ಕನ್ನಡ ಬಿಗ್ ಬಾಸ್-5ನಲ್ಲಿ ಯಾರಾರಿರುತ್ತಾರೆ? ಇಲ್ಲಿದೆ ಪಟ್ಟಿ

Published : Oct 10, 2017, 05:23 PM ISTUpdated : Apr 11, 2018, 01:05 PM IST
ಕನ್ನಡ ಬಿಗ್ ಬಾಸ್-5ನಲ್ಲಿ ಯಾರಾರಿರುತ್ತಾರೆ? ಇಲ್ಲಿದೆ ಪಟ್ಟಿ

ಸಾರಾಂಶ

ಬಿಗ್ ಬಾಸ್ ಸೀಜನ್-5 ನಲ್ಲಿ ಇನ್ನೂ ಒಂದು ಇಂಟ್ರಸ್ಟಿಂಗ್ ವಿಚಾರ ಇದೆಯಂತೆ. ಅದುವೇ ಶ್ರೀಸಾಮಾನ್ಯರು, ಸೆಲೆಬ್ರಿಟಿಗಳ ವರ್ಗೀಕರಣ. ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯರೂ ಬಿಗ್ ಬಾಸ್ ಮನೆ ಸೇರಲಿದ್ದಾರೆ. ಸೆಲೆಬ್ರಿಟಿಗಳು ಮತ್ತು ಸಾಮಾನ್ಯರ ನಡುವಿನ ಹೊಂದಾಣಿಕೆ ಹೇಗೆ ಎಂಬುದನ್ನು ನೋಡಿಯೇ ತಿಳಿಯಬೇಕು. ಬಿಗ್ ಬಾಸ್ ಮನೆಯ ಅಡುಗೆ ಮನೆಗೂ ಕಿಚ್ಚ ಸುದೀಪ್ ಹೋಗ್ತಿದ್ದಾರೆ. ಆದರೆ, ಯಾವುದೂ ಕೂಡ ಖಚಿತವಾಗಿ ಹೇಳೋದು ಕಷ್ಟ. ಯಾಕೆಂದ್ರೆ, ಬಿಗ್ ಬಾಸ್ ಇನ್ನೂ ಹಲವು ಸರ್ಪೈಸ್'ಗಳೊಂದಿಗೆ ಶುರು ಆಗುತ್ತಿದೆ.

ಬೆಂಗಳೂರು(ಅ. 10): ಕನ್ನಡದ ಬಿಗ್ ಬಾಸ್ ಸೀಸನ್ -5 ಇದೇ ಅಕ್ಟೋಬರ್ 15ರಂದು ಪ್ರಾರಂಭವಾಗುತ್ತಿದೆ. ಎಂದಿನಂತೆ ಈ ಸಲವೂ ಸ್ಪರ್ಧಿಗಳ ಬಗ್ಗೆ ಕುತೂಹಲ ಇದೆ. ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ ಗುಂಡ್ಕಲ್ ಮತ್ತೆ ಎಲ್ಲವನ್ನೂ ಗೌಪ್ಯವಾಗಿಯೇ ಇಟ್ಟಿದ್ದಾರೆ. ಟ್ಯಾಸ್ಕ್ ಸೇರಿದಂತೆ ಬಿಗ್ ಬಾಸ್ ಕಾರ್ಯಕ್ರಮದ ಯಾವುದೇ ವಿಷಯವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಈ ಮಧ್ಯೆಯೇ ಅವರು ಹೋಗ್ತಾರೆ, ಇವರು ಹೋಗ್ತಾರೆ ಎಂಬ ಸಂಭವನೀಯರ ಪಟ್ಟಿಗಳೂ ಹರಿದಾಡುತ್ತಿವೆ. ಆ ಪಟ್ಟಿಯಲ್ಲಿ ನಾಯಕ ಜೆಕೆ., ಡೈರೆಕ್ಟರ್ ದಯಾಳ್ ಪದ್ಮನಾಭನ್, ನಟ ಜಗನ್, ಕನ್ನಡ ರ್ಯಾಪರ್ ಚಂದನ್ ಶೆಟ್ಟಿ, ಅನೂಪ್ ಗೌಡ, ಸಂಖ್ಯಾಶಾಸ್ತ್ರಜ್ಞ ಜೈಶ್ರೀನಿವಾಸನ್, ಕುಸುಮಾ, ರಿಯಾಜ್ ಭಾಷಾ, ತೇಜಸ್ವಿ, ಮಾಡಲ್ ಫೋಟೋಗ್ರಾಫರ್ ಸಮೀರ್ ಆಚಾರ್ಯ, ಸಿಹಿಕಹಿ ಚಂದ್ರು ಕೂಡ ಇದ್ದಾರೆ. ಇವರಲ್ಲದೇ ನಾಗಮಂಡಲದ ವಿಜಯಲಕ್ಷ್ಮೀ, ರಾಜೇಶ್ ನಟರಂಗ, ಕಿರುತೆರೆಯ ಕಿರಿಕ್ ನಟಿ ಕವಿತಾ ಗೌಡ, ಗಾಯಕಿ ಸುಪ್ರಿಯಾ ಲೋಹಿತ್ ಹೆಸರು ಕೂಡ ಕೇಳಿ ಬರುತ್ತಿದೆ. ಒಟ್ಟು 17 ಸ್ಪರ್ಧಿಗಳು ಈ ಸೀಸನ್'ಗೆ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ.

