
ಅಂಬಿ ಅಪ್ಪಾಜಿ ಕಳೆದುಕೊಂಡು ನೋವಿನಲ್ಲಿದ್ದ ದರ್ಶನ್‌ಗೆ ಪಲ್ವಾಮಾ ದುರಂತವೂ ಜತೆ ಸೇರಿದೆ. ಈ ಎಲ್ಲ ಕಾರಣಗಳಿಂದ ಅಭಿಮಾನಿಗಳಿಗೋಸ್ಕರ ತಮ್ಮ ಹುಟ್ಟಿದ ಹಬ್ಬವನ್ನು ಸಮಾಜಮುಖಿ ಕಾರ್ಯದೊಂದಿಗೆ, ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ಈ ಮೊದಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ದಯವಿಟ್ಟು ಕೇಕ್, ಹಾರ ತರಬೇಡಿ,' ಎಂದು ಅಭಿಮಾನಿಗಳನ್ನು ಆಗ್ರಹಿಸಿದ್ದರು. ಅಲ್ಲದೇ ಆಹಾರ, ಧಾನ್ಯ ತಂದು ಕೊಟ್ಟರೆ ಅಗತ್ಯವಿರುವೆಡೆ ಪೂರೈಸುವುದಾಗಿಯೂ ಹೇಳಿದ್ದರು. ಪರಿಸರ ರಕ್ಷಣೆಯ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಈ ಪದಾರ್ಥಗಳನ್ನು ತರಬೇಡಿ ಎಂದು ಕರೆ ನೀಡುವ ಮೂಲಕ, ತಮ್ಮ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದ್ದರು.
ಸ್ಟಾರ್ ನಟನ ಆಶಯದಂತೆ ಅಭಿಮಾನಿಗಳು ನಡೆದುಕೊಂಡಿದ್ದಾರೆ. ರಾಜರಾಜೇಶ್ವರಿನಗರದ ನಿವಾಸದಲ್ಲಿ ಅಭಿಮಾನಿಗಳೊಂದಿಗೆ ದರ್ಶನ್ ಹುಟ್ಟಿದ ಹಬ್ಬವನ್ನು ಆಚರಿಸಿದರು. ಆಹಾರ ಪದಾರ್ಥಗಳನ್ನೇ ತಂದು ಕೊಡುತ್ತಿದ್ದಾರೆ. ಅಭಿಮಾನಿಗಳು ನೀಡಿರುವ ಧಾನ್ಯಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪ್ರೀತಿ ಪಾತ್ರರಿಗೆ ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್!
ದರ್ಶನ್ ನಡೆ ಎಲ್ಲ ಸೆಲೆಬ್ರಿಟಿಗಳಿಗೂ ದಾರಿದೀಪವಾಗಿದೆ. ಜನರು ಇಂಥ ಕಾರ್ಯಕ್ಕೆ ಮುಂದಾದರೆ ಜನರಲ್ಲಿಯೂ ಅಗತ್ಯ ಅರಿವು ಮೂಡಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.