು ಸದ್ಯಕ್ಕೆ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಹಾಗೂ ಬಾಲಿವುಡ್ ಸಿನಿಮಾ 'ರಾಮಾಯಣ ಪಾರ್ಟ್-1' ನಲ್ಲಿ ನಟಿಸುತ್ತಿದ್ದಾರೆ. ರಾಮಾಯಣ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಯಶ್ ಅವರು ಕೆಜಿಎಫ್ ಸಿನಿಮಾ ಮೂಲಕ ಕನ್ನಡದ ನಟ ಎಂಬ ಹಣೆಪಟ್ಟಿಯಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದವರು. ಇಂದು ಯಶ್ ಮಾರುಕಟ್ಟೆ ಬಹಳಷ್ಟು ದೊಡ್ಡದಿದೆ.
ಕೆಜಿಎಫ್ ಸಿನಿಮಾದ ಬಳಿಕ ನಟ ಯಶ್ ಅವರು ಸಾಕಷ್ಟು ಸಂದರ್ಶನಗಳಲ್ಲಿ ಮಾತನ್ನಾಡಿದ್ದಾರೆ. ಕನ್ನಡ ಭಾಷೆಗೆ ಸೀಮಿತವಾಗಿದ್ದ ನಟ ಯಶ್ ಅವರು 'ಕೆಜಿಎಫ್ ಪಾರ್ಟ್ 1' ಹಾಗೂ 'ಕೆಜಿಎಫ್ ಪಾರ್ಟ್ 2' ಸಿನಿಮಾದ ಬಳಿಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದರು. ಅಲ್ಲಿಂದ ಮುಂದೆ ಯಶ್ ಸಂದರ್ಶನಗಳು ಹಾಗೂ ಯಶ್ ಈವೆಂಟ್‌ಗಳಿಗೆ ಜನ ಕಿಕ್ಕಿರಿದು ಸೇರುತ್ತಾರೆ. ಯಶ್ ಮಾತಿಗೆ ಚಪ್ಪಾಳೆ ತಟ್ಟಿ ತಲೆದೂಗುತ್ತಾರೆ. ಅಂಥದ್ದೇ ಸಂದರ್ಶನದಲ್ಲಿ ನಟ ಯಶ್ ಅವರು ಈ ಹಿಂದೆ ಆಡಿರೋ ಮಾತು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ಬೇರೆ ಯಾವುದೇ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.. ಕೆಜಿಎಫ್ ಸಿನಿಮಾದಂತಹ ಬಿಗ್ ಸಕ್ಸಸ್ ನೋಡಿದ ಬಳಿಕ ಕೂಡ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಯಾವತ್ತೂ ಸಕ್ಸಸ್ ಆಗುತ್ತೋ ಅಥವಾ ಸೋಲು ಆಗುತ್ತೋ ಎಂಬ ಬಗ್ಗೆ ಯೋಚಿಸುತ್ತಾ, ಚಿಂತಿಸುತ್ತಾ ತಲೆ ಕೆಡಿಸಿಕೊಳ್ಳಬೇಡಿ.. ಜರ್ನಿ, ಒಂದು ಕೆಲಸದ ಸಲುವಾಗಿ ನೀವು ಮಾಡುವ ಪ್ರಯಾಣ, ಅಂದ್ರೆ ಪ್ರೊಸೆಸ್ ಇದ್ಯಲ್ಲಾ, ಅದು ಕೊಡುವ ಸುಖ ಹಾಗು ಸಂತೋಷ ನಿಜವಾಗಿಯೂ ಗ್ರೇಟ್!
ಬೇರೆ ಯಾರೂ ಕಾಣದ ಕನಸು ಹಾಗೂ ಅದನ್ನು ನನಸು ಮಾಡಿಕೊಳ್ಳಲು ನೀವು ಮಾಡುವ ಕೆಲಸ ನಿಮ್ಗೆ ಖುಷಿ ಕೊಟ್ಟರೆ ಸಾಕು! ಬೇರೆಯವರು ಕಲ್ಪನೆಯನ್ನೂ ಮಾಡದ ಕೆಲಸ ಅಥವಾ ಗುರಿಯನ್ನು ಬೆನ್ನಟ್ಟಿ ನೀವು ಹೋಗುವುದು ಮತ್ತು ಅಲ್ಲಿ ಯಶಸ್ಸು ಕಾಣುವುದು ಎಲ್ಲವೂ ನಿಜವಾಗಿಯೂ ತುಂಬಾ ಎಕ್ಸೈಟ್‌ಮೆಂಟ್ ನೀಡುತ್ತದೆ. ಕೆಲಸ ಮಾಡುತ್ತಾ ಮಾಡುತ್ತಾ ಹೋದಂತೆ, ಕೊನೆಯಲ್ಲಿ ಸಿಗೋದು ಸಕ್ಸಸ್ ಅಥವಾ ಫೇಲ್ಯೂರ್. ಈ ಸೋಲು ಗೆಲವು ಎಂಬುದು ಕೊನೆಯಲ್ಲಿ ದೊರಕುವ ಪ್ರತಿಫಲವೇ ಹೊರತೂ ಅದೊಂದು ಕಾಯಕವಲ್ಲ!
ನಾವೆಲ್ಲಾ ಮಾಡಬೇಕಾಗಿದ್ದು ಇಷ್ಟೇ.. ಮೊದಲು ಒಂದು ದೊಡ್ಡ ಗೋಲ್ ಸೆಟ್ ಮಾಡ್ಕೋಬೇಕು.. ಆ ಗುರಿಯನ್ನು ಬೆನ್ನಟ್ಟಿ ನಮ್ಮ ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತಲೇ ಇರಬೇಕು. ಕೊನೆಗೊಮ್ಮೆ ಅದೇನೋ ಸಿಗುತ್ತೆ.. ಜನರು ಅದನ್ನು ಮೆಚ್ಚಿದರೆ ಅದನ್ನು ಗೆಲುವು ಎಂದೋ ಇಲ್ಲಾ ಜನರು ಇಷ್ಟಪಡದಿದ್ದರೆ ಅದನ್ನು ಸೋಲು ಎಂದೋ ಒಟ್ಟಿನಲ್ಲಿ ಒಂದು ಹೆಸರಿನಿಂದ ಕರೆಯಲಾಗುವುದು. ಆದರೆ ಅದಕ್ಕೆ ನಾವು ನಮ್ಮ ತನು-ಮನ-ಧನವನ್ನು ಅರ್ಪಿಸಿ ಮಾಡುವ ಕೆಲಸವೇ ನಿಜವಾಗಿಯೂ ನಮಗೆ ಖುಷಿ ನೀಡುತ್ತದೆ' ಎಂದಿದ್ದಾರೆ ಯಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.