ರಿಷಬ್ ಶೆಟ್ಟಿ ಬಳಿ ಡಾ. ರಾಜ್‌ಕುಮಾರ್ 'ಕೌನ್ ಹೈ' ರಹಸ್ಯ ಹೇಳಿದ ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್!

Published : Nov 22, 2026, 09:06 PM IST
Dr Rajkumar Amitabh Bachchan Rishab Shetty

ಸಾರಾಂಶ

ರಿಷಬ್ ಶೆಟ್ಟಿಯವರು ಅಮಿತಾಭ್ ಬಚ್ಚನ್ ಜೊತೆ ಮಾತುಕತೆಯ ವೇಳೆ, ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು ಜಗತ್ತು ನೋಡಿದೆ. ಜೊತೆಗೆ, ರಿಷಬ್ ಶೆಟ್ಟಿಯವರು ಆ ಶೋದ ನಿರೂಪಕರಾದ ಅಮಿತಾಭ್ ಅವರಿಗೇ ಒಂದು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಾಲಿವುಡ್ ಅಮಿತಾಭ್ ಬಚ್ಚನ್ ಬಾಯಲ್ಲಿ ಕನ್ನಡದ ಡಾ ರಾಜ್‌ಕುಮಾರ್ ಗುಣಗಾನ!

ಕನ್ನಡದ ಮೇರುನಟ ಹಾಗೂ ನಿರ್ದೇಶಕರಾದ ರಿಷಬ್ ಶೆಟ್ಟಿಯವರು (Rishab Shetty) ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುವ 'ಕೌನ್‌ ಬನೇಗಾ ಕರೋಡ್‌ಪತಿ' (Kaun Banega Crorepati) ಶೋದಲ್ಲಿ ಭಾಗಿಯಾಗಿದ್ದು ಗೊತ್ತೇ ಇದೆ. ಅಲ್ಲಿ ನಟ ರಿಷಬ್ ಶೆಟ್ಟಿಯವರು ಅಮಿತಾಭ್ ಬಚ್ಚನ್ ಜೊತೆ ಮಾತುಕತೆಯ ವೇಳೆ, ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೂ ಜಗತ್ತು ನೋಡಿದೆ. ಜೊತೆಗೆ, ರಿಷಬ್ ಶೆಟ್ಟಿಯವರು ಆ ಶೋದ ನಿರೂಪಕರಾದ ಬಾಲಿವುಡ್ ಮೇರುನಟರಾದ ಅಮಿತಾಭ್ ಅವರಿಗೇ ಒಂದು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ನಾನು ಸಿನಿಮಾರಂಗಕ್ಕೆ ಬರುವ ಮೊದಲೇ ಅವರನ್ನ ಕಳೆದುಕೊಂಡಿದ್ದೇವೆ

ರಿಷಬ್ ಶೆಟ್ಟಿಯವರು- 'ಸರ್, ನಮ್ಮ ಕರ್ನಾಟಕದ ನಟ ಡಾ ರಾಜ್‌ಕುಮಾರ್ (Dr Rajkumar) ಅವರ ಬಗ್ಗೆ ನಾನು ನಿಮ್ಮ ಮಾತನ್ನು ಕೇಳಲು ಬಯಸುತ್ತೇನೆ. ನಾನು ಸಿನಿಮಾರಂಗಕ್ಕೆ ಬರುವ ಮೊದಲೇ ಅವರನ್ನ ಕಳೆದುಕೊಂಡಿದ್ದೇವೆ. ಹಾಗಾಗಿ ನನಗೆ ಅವರನ್ನು ನೋಡುವ ಒಡನಾಡುವ ಅವಕಾಶ ಸಿಗಲಿಲ್ಲ. ನಾವು ಅವರನ್ನು ಅಣ್ಣಾವ್ರು ಅಂತ ಕರಿತೀವಿ'.. ಎಂದು ಹೇಳುತ್ತಿದ್ದಂತೆ ಎಕ್ಸೈಟ್ ಆದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಾಚ್ಚನ್ ಅವರು- 'ಅರೇ.. ಖಂಡಿತ ಸರ್, ನಾನು ಅವರ ಬಗ್ಗೆ, ಅವರೊಂದಿಗೆ ಆಗಿರುವ ನನ್ನ ಭೇಟಯ ಬಗ್ಗೆ ಖಂಡಿತ ಹೇಳ್ತೀನಿ.. ನಾನು ಕೂಲಿ ಸಿನಿಮಾದ (1982) ವೇಳೆ ಬೆಂಗಳೂರಿನಲ್ಲಿ ಶೂಟಿಂಗ್‌ನಲ್ಲಿದ್ದೆ. ಅಲ್ಲಿ ನನ್ನ ಹೊಟ್ಟೆಗೆ ಏಟು ಆಗಿದ್ದು, ನನಗಾಗಿ ಕೋಟ್ಯಾಂತರ ಅಭಿಮಾನಿಗಳು ಪೂಜೆ, ಹರಕೆ ಹೊತ್ತಿದ್ದು, ಅವರೆಲ್ಲರ ಹಾರೈಕೆಯಿಂದಲೇ ಇಂದು ನಾನು ನಿಮ್ಮ ಮುಂದೆ ಇರುವುದು ಎಲ್ಲವೂ ಹೌದು.

