ಬಾಲಿವುಡ್ ನಟ ಹೃತಿಕ್ ರೋಶನ್‌ ಜೊತೆ ಸಿನಿಮಾ ಘೋಷಿಸಿದ ಹೊಂಬಾಳೆ; ಬಜೆಟ್ ಎಷ್ಟು, ನಾಯಕಿ ಯಾರು..?

Published : May 28, 2025, 06:19 PM ISTUpdated : May 28, 2025, 07:49 PM IST
Hrithik Roshan

ಸಾರಾಂಶ

ರಾಜಕುಮಾರ, ಯುವರತ್ನ, ಕೆಜಿಎಫ್, ಕಾಂತಾರ ಮತ್ತು ಬಘೀರಾದಂತಹ ಯಶಸ್ವಿ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಹೊಂಬಾಳೆ ಫಿಲಂಸ್, ಯಾವಾಗಲೂ ಮೌಲ್ಯಯುತ ಕಥೆಗಳನ್ನು ಹೇಳುವಲ್ಲಿ ಮತ್ತು ಉತ್ತಮ ಮನರಂಜನೆ..

ಹೊಂಬಾಳೆ ಫಿಲಂಸ್ ಭಾರತೀಯ ಚಿತ್ರರಂಗದ ಪ್ರಮುಖ ನಟ ಹೃತಿಕ್ ರೋಷನ್ ಅವರೊಂದಿಗೆ ಹೊಸ ಚಿತ್ರವೊಂದನ್ನು ಘೋಷಿಸಿದೆ. ಈ ಮೂಲಕ, ಕನ್ನಡ ನೆಲದಿಂದ ಜಾಗತಿಕ ರಂಗಕ್ಕೆ ತಮ್ಮ ಪಯಣವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಹೃತಿಕ್ ರೋಶನ್ ಅವರೊಂದಿಗೆ ಸಿನಿಮಾ ಮಾಡಲು ಕನ್ನಡ ನೆಲದ ಸಂಸ್ಥೆ ಹೊಂಬಾಳೆ ಮುಂದಾಗಿದೆ.

ರಾಜಕುಮಾರ, ಯುವರತ್ನ, ಕೆಜಿಎಫ್, ಕಾಂತಾರ ಮತ್ತು ಬಘೀರಾದಂತಹ ಯಶಸ್ವಿ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಹೊಂಬಾಳೆ ಫಿಲಂಸ್, ಯಾವಾಗಲೂ ಮೌಲ್ಯಯುತ ಕಥೆಗಳನ್ನು ಹೇಳುವಲ್ಲಿ ಮತ್ತು ಉತ್ತಮ ಮನರಂಜನೆ ನೀಡುವಲ್ಲಿ ಬದ್ಧವಾಗಿದೆ. ಈಗ, ಹೃತಿಕ್ ರೋಷನ್ ಅವರಂತಹ ಪ್ರತಿಭಾವಂತ ನಟರೊಂದಿಗೆ ಕೈಜೋಡಿಸಿ, ದೇಶದ ಗಡಿಗಳನ್ನು ಮೀರಿ, ಪ್ರಪಂಚದಾದ್ಯಂತ ಕಥೆಗಳನ್ನು ತಲುಪಿಸುವ ಕನಸು ಕಂಡಿದೆ.

