ರಾಜಹುಲಿ ಬೆಡಗಿ ಜೊತೆ ವಾಯುಪುತ್ರನ ವಿವಾಹ

Published : Oct 09, 2017, 11:42 PM ISTUpdated : Apr 11, 2018, 12:49 PM IST
ರಾಜಹುಲಿ ಬೆಡಗಿ ಜೊತೆ ವಾಯುಪುತ್ರನ ವಿವಾಹ

ಸಾರಾಂಶ

ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಂಡು ಈ ಊಹಾಪೋಹಕ್ಕೆ ಮತ್ತಷ್ಠು ಪುಷ್ಠಿ ನೀಡಿದ್ದರು. ಎಷ್ಟೇ ವದಂತಿ ಹಬ್ಬಿದ್ದರೂ ಅದೆಲ್ಲ ಸುಳ್ಳು ಎಂದು ತೆರೆ ಎಳೆಯುತ್ತಲೇ ಬಂದಿದ್ದರು

ರಾಜಾ ಹುಲಿ ಬೆಡಗಿ.. ವಾಯುಪುತ್ರ.. ಆಟಗಾರದಲ್ಲಿ ಜೊತೆಯಾಗಿ ರಂಜಿಸಿದವರು ಈಗ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಬಾಳ ಪಯಣದಲ್ಲಿ ಒಂದಾಗಿ ಸಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಮೂಲಗಳ ಪ್ರಕಾರ ರಿಂಗ್ ಬದಲಾಯಿಸಲು ಮುಹೂರ್ತ ಕೂಡ ಫಿಕ್ಸ್ ಆಗಿದೆ. 

ಸ್ಯಾಂಡಲ್​ವುಡ್ ಆಕ್ಷನ್ ಹೀರೋ ಚಿರಂಜೀವಿ ಸರ್ಜಾ.. ಬಹುಭಾಷಾ ನಟಿ ಮೇಘನಾ.. ಆಟಗಾರ ಜೋಡಿ ಮೋಡಿಗೆ ಸಿನಿಪ್ರಿಯರು ಫಿದಾ ಆಗಿದ್ದರು. ಸೂಪರ್ ಜೋಡಿ ಎನಿಸಿಕೊಂಡಿದ್ದರು.ರೀಲ್ ಮೇಲಿನ ಜೋಡಿ.. ರಿಯಲ್​ನಲ್ಲೂ ಜೋಡಿಯಾಗ್ತಿದೆ ಅನ್ನೋದು ಸುದ್ದಿ ಎರಡು ವರ್ಷದಿಂದಲೂ ಹರಿದಾಡ್ತಿತ್ತು. ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಂಡು ಈ ಊಹಾಪೋಹಕ್ಕೆ ಮತ್ತಷ್ಠು ಪುಷ್ಠಿ ನೀಡಿದ್ದರು. ಎಷ್ಟೇ ವದಂತಿ ಹಬ್ಬಿದ್ದರೂ ಅದೆಲ್ಲ ಸುಳ್ಳು ಎಂದು ತೆರೆ ಎಳೆಯುತ್ತಲೇ ಬಂದಿದ್ದರು. ಆದ್ರೀಗ  ಊಹಾಪೋಹವೇ ನಿಜವಾಗುತ್ತಿದೆ.  ಬಲ್ಲ ಮೂಲಗಳ ಪ್ರಕಾರ ಇದೇ 22 ಕ್ಕೆ ಸರಳವಾಗಿ ಮೇಘನಾ ಮತ್ತು ಚಿರು ನಿಶ್ಚಿತಾರ್ಥ ಆಗುತ್ತಿದೆ.

ಇಷ್ಟೇ ಅಲ್ಲ. ಮದುವೆ ಡೇಟ್ ಕೂಡ ಫಿಕ್ಸ್ ಆಗಿದಿಯಂತೆ. ಡಿಸೆಂಬರ್ 6 ರಂದು ಚಿರು ಮತ್ತು ಮೇಘನಾ ಮದುವೆ ನಡೆಯಲಿದಿಯಂತೆ. ಬಟ್ ಚಿರಂಜೀವಿ ಸರ್ಜಾ ಮಾತ್ರ ಇದು ಸುಳ್ಳು ಎನ್ನುತ್ತಿದ್ದಾರೆ. ಹಿಂದೆಲ್ಲಾ ಇವರಿಬ್ಬರು ಮದುವೆ ಆಗ್ತಾರೆ ಅನ್ನೋ ವದಂತಿಯಿತ್ತು.. ಆದರೆ ಈ ಬಾರಿ ಎಂಗೇಜ್​ಮೆಂಟ್ ಡೇಟ್ ಜೊತೆಗೆ ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ ಅನ್ನೋ ಸುದ್ದಿಯೂ ಹಬ್ಬಿದೆ. ಇದು ನಿಜವೋ, ಸುಳ್ಳೋ ಎಂಬ  ಉತ್ತರ ಸಿಗಬೇಕಂದರೆ ಅಭಿಮಾನಿಗಳು ಕಾಯಲೇಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಮಾಯಣ ಸೆಟ್‌ನಲ್ಲಿ ನಾನು ವಾತಾವರಣವನ್ನೇ ಹಾಳು ಮಾಡ್ತಿದ್ದೆ ಎಂದ ಯಶ್: ಕಾರಣ ಇದೇ!
ಪತಿ ಜೊತೆ ಪ್ರಿಯಾಂಕಾ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ? ಈ ಬಗ್ಗೆ ಖುದ್ದು ನಟಿ ಹೇಳಿದ್ದೇನು