
ಮುಂಬೈ(ಅ.09): ಸಲ್ಮಾನ್ ಖಾನ್‌ರ ‘ಬಿಗ್‌ಬಾಸ್’ ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತಿದೆ, ಇದೀಗ ೧೧ನೇ ಆವೃತ್ತಿಯೂ ವಿವಾದಕ್ಕೆ ಗುರಿಯಾಗಿದೆ.
ಸಲ್ಮಾನ್‌ರಿಂದ ನಿಂದನೆಗೊಳಗಾಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ಶೋನಲ್ಲಿ ಸ್ಪರ್ಧಿಯಾಗಿದ್ದ ಜುಬೇರ್ ಖಾನ್, ಇದೀಗ ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್‌ರ ಅಳಿಯ ಜುಬೇರ್ ಖಾನ್ ವಿವಾದದ ಕೇಂದ್ರವಾಗಿದ್ದು, ಶೋನಲ್ಲಿ ಅವರ ವರ್ತನೆ ಮತ್ತು ಅದರಿಂದ ಹೊರಬಂದ ಬಳಿಕವೂ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಪ್ನಾ ಚೌ‘ರಿ, ಪುನೀಶ್ ಶರ್ಮಾ, ಆರ್ಷಿ ಖಾನ್ ಮತ್ತು ಜುಬೇರ್ ಖಾನ್ ನಡುವೆ ವಾಗ್ವಾದ ನಡೆದಿತ್ತು. ಅದಕ್ಕಾಗಿ ಕಾರ್ಯಕ್ರಮದ ನಿರ್ವಾಹಕರಾದ ಸಲ್ಮಾನ್ ಖಾನ್ ಖಡಕ್ ನುಡಿಯಿಂದ ಜುಬೇರ್ ಖಾನ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರಿಂದ ಮನನೊಂದು, ಜುಬೇರ್ ಮಾತ್ರೆ ತೆಗೆದುಕೊಂಡು ಅಸ್ವಸ್ಥರಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.