
ಬೆಂಗಳೂರು: ಒಂದೆರಡು ಸಿನಿಮಾಗಳು ಹಿಟ್ ಆದ್ರೆ ಸಾಕು ಕೆಲ ಕಲಾವಿದರು ತಮಗೆ ಪ್ರತ್ಯೇಕವಾದ ಕ್ಯಾರಾವ್ಯಾನ್ ಬೇಕೆಂದು ಡಿಮ್ಯಾಂಡ್ ಮಾಡುತ್ತಾರೆ. ಹಾಗೆಯೇ ಬಿಡುವಿನ ಸಮಯದಲ್ಲಿ ವಿಶ್ರಾಂತಿ ಪಡೆಯಲು ವಿಶೇಷ ವ್ಯವಸ್ಥೆ, ಫೈವ್ ಸ್ಟಾರ್ ಹೋಟೆಲ್‌ಗಳಿಂದ ಆಹಾರ ಕೇಳುತ್ತಾರೆ. ಇಂದು ನಾವು ಹೇಳುತ್ತಿರುವ ಈ ನಟ, ಕನ್ನಡ, ತೆಲಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಶೂಟಿಂಗ್ ವೇಳೆ ಎಲ್ಲರೊಂದಿಗೆ ಊಟ ಮಾಡುತ್ತಿರುವ ಮತ್ತು ಮನೆ ಮುಂದಿನ ಕಟ್ಟೆ ಮೇಲೆ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕಿಶೋರ್ ಕುಮಾರ್ ಜಿ. ಕನ್ನಡದ ಪ್ರತಿಭಾನ್ವಿತ ನಟ. ಸಿನಿಮಾಗಳ ಜೊತೆ ವೆಬ್ ಸಿರೀಸ್‌ಗಳಲ್ಲಿಯೂ ಕಿಶೋರ್ ನಟಿಸಿದ್ದಾರೆ. ಇತ್ತೀಚೆಗೆ ಸಿನಿಮಾ ಚಿತ್ರೀಕರಣದ ವೇಳೆ ಕೆಲವರು ಕಿಶೋರ್ ಕುಮಾರ್ ಅವರ ವಿಡಿಯೋವನ್ನು ಸೆರೆ ಹಿಡಿದುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಎಲ್ಲಾ ಸಿಬ್ಬಂದಿಗೆ ಆಹಾರ ಸಿದ್ಧಪಡಿಸಲಾಗಿರುತ್ತದೆ. ಸಹ ಕಲಾವಿದರು, ತಂತ್ರಜ್ಣರು ಸೇರಿದಂತೆ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡೋರಿಗೆ ಒಂದೇ ಮಾದರಿಯ ಊಟ ಇರುತ್ತದೆ. ಕೆಲವರು ಮನೆಯಿಂದ ಆಹಾರ ತೆಗೆದುಕೊಂಡು ಬರುತ್ತಾರೆ. ಬಹುತೇತರು ಸೆಟ್‌ನಲ್ಲಿ ನೀಡಲಾಗುವ ಆಹಾರ ಸೇವಿಸುತ್ತಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಿಶೋರ್ ಕುಮಾರ್, ಸೆಟ್‌ನಲ್ಲಿಯ ಆಹಾರವನ್ನೇ ಸೇವಿಸಿದ್ದಾರೆ. ನಂತರ ಶೂಟಿಂಗ್ ಸ್ಥಳದಲ್ಲಿರೋ ಕಟ್ಟೆ ಮೇಲೊಂದರ ಮೇಲೆ ಕುಳಿತು ವಿಶ್ರಾಂತಿ ಪಡೆದಿದ್ದಾರೆ. ನಂತರ ಅಲ್ಲಿಯೇ ಮಲಗಿದ್ದಾರೆ. ಈ ವೇಳೆ ಸಿಬ್ಬಂದಿಯೊಬ್ಬರು ಕಿಶೋರ್ ಅವರಿಗೆ ದಿಂಬು ನೀಡಲು ಬರುತ್ತಾರೆ. ಆದ್ರೆ ನಯವಾಗಿಯೇ ದಿಂಬು ತಿರಸ್ಕರಿಸುವ ಕಿಶೋರ್, ಓದುತ್ತಿದ್ದ ಪುಸ್ತಕವನ್ನು ತಲೆಗೆ ಆಸರೆಯಾಗಿಟ್ಟುಕೊಳ್ಳುತ್ತಾರೆ. ಈ ವಿಡಿಯೋ ನೋಡಿದ ಜನರು, ಕಿಶೋರ್ ಸರಳತೆಗೆ ಅಪಾರ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಚನ್ನಪಟ್ಟಣದವರಾದ ಕಿಶೋರ್ ಕುಮಾರ್, 2004ರಲ್ಲಿ ಕಂಠಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಕಂಠಿ ಚಿತ್ರದ ಬೀರ ಪಾತ್ರ ಕಿಶೋರ್ ಅವರಿಗೆ ದೊಡ್ಡ ಹಿಟ್ ನೀಡಿತ್ತು. ಮೊದಲ ಸಿನಿಮಾದಲ್ಲಿಯೇ ಇಡೀ ಚಿತ್ರರಂಗದ ಗಮನ ಸೆಳೆದ ಕಿಶೋರ್ ಕುಮಾರ್, ರಾಕ್ಷಸ, ಕಲ್ಲರಳಿ ಹೂವಾಗಿ, ಆಕಾಶ್, ಡೆಡ್ಲಿ ಸೋಮ, ವಿಷ್ಣು ಸೇನ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.