'ಯೇ ಮಾಯೆ ಚೇಸಾವೆ ಸಿನಿಮಾ ಪ್ರೊಮೋಶನ್‌ನಲ್ಲಿ ನಾನು ಭಾಗಿಯಾಗುತ್ತಿಲ್ಲ. ಅಭಿಮಾನಿಗಳಿಗೆ ನಾವಿಬ್ಬರೂ ಜೊತೆಯಾಗಿ ಪ್ರೊಮೋಶನ್ ಮಾಡೋದು ಇಷ್ಟ ಇರಬಹುದು. ಆದರೆ ಯಾವಾಗಲೂ ಅವರ ನಿರೀಕ್ಷೆಯನ್ನು ಪೂರೈಸಲು ಸಾಧ್ಯವಾಗೋದಿಲ್ಲ, ನಾಗಚೈತನ್ಯ ಜೊತೆಯಾಗಿ ಕಾಣಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇಂಥಾ ವದಂತಿಗಳನ್ನು ಯಾರು ಹಬ್ಬಿಸುತ್ತಾರೆ ಅಂತ ಗೊತ್ತಾಗಲ್ಲ." ಇವು ನಟಿ ಸಮಂತಾ ಮಾತುಗಳು
ಸಮಂತಾ ಹಾಗೂ ನಾಗಚೈತನ್ಯರ ನಿಜ ಜೀವನದ ಪ್ರೇಮಕಥೆಗೆ ಮುನ್ನುಡಿ ಬರೆದ 'ಯೇ ಮಾಯೆ ಚೇಸಾವೆ' ಸಿನಿಮಾ ಜು.18ಕ್ಕೆ ಮರು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಂತಾ ಹಾಗೂ ನಾಗಚೈತನ್ಯ ಜೊತೆಯಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು. ಈ ವದಂತಿಗಳನ್ನು ನಟಿ ತಳ್ಳಿಹಾಕಿದ್ದಾರೆ.
ಇನ್ನೊಂದೆಡೆ ಸಮಂತಾ ಮುಂಬೈಯಲ್ಲಿ ಜಿಮ್ ನಿಂದ ಮರಳುವಾಗ ರಸ್ತೆ ಮಧ್ಯೆ ಸುತ್ತುವೆಂದು ಅವರ ವೀಡಿಯೋ ಚಿತ್ರೀಕರಿಸಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಈ ವರ್ತನೆಗೆ ನಟಿ ಸಿಡಿಮಿಡಿಗೊಂಡಿದ್ದು, ನೆಟ್ಟಿಗರು ಸಮಂತಾ ಪರ ನಿಂತಿದ್ದಾರೆ.
ಈ ವೀಡಿಯೋ ಟ್ರೆಂಡಿಂಗ್ ಆಗಿದೆ.
11:05 PM (IST) Jun 19
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಬಾಲಿವುಡ್‌ಗೆ ಕಾಲಿಟ್ಟ ಅಪರೂಪದ ನಟಿಯರಲ್ಲಿ ನಟಿ ಜೆನಿಲಿಯಾ ಡಿಸೋಜಾ ಒಬ್ಬರು. ತಮ್ಮ ಖ್ಯಾತಿಗೆ ದಕ್ಷಿಣ ಚಿತ್ರಗಳೇ ಕಾರಣ ಎಂದು ಜೆನಿಲಿಯಾ ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
10:48 PM (IST) Jun 19
ಯಂಗ್ ಟೈಗರ್ ಎನ್.ಟಿ.ಆರ್. ದೇವರ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಯಶಸ್ಸನ್ನು ಗಳಿಸಿತು. ಪ್ರಸ್ತುತ ಎನ್.ಟಿ.ಆರ್. ಪ್ರಶಾಂತ್ ನೀಲ್ ನಿರ್ದೇಶನದ ಡ್ರ್ಯಾಗನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
10:34 PM (IST) Jun 19
ಧನುಷ್, ನಾಗಾರ್ಜುನ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕುಬೇರ' ಚಿತ್ರ ಶುಕ್ರವಾರ ರಂದು ಬಿಡುಗಡೆಯಾಗಿದೆ. ಚಿತ್ರದ ಸೆನ್ಸಾರ್ ರಿವ್ಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
10:10 PM (IST) Jun 19
'ಮಿರ್ಜಾಪುರ್' ಸರಣಿಯ ಯಶಸ್ಸಿನ ನಂತರ ಶ್ರಿಯಾ ಅವರಿಗೆ ಅವಕಾಶಗಳ ಮಹಾಪೂರವೇ ಹರಿದುಬಂತು. 'ಗಿಲ್ಟಿ ಮೈಂಡ್ಸ್', 'ದಿ ಬ್ರೋಕನ್ ನ್ಯೂಸ್', 'ತಾಜಾ ಖಬರ್' ನಂತಹ ವಿಭಿನ್ನ ಕಥಾಹಂದರದ ವೆಬ್ ಸರಣಿಗಳಲ್ಲಿ ನಟಿಸುವ ಮೂಲಕ ಅವರು ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
10:10 PM (IST) Jun 19
ಕನ್ನಡದಲ್ಲಿ ಈ ವಾರ ಯಾವ ಧಾರಾವಾಹಿಗೆ ನಂ 1 ಸ್ಥಾನ ಸಿಕ್ಕಿದೆ? ಟಾಪ್ 10 ಧಾರಾವಾಹಿಗಳು ಯಾವುವು?
