ಬೆಂಗಳೂರು: ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರದ ಶೂಟಿಂಗ್‌ನಲ್ಲಿ ಮುಂದಿನ ವಾರದಿಂದ ಯಶ್ ಭಾಗವಹಿಸುತ್ತಿದ್ದಾರೆ. ಮುಂಬೈನಲ್ಲಿ ಮುಂದಿನ ವಾರ ಚಿತ್ರಕ್ಕೆ ಅದ್ದೂರಿಯಾಗಿ ಚಿತ್ರೀಕರಣ ಆರಂಭವಾಗಲಿದ್ದು, ‘ಟಾಕ್ಸಿಕ್’ ಚಿತ್ರದ ಕೆಲಸಗಳ ನಡುವೆಯೇ ಯಶ್ ‘ರಾಮಾಯಣ 1’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮುನ್ನ ಯಶ್ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ವಿಶ್ವವಿಖ್ಯಾತ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪುರಾಣಗಳ ಪ್ರಕಾರ ರಾವಣನು ಶಿವನ ಪರಮ ಭಕ್ತ ಮತ್ತು ಆರಾಧಕ. ಶಿವ ಭಕ್ತನಾಗಿರುವ ರಾವಣನಿಗೂ ಉಜ್ಜಯಿನಿಯ ಶ್ರೀ ಮಹಾಕಾಲೇಶ್ವರನಿಗೂ ಸಂಬಂಧವಿದೆ ಎಂಬುದು ಪ್ರತೀತಿ. ರಾವಣನು ಉಜ್ಜಯಿನಿಯ ಶ್ರೀ ಮಹಾಕಾಲೇಶ್ವರ ಲಿಂಗವನ್ನು ಲಂಕೆಗೆ ಕೊಂಡೊಯ್ಯಲು ಯತ್ನಿಸಿದ್ದ ಎಂಬ ಕತೆ ಇದೆ. ಅದಕ್ಕೆ ಪೂರಕವಾಗಿ ರಾವಣ ಪಾತ್ರ ಮಾಡುತ್ತಿರುವ ನಟ ಯಶ್ ಅವರು ಮಹಾಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ‘ಕವಲುದಾರಿ’ ಖ್ಯಾತಿಯ ನಟ ರಿಷಿ ಮುಂದಿನ ಸಿನಿಮಾ ‘ಮಂಗಳಾಪುರಂ’. ಈ ಚಿತ್ರದಲ್ಲಿ ರಿಷಿ ಜೊತೆಗೆ ಕಾಶೀನಾಥ್ ಪುತ್ರ ಅಭಿಮನ್ಯು ಕಾಶೀನಾಥ್ ನಟಿಸಲಿದ್ದಾರೆ. ಈ ಹಿಂದೆ ತುಳು ಭಾಷೆಯ ‘ಉಮಿಲ್’, ‘ದೊಂಬರಾಟ’ ಸಿನಿಮಾಗಳನ್ನು ನಿರ್ದೇಶಿಸಿದ್ದ ರಂಜಿತ್ ರಾಜ್ ಸುವರ್ಣ ನಿರ್ದೇಶಕರು. ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಆಗಿದೆ.

10:22 PM (IST) Apr 23
ಕಪೂರ್ಗೆ ಸೈಫ್ ಅಲಿ ಖಾನ್ ಮೇಲೆ ಲವ್ ಆದಾಗ, ಆಕೆ ಫೋನ್ ಮಾಡಿ ಹೇಳಿದ್ದೇನು ಎನ್ನುವ ಬಗ್ಗೆ ಸಹೋದರಿ ಕರಿಷ್ಮಾ ಕಪೂರ್ ಮಾತನಾಡಿದ್ದಾರೆ.
ಪೂರ್ತಿ ಓದಿ
07:43 PM (IST) Apr 23
ಮೌನಿ ರಾಯ್ ಅವರ ಸೌಂದರ್ಯದ ರಹಸ್ಯವು ಯಾವುದೇ ರಾಕೆಟ್ ವಿಜ್ಞಾನವಲ್ಲ, ಬದಲಾಗಿ ಶಿಸ್ತುಬದ್ಧ ಮತ್ತು ಆರೋಗ್ಯಕರ ಜೀವನಶೈಲಿಯಲ್ಲಿದೆ. ಸರಳವಾದ ಅಭ್ಯಾಸಗಳು..
ಪೂರ್ತಿ ಓದಿ05:49 PM (IST) Apr 23
ಈ ಆಘಾತಕಾರಿ ಘಟನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಚೋಪ್ರಾ, ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರೀಸ್‌ನಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. 'ಪಹಲ್ಗಾಮ್ ದಾಳಿಯ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಇದೊಂದು ಅತ್ಯಂತ ಹೇಯ ಕೃತ್ಯ..
