
ಸ್ಟಾರ್ ನಟರೊಂದಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡುತ್ತಿರುವ ರಚಿತಾ ರಾಮ್ ಮೊಟ್ಟ ಮೊದಲ ಬಾರಿಗೆ ಖ್ಯಾತ ನಿರ್ದೇಶಕ ದ್ವಾರಕೀಶ್ ಅವರ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 'ಆಯುಷ್ಮಾನ್ ಭವ' ಚಿತ್ರದಲ್ಲಿ ಶಿವರಾಜ್ ಕುಮಾರ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಚಿತ್ರದ ಪ್ರಮೋಶನ್ ಗಾಗಿ ಟೀಂ ಪ್ರೆಸ್ ಮೀಟ್ ಆಯೋಜಿಸಿದ್ದು ದ್ವಾರಕೀಶ್ ಡಿಂಪಲ್ ಹುಡುಗಿಗೆ ಹೊಸದೊಂದು ಬಿರುದು ನೀಡಿದ್ದಾರೆ.
‘ಕನ್ನಡದ ಕೋಟ್ಯಧಿಪತಿ’ ಹಾಟ್ ಸೀಟ್ ನಲ್ಲಿ ಪುನೀತ್ ಬದಲು ರಚಿತಾ ರಾಮ್!
‘ಆಯುಷ್ಮಾನ್ ಭವ’ ಪಾತ್ರಧಾರಿಗಳ ಬಗ್ಗೆ ಮಾತನಾಡಿದ ದ್ವಾರಕೀಶ್ ರಚಿತಾ ರಾಮ್ ನೋಡಿದರೆ ಶ್ರೀದೇವಿಯನ್ನು ನೋಡಿದ ಹಾಗೆ ಆಗುತ್ತೆ ಎಂದು ಹೇಳಿದ್ದಾರೆ. ಇದರಿಂದು ಡಿಂಪಲ್ ಕ್ವೀನ್ ಪಟ್ಟಿಯಲ್ಲಿ ಹೊಸ ಬಿರುದು ಸೇರಿಕೊಂಡಂತಾಗಿದೆ.
ಅಬ್ಬಾ...! 25 ದಿನದಲ್ಲಿ 7ಕೆಜಿ ಇಳಿಸಿಕೊಂಡ ರಚ್ಚು ಸೀರೆಲೂ ಹಾಟ್
ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಬ್ಯುಸಿಯಾಗಿರುವ ರಚಿತಾ ರಾಮ್ ಸಮಯ ಸಿಕ್ಕಾಗಲೆಲ್ಲಾ ವಿಭಿನ್ನವಾಗಿ ಕೆಲಸ ಮಾಡುತ್ತಾರೆ. ಮಜಾ ಭಾರತ ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿರುವ ರಚಿತಾ ರಾಮ್ ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‌ರನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಕೊಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.