08:49 PM (IST) Jun 19
ಲಕ್ಷ್ಮೀ ನಿವಾಸ ಧಾರಾವಾಹಿ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದೆ. ಅಂದಹಾಗೆ ಈ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ಅಲಿಯಾಸ್ ವಿನೂದಿನಿ ಅವರು ನಟಿಸುತ್ತಿದ್ದಾರೆ.
07:48 PM (IST) Jun 19
07:14 PM (IST) Jun 19
ಭವ್ಯಾ ಗೌಡ ವಿರುದ್ಧ ಕೇಸ್ ದಾಖಲಾಗಿರುವ ಹಿನ್ನೆಲೆಯಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಆಗಬೇಕಿದ್ದ ಕರ್ಣ ಸೀರಿಯಲ್ ಸದ್ಯ ಸ್ಥಗಿತಗೊಂಡಿದೆ. ಆದರೆ ಈ ಸೀರಿಯಲ್ ಬಗ್ಗೆ ಭವ್ಯಾ ಹೇಳಿದ್ದೇನು? ಇಲ್ಲಿದೆ ವಿಡಿಯೋ
05:41 PM (IST) Jun 19
'ನಂಜುಂಡಿ ಕಲ್ಯಾಣ'ದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಲಾಶ್ರೀ ಅವರು ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ. ವರ್ಷಕ್ಕೆ ಎರಡು-ಮೂರು ಚಿತ್ರಗಳಲ್ಲಿ ನಟಿಸುತ್ತ ನಟಿ ಮಾಲಾಶ್ರೀ ಅವರು ಹಿಂದೆ ಯಾರೂ ಏರದಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದರು.
04:33 PM (IST) Jun 19
ಜೂನ್ 20 ರಂದು ಬಿಡುಗಡೆಯಾಗಲಿರುವ ಆಮಿರ್ ಖಾನ್ ಅವರ ಹೊಸ ಚಿತ್ರ ಸೀತಾರೆ ಜಮೀನ್ ಪರ್ ನ ಅಡ್ವಾನ್ಸ್ ಬುಕಿಂಗ್ ಅಂಕಿಅಂಶಗಳು ಹೊರಬಿದ್ದಿವೆ.
03:01 PM (IST) Jun 19
ಚಿಕ್ಕ ವಯಸ್ಸಲ್ಲೇ ಸ್ಟಾರ್ ಆದ ಹಲವು ನಟಿಯರು ಜೀವನದಲ್ಲಿ ಕಷ್ಟ ಅನುಭವಿಸಿದ್ದಾರೆ. ಕೆಲವರು ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಾರೆ. ಕೆರಿಯರ್ ಚೆನ್ನಾಗಿರ್ಬೇಕಾದ್ರೆ ಜೈಲಿಗೆ ಹೋಗಿ ಅವಕಾಶಗಳನ್ನ ಕಳೆದುಕೊಂಡ ನಟಿ ಯಾರು ಗೊತ್ತಾ?
02:34 PM (IST) Jun 19
ಹದಿಹರೆಯದ ಪ್ರೀತಿ, ಚಂಚಲ ಮನಸ್ಸುಗಳು, ಮತ್ತು ದುರಂತ ಪ್ರೇಮಕಥೆಯೊಂದು 2007ರಲ್ಲಿ ತೆರೆಕಂಡ ಸಿನಿಮಾ ಮೂಲಕ ಬಿಚ್ಚಿಟ್ಟಿದೆ. ಚಿತ್ರದ ಕಥೆ ಕೇವಲ ಸಿನಿಮಾವಾಗಿ ಉಳಿಯದೆ, ಒಂದು ಅಲೆಯನ್ನೇ ಸೃಷ್ಟಿಸಿತು.