ಆದರೆ, ಬಿಗ್ ಬಾಸ್ ಸೀಜನ್-5 ನಲ್ಲಿ ಇನ್ನೂ ಒಂದು ಇಂಟ್ರಸ್ಟಿಂಗ್ ವಿಚಾರ ಇದೆಯಂತೆ. ಅದುವೇ ಶ್ರೀಸಾಮಾನ್ಯರು, ಸೆಲೆಬ್ರಿಟಿಗಳ ವರ್ಗೀಕರಣ. ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯರೂ ಬಿಗ್ ಬಾಸ್ ಮನೆ ಸೇರಲಿದ್ದಾರೆ. ಸೆಲೆಬ್ರಿಟಿಗಳು ಮತ್ತು ಸಾಮಾನ್ಯರ ನಡುವಿನ ಹೊಂದಾಣಿಕೆ ಹೇಗೆ ಎಂಬುದನ್ನು ನೋಡಿಯೇ ತಿಳಿಯಬೇಕು. ಬಿಗ್ ಬಾಸ್ ಮನೆಯ ಅಡುಗೆ ಮನೆಗೂ ಕಿಚ್ಚ ಸುದೀಪ್ ಹೋಗ್ತಿದ್ದಾರೆ. ಆದರೆ, ಯಾವುದೂ ಕೂಡ ಖಚಿತವಾಗಿ ಹೇಳೋದು ಕಷ್ಟ. ಯಾಕೆಂದ್ರೆ, ಬಿಗ್ ಬಾಸ್ ಇನ್ನೂ ಹಲವು ಸರ್ಪೈಸ್'ಗಳೊಂದಿಗೆ ಶುರು ಆಗುತ್ತಿದೆ.

ಸಂಭಾವ್ಯ ಸ್ಪರ್ಧಿಗಳ ಪಟ್ಟಿ:
* ಜಯಕೃಷ್ಣ (ಜೆಕೆ ಖ್ಯಾತಿಯ ನಟ)
* ದಯಾಳ್ ಪದ್ಮನಾಭನ್, ಚಿತ್ರನಿರ್ದೇಶಕ
* ಜಗನ್, ನಟ
* ಚಂದನ್ ಶೆಟ್ಟಿ, ಹಾಡುಗಾರ
* ಅನೂಪ್ ಗೌಡ, ನಟ
* ಜೈಶ್ರೀನಿವಾಸನ್, ಸಂಖ್ಯಾಶಾಸ್ತ್ರಜ್ಞ
* ಕುಸುಮಾ
* ರಿಯಾಜ್ ಭಾಷಾ, ಆರ್'ಜೆ
* ತೇಜಸ್ವಿ
* ಸಮೀರ್ ಆಚಾರ್ಯ, ಮಾಡೆಲ್ ಫೋಟೋಗ್ರಾಫರ್
* ಸಿಹಿಕಹಿ ಚಂದ್ರು, ನಟ
* ವಿಜಯಲಕ್ಷ್ಮೀ, ನಟಿ
* ರಾಜೇಶ್ ನಟರಂಗ, ನಟ
* ಕವಿತಾ ಗೌಡ, ನಟಿ
* ಸುಪ್ರಿಯಾ ಲೋಹಿತ್, ನಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?
ಗಂಡ-ಹೆಂಡ್ತಿ ಮಲಗಿದ್ರೂ ಬೆಡ್​ರೂಂ ಯಾವಾಗ್ಲೂ ಯಾಕೆ ಓಪನ್​ ಇರ್ಬೇಕು ಗೊತ್ತಾ? ಸೀರಿಯಲ್​ ಪ್ರೇಮಿಗಳು ಉತ್ತರಿಸ್ತಾರೆ ಕೇಳಿ!