ಕನ್ನಡ ನೆಲದಿಂದ ಬಾಲಿವುಡ್ ಅಂಗಳಕ್ಕೆ ಜಿಗಿದಿರುವ ಹೊಂಬಾಳೆ ಸಂಸ್ಥೆಯ ಈ ಪ್ರಯತ್ನಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಖುಷಿ ವ್ಯಕ್ತಪಡಿಸಿ ಗ್ರೇಟ್ ಎಂದಿದ್ದು, ಅಭಿನಂದನೆ ಕೂಡ ಹೇಳಿದ್ದಾರೆ. ನಟ ಹೃತಿಕ್ ರೋಶನ್ ಅವರು ವಿಶ್ವಮಟ್ಟದಲ್ಲಿ ಫ್ಯಾನ್ಸ್‌ ಫಾಲೋವರ್ಸ್ ಹಾಗೂ ಹೆಸರು ಹೊಂದಿದ್ದಾರೆ. ಜಗತ್ತಿನ ಹತ್ತು ಸುಂದರ ಪುರುಷರಲ್ಲಿ ನಟ ಹೃತಿಕ್ ರೋಶನ್ ಹೆಸರು ಕೂಡ ಇದೆ. ಇಂಥ ನಟ ಹೃತಿಕ್ ರೋಶನ್ ಇದೀಗ 'ಹೊಂಭಾಳೆ ಫಿಲಂ'ಸ್ ಜೊತೆ ಸಿನಿಮಾಗೆ ಸಹಿ ಹಾಕಿದ್ದಾರೆ.

ಅಂದಹಾಗೆ, ಹೊಂಬಾಳೆ ಫಿಲಂಸ್ ಯಾವತ್ತೂ ಬಿಗ್ ಬಜೆಟ್ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ. ಜೊತೆಗೆ, ಸಿನಿಮಾಗೆ ಕಥೆ ಆಯ್ಕೆ ಮಾಡಿಕೊಳ್ಳುವಲ್ಲಿ ಕೂಡ ಯಾವತ್ತೂ ಎಡವಿದ ಉದಾಹರಣೆ ಇಲ್ಲ. ಈ ಎಲ್ಲ ಕಾರಣಗಳಿಂದ, ಸದ್ಯ ಈ ಸಂಸ್ಥೆ ಕೈಗೆತ್ತಿಕೊಂಡಿರುವ ಹೊಸ ಪ್ರಾಜೆಕ್ಟ್ ಬಗ್ಗೆ ಗಣನೀಯ ಎನ್ನುವಷ್ಟು ನಿರೀಕ್ಷೆ ಮನೆಮಾಡಿದೆ. ಉಳಿದ ತಾರಾಗಣ ಸೇರಿದಂತೆ ಮಿಕ್ಕೆಲ್ಲಾ ಮಾಹಿತಿಗಳು ಸದ್ಯದಲ್ಲೇ ಹೊರಬೀಳಲಿದೆ.

ಕನ್ನಡ ಮೂಲದ ಹೊಂಬಾಳೆ ಸಂಸ್ಥೆ ಹೊಸ ಹೆಜ್ಜೆಯ ಮೂಲಕ ಬೆಳೆಯುತ್ತಿರುವುದು ನಿಜವಾಗಿಯೂ ಕನ್ನಡಿಗರ ಪಾಲಿಗೆ ಖುಷಿಯ ಸಂಗತಿ. ಈ ಸಂಸ್ಥೆಯಿಂದ ಇಲ್ಲಿಯವರೆಗೆ ಹೊರಬಂದಿರುವ ಸಿನಿಮಾಗಳೆಲ್ಲವೂ ಹಿಟ್ ಹಾಘೂ ಸೂಪರ್ ಹಿಟ್ ಆಗಿವೆ. ಆದ್ದರಿಂದ, ನಟ ಹೃತಿಕ್ ರೋಶನ್ ಜೊತೆಗಿನ ಮುಂಬರುವ ಸಿನಿಮಾ ಬಗ್ಗೆ ಕೂಡ ಭಾರೀ ನಿರೀಕ್ಷೆ ಮನೆಮಾಡಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Naa Ninna Bidalaare ಅಪ್ಪ-ಮಗಳ ಕ್ಯೂಟ್​ ಡಾನ್ಸ್​ ಭಾವುಕರಾಗಿ ಕಣ್ತುಂಬಿಸಿಕೊಂಡ ಅಭಿಮಾನಿಗಳು!
Bigg Boss ಇತಿಹಾಸದಲ್ಲೇ ಫಸ್ಟ್‌ ಟೈಮ್;‌ ಮನೆಯವ್ರ ಎಡವಟ್ಟಿನಿಂದ ಕಾವ್ಯ ಶೈವ ಬೆಲೆ ತೆರಬೇಕಾಗತ್ತಾ?