02:31 PM (IST) Jun 19
18ನೇ ಕ್ರಾಸ್ ಚಿತ್ರದ ಮೂಲಕ ಸಿನಿಮಾಗೆ ಪ್ರವೇಶ ಪಡೆದ ರಾಧಿಕಾ ಪಂಡಿತ್ ಅವರ ಬಿಡುಗಡೆಯಾದ ಮೊದಲ ಸಿನಿಮಾ 'ಮೊಗ್ಗಿನ ಮನಸ್ಸು'. ಈ ಚಿತ್ರದಲ್ಲಿ ನಟ ಯಶ್ ಕೂಡ (ಈಗ ರಾಧಿಕಾ ಪಂಡಿತ್ ಪತಿ) ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ.
01:22 PM (IST) Jun 19
ಇತ್ತೀಚೆಗೆ ರಣವೀರ್ ಸಿಂಗ್ ಅವರ 'ಸರ್ಕಸ್' ಮತ್ತು 'ಜಯೇಶ್‌ಭಾಯ್ ಜೋರ್ದಾರ್' ನಂತಹ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ, 'ದುರಂಧರ್' ಚಿತ್ರವು ಅವರ ವೃತ್ತಿಜೀವನಕ್ಕೆ ಒಂದು ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ
01:09 PM (IST) Jun 19
ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಪುತ್ರಿ ಶಮಿಕಾ ಬಗ್ಗೆ ಮಾತನಾಡುತ್ತಾ ಶೀಘ್ರದಲ್ಲೇ ಸರ್ಪ್ರೈಸ್ ಕೊಡ್ತೇನೆ ಎಂದಿದ್ದಾರೆ. ಏನದು ಸೀಕ್ರೇಟ್? ನಟಿ ಹೇಳಿದ್ದೇನು ಕೇಳಿ...
01:05 PM (IST) Jun 19
`ಆರ್‌ಆರ್‌ಆರ್` ನಟ ಅಜಯ್ ದೇವಗನ್ ಅವರ ಪತ್ನಿ, ಸ್ಟಾರ್ ನಟಿ ಕಾಜೋಲ್, ರಾಮೋಜಿ ಫಿಲಂ ಸಿಟಿಯ ಬಗ್ಗೆ ಮಾಡಿದ ಹೇಳಿಕೆಗಳು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿವೆ.
12:47 PM (IST) Jun 19
ಈ ಚಿತ್ರದಲ್ಲಿ ಹುತಾತ್ಮ ಯೋಧನೊಬ್ಬನ ಪತ್ನಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇದು ಕೇವಲ ಸಾಂಪ್ರದಾಯಿಕ ನಾಯಕಿಯ ಪಾತ್ರವಲ್ಲ, ಬದಲಿಗೆ ಕಥೆಯ ಆತ್ಮವನ್ನು ಹಿಡಿದಿಡುವ ಅತ್ಯಂತ ಸವಾಲಿನ ಮತ್ತು ಭಾವನಾತ್ಮಕ ಪಾತ್ರವಾಗಿದೆ.
12:41 PM (IST) Jun 19
ವಯಸ್ಸೆನ್ನುವುದು ಕೇವಲ ಸಂಖ್ಯೆಯಷ್ಟೇ ಎನ್ನುತ್ತಿರುವ 51 ವರ್ಷದ ಬಾಲಿವುಡ್ ಮಾದಕ ಬೆಡಗಿ ಮಲೈಕಾ ಅರೋರಾ ಈಗ 'ಆಜ್ ಕೀ ರಾತ್' ಹಾಡಿಗೆ ಸ್ಟೆಪ್ ಹಾಕಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ!