ಪೂರ್ತಿ ಓದಿ05:14 PM (IST) Apr 23
ಒಂದು ಕಾಲದಲ್ಲಿ ನಾಯಕಿಯರ ಪಾತ್ರಗಳು ಹೆಚ್ಚಾಗಿ ಪ್ರೇಮಕಥೆಗಳಿಗೆ ಅಥವಾ ಕುಟುಂಬದ ಚೌಕಟ್ಟಿಗೆ ಸೀಮಿತವಾಗಿದ್ದವು. ಆದರೆ ಈಗ, ನಟಿಯರು ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸುವ, ಮಹಿಳೆಯರ ಆಂತರಿಕ ಶಕ್ತಿ, ಹೋರಾಟ, ಕನಸುಗಳು..
ಪೂರ್ತಿ ಓದಿ05:08 PM (IST) Apr 23
ಅನುಷ್ಕಾ ಶರ್ಮಾ ಬಾಲಿವುಡ್ನಲ್ಲಿ ಟಾಪ್ ನಟಿಯಾಗಿ ಮಿಂಚಲು ಕಾರಣ ಚೀನಿಯರು ನಂಬುವ ಫೆಂಗ್ ಶೂಯಿ ಆಮೆಯಂತೆ! ನಟಿಯೇ ಇದನ್ನು ರಿವೀಲ್ ಮಾಡಿದ್ದಾರೆ ನೋಡಿ..
04:37 PM (IST) Apr 23
ಹೇಮಾ ಮಾಲಿನಿ ಬ್ಯೂಟಿ ಹಿಂದಿರೋ ಕಡ್ಲೆಹಿಟ್ಟು, ನಿಂಬೆಹಣ್ಣಿನ ಸೀಕ್ರೇಟ್ ಹೇಳಿದ ಪುತ್ರಿ ಇಶಾ ಡಿಯೋಲ್. ಅವರು ಹೇಳಿದ್ದೇನು?
04:34 PM (IST) Apr 23
ಬಾಲಿವುಡ್ ನಟ ಅಮೀರ್ ಖಾನ್ ಹಿಂದಿ ಚಿತ್ರರಂಗದಲ್ಲಿನ ಸೋಲುಗಳಿಗೆ ಕಂಟೆಂಟ್ ಕೊರತೆಯೇ ಕಾರಣ ಎಂದಿದ್ದಾರೆ. ಪ್ರೇಕ್ಷಕರ ಅಭಿರುಚಿ ಬದಲಾಗಿಲ್ಲ, ಆದರೆ ಚಿತ್ರ ನಿರ್ಮಾಪಕರು ನೀಡುತ್ತಿರುವ ಕಥೆಗಳಲ್ಲಿ ಬದಲಾವಣೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪೂರ್ತಿ ಓದಿ01:52 PM (IST) Apr 23
ಇಂದು ಯುವ ರಾಜ್‌ಕುಮಾರ್ ಹುಟ್ಟುಹಬ್ಬ. ಆದರೆ, ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡದೇ ಟೀಸರ್ ಬಿಡುಗಡೆಯನ್ನೂ ಚಿತ್ರತಂಡ ಮುಂದೂಡಿದೆ..
ಪೂರ್ತಿ ಓದಿ01:20 PM (IST) Apr 23
ಸಿಹಿ ಅಶೋಕ್ಗೆ ಕಾಣಿಸದಿದ್ದರೂ ಆಕೆ ಅಲ್ಲಿಯೇ ಇರುವುದನ್ನು ಫೀಲ್ ಮಾಡಿಕೊಳ್ತಿದ್ದಾನೆ ಅಶೋಕ. ಆಕೆ ಬಂದು ಅಪ್ಪಿಕೊಂಡಾಗ ಅಶೋಕ್ ನಟನೆಗೆ ವೀಕ್ಷಕರು ಭಾವುಕರಾಗಿದ್ದಾರೆ.
12:47 PM (IST) Apr 23
ನಟ ಶಿವರಾಜ್‌ಕುಮಾರ್ ಹಾಗೂ ಸುಧಾರಾಣಿ ಜೋಡಿ ಈಗಲೂ ಕೂಡ ಅನ್ಯೋನ್ಯವಾಗಿಯೇ ಇದ್ದಾರೆ. ಯಾವುದೋ ಕಾರ್ಯಕ್ರಮದಲ್ಲಿ, ವೇದಿಕೆಗಳಲ್ಲಿ ಸಿಕ್ಕಾಗ ಮಾತನ್ನಾಡುತ್ತಾರೆ, ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ರಣರಂಗ ..
ಪೂರ್ತಿ ಓದಿ12:37 PM (IST) Apr 23
ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಹತ್ಯೆಯ ಬಗ್ಗೆ ನೋವಿನ ಮಾತನಾಡಿದ ಅನುಪಮ್ ಖೇರ್ ನರಮೇಧ ಸುಳ್ಳು ಎನ್ನುವವರು ಈಗ ಮಾತನಾಡಿ ಎಂದು ಹೇಳಿದ್ದಾರೆ. ಅವರ ವಿಡಿಯೋದಲ್ಲಿ ಏನಿದೆ?