ದಾಂಪತ್ಯ ಜೀವನಕ್ಕೆ ಕಾಲಿಟ್ಟ CCL ಕ್ರಿಕೆಟಿಗ ಕಮ್ ನಟ!

Published : Feb 16, 2019, 12:32 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ CCL ಕ್ರಿಕೆಟಿಗ ಕಮ್ ನಟ!

ಸಾರಾಂಶ

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಹೆಸರು ಮಾಡಿದ್ದ ಕ್ರಿಕೆಟಿಗ, ನಟ ರಾಜೀವ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವರಿಸಿದ್ದು ಯಾರನ್ನು?

ಅತ್ತ ಬಾಲಿವುಡ್‌ನಲ್ಲಿ ನಟ, ನಟಿಯರು ಸಪ್ತಪದಿ ತುಳಿಯುತ್ತಿದ್ದರೆ, ಇತ್ತ ಸ್ಯಾಂಡಲ್‌ವುಡ್‌ ಕಲಾವಿದರೂ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಮೊನ್ನೆಯಷ್ಟೇ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾಳನ್ನು ವರಿಸಿದರೆ, ಇಂದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆಟಗಾರ ಹಾಗೂ ನಟ ರಾಜೀವ್, ರೇಷ್ಮಾರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಸಿಸಿಎಲ್‌ನ ಕಿಚ್ಚಾ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಸರ್ಸ್ ತಂಡದ ಪ್ರಭಾವಿ ಆಟಗಾರನೆಂದೇ ಫೇಮಸ್ ಆದವರು ರಾಜೀವ್. ಇನ್ನು ‘ಉಸಿರೇ ಉಸಿರೇ’ ‘ಆರ್‌ಎಕ್ಸ್ ಸೂರಿ’ ‘ಅಮವಾಸ್ಯೆ ’ ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರು ಅಷ್ಟೇ ಅಲ್ಲದೆ ಕಿಚ್ಚ ದಂಪತಿ ಸಮ್ಮುಖದಲ್ಲಿ ರಾಜೀವ್ ಮದುವೆಯಾಗಿದ್ದಾರೆ. ದಯಾನಂದ್ ಸಾಗರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ರೇಷ್ಮಾ ಕೈ ಹಿಡಿದಿದ್ದಾರೆ.

ರಾಜೀವ್ ಹಾಗೂ ರೇಷ್ಮಾ ಅವರ ನಿಶ್ಚಿತಾರ್ಥ ನವೆಂಬರ್ 9ರಂದು ನಡೆದಿತ್ತು. ಕಿಚ್ಚ ದಂಪತಿಯೊಂದಿಗೆ ಕೆಲವು ಸ್ಯಾಂಡಲ್‌ವುಡ್ ನಟ, ನಟಿಯರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!