
ಬೆಂಗಳೂರು (ಫೆ. 16): ಹೆಣ್ಣಿನ ಮನಸ್ಸಿನ ತುಮುಲಗಳನ್ನು, ವಿಧವೆ ಹೆಣ್ಣು ಮಗಳೊಬ್ಬಳ ಮನಸ್ಥಿತಿಯನ್ನು ಅದ್ಭುತವಾಗಿ ಕಟ್ಟಿಕೊಟ್ಟ ಚಿತ್ರ ’ ನಾತಿ ಚರಾಮಿ’. ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಅವಿರತ ಪ್ರತಿಷ್ಠಾನದಿಂದ ಫೆ. 17 ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ.
Film Review: ಬಯಕೆ, ಭಾವನೆಗಳಿಗೆ ಉತ್ತರ ’ನಾತಿಚರಾಮಿ’
ಸಿನಿಮಾ, ರಂಗಭೂಮಿ, ನಾಟಕ, ಸಂಗೀತ ಕಾರ್ಯಕ್ರಮಗಳನ್ನು ಅವಿರತ ಪ್ರತಿಷ್ಠಾನ ಬೆಂಬಲಿಸುತ್ತಾ ಬಂದಿದೆ. ದಶಮಾನೋತ್ಸವದ ಸಂಭ್ರಮದಲ್ಲಿದೆ. ಈ ವಿಶೇಷವಾಗಿ ’ನಾತಿ ಚರಾಮಿ’ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಹೆಣ್ಣಿನ ದೈಹಿಕ ಬಯಕೆಯ ತೊಳಲಾಟವನ್ನು ಹೇಳುತ್ತೆ ’ನಾತಿ ಚರಾಮಿ’
ನಾತಿಚರಾಮಿ ಯನ್ನು ಮಿಸ್ ಮಾಡಿಕೊಂಡವರು ಈ ಚಿತ್ರವನ್ನು ವೀಕ್ಷಿಸಬಹುದು. ಟಿಕೆಟ್ ಬೆಲೆ 200 ರೂ. ಈ ಚಿತ್ರ ಪ್ರದರ್ಶನದಲ್ಲಿ ಚಿತ್ರತಂಡ ಕೂಡಾ ಭಾಗಿಯಾಲಿದೆ. ಪ್ರದರ್ಶನದ ಬಳಿಕ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು.
ಶೃತಿ ಹರಿಹರನ್, ಸಂಚಾರಿ ವಿಜಯ್, ಪೂರ್ಣ ಚಂದ್ರ ಮೈಸೂರು, ಬಾಲಾಜಿ ಮನೋಹರ್ ಚಿತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.