12:36 PM (IST) Jun 19
ಶೇಖರ್ ಕಮ್ಮುಲ ನಿರ್ದೇಶನದ ಧನುಷ್ ನಟನೆಯ ಕುಬೇರ ಚಿತ್ರದಲ್ಲಿ ನಟಿಸಿದವರಿಗೆ ಎಷ್ಟು ಸಂಭಾವನೆ ನೀಡಲಾಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
12:19 PM (IST) Jun 19
ನಾನು 40ರ ವಯಸ್ಸಿನಲ್ಲಿ ನಟನೆಗೆ ಬಂದೆ. ಹಾಗಂತ ಚಿತ್ರರಂಗ ನನ್ನನ್ನು ಗುರುತಿಸಲು ತಡ ಮಾಡಿತು ಎಂದು ನಾನು ದೂರುವುದಿಲ್ಲ. ಆ ಅವಕಾಶಕ್ಕಾಗಿ ನಾನು ಸಿದ್ಧನಾಗಲು ತೆಗೆದುಕೊಂಡ ಸಮಯವದು. ನೀವು ಸರಿಯಾದ ಸಮಯಕ್ಕೆ ಬಸ್ ನಿಲ್ದಾಣದಲ್ಲಿ ಇಲ್ಲದಿದ್ದರೆ, ಬಸ್ ತಡವಾಗಿ ಬಂತು ಎಂದು ದೂರುವಂತಿಲ್ಲ.
12:06 PM (IST) Jun 19
ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ, ಬೇಗನೆ ಕೆರಿಯರ್‌ಗೆ ಬ್ರೇಕ್ ಹಾಕಿಕೊಂಡ ನಟಿಯರ ಬಗ್ಗೆ ತಿಳಿಯೋಣ. ಒಬ್ಬ ನಟಿ ಈಗ ಏನು ಮಾಡ್ತಿದ್ದಾರೆ ಅಂತ ನೋಡೋಣ.
12:02 PM (IST) Jun 19
ನೈಸಾ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಚಿತ್ರಗಳು, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆದಾಗಲೆಲ್ಲಾ, ಕೆಲವರು ಅವರ ಉಡುಗೆ, ಜೀವನಶೈಲಿ ಮತ್ತು ನೋಟದ ಬಗ್ಗೆ ಕಟುವಾಗಿ ಟೀಕಿಸುತ್ತಾರೆ. ಈ ಬಗ್ಗೆ ಮೌನ ಮುರಿದಿರುವ ಕಾಜೋಲ್…
11:31 AM (IST) Jun 19
ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ನಟನೆಯ ಹೊಸ ಸಿನಿಮಾ ‘666 ಆಪರೇಷನ್ ಡ್ರೀಮ್ ಥಿಯೇಟರ್’. ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್.
11:21 AM (IST) Jun 19
೧೯೬೨ ಜೂನ್ ೧೯ ರಂದು ಕೇರಳದ ಕುನ್ನೂರಿನಲ್ಲಿ ಜನಿಸಿದ ಆಶೀಶ್ ವಿದ್ಯಾರ್ಥಿ, ಅಭಿನಯದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಂಡರು. ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡ ಅವರ 7 ಚಿತ್ರಗಳ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ತಿಳಿದುಕೊಳ್ಳೋಣ.
10:28 AM (IST) Jun 19
2 ಕೋಟಿ ರೂ.ಗೂ ಹೆಚ್ಚಿನ ಸುಲಿಗೆ ಪ್ರಕರಣದಲ್ಲಿ ಬೇಕಾಗಿದ್ದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಕೀರ್ತಿ ಪಾಟೀಲ್‌ಳನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ.
10:21 AM (IST) Jun 19
‘ಅಮೀರ್ ಖಾನ್ ನೋಡಿದ್ರೆ ಅರವತ್ತನೆಯ ವಯಸ್ಸಿಗೆ ಗೌರಿ ಜೊತೆ ಮದುವೆ ಆಗಲು ಹೊರಟಿದ್ದಾರೆ. ನಿಮ್ಮ ಕಥೆ ಏನು?’ ಅಂತ ಬಾಲಿವುಡ್‌ನ ಮಿ ಬ್ಯಾಚುಲರ್ ಅಂತಲೇ ಫೇಮಸ್ ಆದ ಸಲ್ಲೂ ಬಾಯ್‌ಗೆ ಪ್ರಶ್ನೆ ಕೇಳಲಾಗಿದೆ.
07:14 AM (IST) Jun 19
Kajal Aggarwal Net Worth: ನಟಿ ಕಾಜಲ್ ಅಗರ್ವಾಲ್ ಇಂದು ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಅವರ ಸಂಪತ್ತಿನ ಬಗ್ಗೆ ಈ ಲೇಖನದಲ್ಲಿ ನೋಡೋಣ.