ಅಂದು ಡಾ ರಾಜ್‌ಕುಮಾರ್ ಅವರು ಅದೇನು ಮಾಡಿದ್ರು ಗೊತ್ತಾ?

ಆದರೆ, ಅಂದು ಡಾ ರಾಜ್‌ಕುಮಾರ್ ಅವರು ಅದೇನು ಮಾಡಿದ್ರು ಗೊತ್ತಾ? ಕರ್ನಾಟಕದಲ್ಲಿ ಅವರು ಪೂಜಿಸುವ ಮಂದಿರ ಒಂದಿದೆ. ಅಲ್ಲಿಗೆ ಹೋಗಿ, ನನ್ನ ಆರೋಗ್ಯ ಸರಿಹೋಗಲಿ, ನಾನು ಚೆನ್ನಾಗಿ ಬದುಕುಳಿಯಲಿ ಎಂದು ಉರುಳುಸೇವೆ ಮಾಡಿದ್ದಾರೆ. ಇಡೀ ನಾಡು ಆರಾಧಿಸುವ ಅಷ್ಟೊಂದು ದೊಡ್ಡ ಕಲಾವಿದ ನನಗಾಗಿ ಇಷ್ಟೆಲ್ಲಾ ಮಾಡಿದ್ದಾರೆ. ಜೊತೆಗೆ, ಅಷ್ಟು ದೊಡ್ಡ ಮೇರುನಟರಾದರೂ ಸಿಂಪಲ್ ಬಟ್ಟೆ ತೊಟ್ಟು, ಸಾಧಾರಣ ಎನ್ನುವಂತಹ ಮನೆಯಲ್ಲಿ ಅವರು ವಾಸ ಮಾಡುತ್ತಿದ್ದಾರೆ.

ಆ ಬಳಿಕ ನಾನು ಬೆಂಗಳೂರಿಗೆ ಹೋದಾಗಲೆಲ್ಲಾ ಅವರ ದೇಹಾಂತ್ಯ ಆಗುವವರೆಗೂ ನಮ್ಮಿಬ್ಬರ ಭೇಟಿ ಆಗುತ್ತಿತ್ತು. ಅವರ ಮಕ್ಕಳು ಆಗ ಇನ್ನೂ ಚಿಕ್ಕವರು. ಈಗ ಅವರೆಲ್ಲಾ ಬೆಳೆದು ದೊಡ್ಡವರಾಗಿ ದೊಡ್ಡದೊಡ್ಡ ಕಲಾವಿದರೇ ಆಗಿದ್ದಾರೆ. ನಾನು ನನ್ನ ಜೀವಮಾನದಲ್ಲಿ ಡಾ ರಾಜ್‌ಕುಮಾರ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ' ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನ್ನನ್ನು ಕ್ಷಮಿಸು ಅಮ್ಮಾ.. ನಿನ್ನ ಮಾತು ಕೇಳಬೇಕಿತ್ತು': ತೆಲುಗು ಪೋಸ್ಟ್ ಹಂಚಿಕೊಂಡ ನಭಾ ನಟೇಶ್!
ಲಂಡನ್ ಬೀದಿಗಳಲ್ಲಿ ಸುತ್ತಾಡಿ ಎಂಜಾಯ್ ಮಾಡಿದ ರುಕ್ಮಿಣಿ ವಸಂತ್: ಫೋಟೋಗಳಲ್ಲೇನಿದೆ ವಿಶೇಷ?