ಶೋಲೆ ಖ್ಯಾತಿಯ ‘ಕಲಿಯಾ’ ನಟ ವಿಜು ಕೋಟೆ ಇನ್ನಿಲ್ಲ

By Web Desk  |  First Published Sep 30, 2019, 12:25 PM IST

ಸೂಪರ್ ಡೂಪರ್ ಹಿಟ್ ‘ಶೋಲೆ’ ಸಿನಿಮಾದಲ್ಲಿ ಡಕಾಯಿತ ಕಾಲಿಯಾ ಪಾತ್ರ ಮಾಡಿದ್ದ ನಟ ವಿಜು ಕೋಟೆ ವಿಧಿವಶರಾಗಿದ್ದಾರೆ. 


ಮುಂಬೈ (ಸೆ. 30): ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ ‘ಶೋಲೆ’ ಸಿನಿಮಾದಲ್ಲಿ ಕಾಲಿಯಾ ಪಾತ್ರದ ಮೂಲಕ ಗಮನ ಸೆಳೆದಿದ್ದ ವಿಜು ಕೋಟೆ ಇಂದು ವಿಧಿವಶರಾಗಿದ್ದಾರೆ. ಇವರಿಗೆ 78 ವರ್ಷ ವಯಸ್ಸಾಗಿತ್ತು. 

1964 ರಲ್ಲಿ ಯ ಮಲಕ್ ಸಿನಿಮಾ ಮೂಲಕ ಚಿತ್ರಂಗಕ್ಕೆ ಪ್ರವೇಶಿಸುತ್ತಾರೆ. ಶೋಲೆ, ಅಂದಾಜ್ ಅಪ್ನಾ ಅಪ್ನಾ, ಕುರ್ಬಾನಿ, ಕರ್ಜ್, ನಾಗಿನಾ, ಚೈನಾ ಗೇಟ್ ಸೇರಿದಂತೆ 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆಯಲ್ಲಿಯೂ ಛಾಪು ಮೂಡಿಸಿದ್ದಾರೆ. ಜಬಾನ್ ಸಂಭಾಲ್ಕೆ ಎನ್ನುವ ಪಾತ್ರದ ಮೂಲಕ ನೆನಪಿನಲ್ಲುಳಿಯುವಂತೆ ಮಾಡಿದ್ದಾರೆ. 

Tap to resize

Latest Videos

 

2018 ರಲ್ಲಿ ಜಾನೇ ಕ್ಯೂ ದೇ ಯಾರೋನ್ ಸಿನಿಮಾ ಇವರ ಕೊನೆ ಸಿನಿಮಾ.  

click me!