
ಮುಂಬೈ (ಫೆ. 16): ಪುಲ್ವಾಮಾ ದಾಳಿಯಲ್ಲಿ 44 ವೀರ ಯೋಧರು ಹುತಾತ್ಮರಾಗಿದ್ದಾರೆ. ಅವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಎಲ್ಲೆಡೆನೀರವ ಮೌನ ಆವರಿಸಿದೆ.
ಫೋನಿನಲ್ಲೇ ಸಾವಿನ ಸದ್ದು ಕೇಳಿಸಿಕೊಂಡ ಹುತಾತ್ಮ ಯೋಧನ ಪತ್ನಿ
ಎಲ್ಲರೂ ಶೋಕ ಸಾಗರದಲ್ಲಿ ಮುಳುಗಿರುವಾಗ ನಟಿ ಕಂಗನಾ ರಾಣಾವತ್ ವಿವಾದದ ಮಾತುಗಳನ್ನಾಡಿದ್ದಾರೆ.
ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಸಾಹಿತಿ ಜಾವೆದ್ ಅಖ್ತರ್ ಹಾಗೂ ಶಬಾನಾ ಆಜ್ಮಿ ಪಾಕ್ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇದೇ ವಿಚಾರವಾಗಿ ಕಂಗನಾ ತೀಕ್ಷ್ಣವಾಗಿ ಮತನಾಡಿದ್ದಾರೆ.
ಅರ್ಧಗಂಟೆ ಮೊದಲು ಸ್ಫೋಟಗೊಂಡ ಬಸ್‌ನಿಂದ ಇಳಿದಿದ್ದೆ’
ಶಬಾನಾ ಆಜ್ಮಿಯಂತ ಜನರು ಸಾಂಸ್ಕೃತಿಕ ವಿನಿಮಯ ಹೆಸರಿನಲ್ಲಿ ಪಾಕ್ ಗೆ ತೆರಳುತ್ತಾರೆ. ಭಾರತ್ ತೇರೆ ಟುಕ್ಡೆ ಟುಕ್ಡೆ ಗ್ಯಾಂಗನ್ನು ಬೆಂಬಲಿಸುತ್ತಾರೆ. ಉರಿ ದಾಳಿಯ ನಂತರ ಪಾಕಿಸ್ತಾನ ಕಲಾವಿದರನ್ನು ನಿಷೇಧಿಸಲಾಗಿದೆ. ಅಂತದ್ದರಲ್ಲಿ ಇವರ್ಯಾಕೆ ಕರಾಚಿಯಲ್ಲಿ ಸಮ್ಮೇಳನವನ್ನು ಆಯೋಜಿಸಬೇಕಿತ್ತು? ಎಂದಿದ್ದಾರೆ.
ಇನ್ನೂ ಮುಂದುವರೆದು , ಶತ್ರುಗಳಿಗೆ ಬೇರೆ ಬೇರೆ ರೀತಿಯಲ್ಲಿ ನೈತಿಕ ಬೆಂಬಲ ನೀಡುವ ದೇಶದ್ರೋಹಿಗಳೇ ಫಿಲ್ಮ್ ಇಂಡಸ್ಟ್ರಿಯಲ್ಲಿ ತುಂಬಿ ಹೋಗಿದ್ದಾರೆ. ಪಾಕಿಸ್ತಾನವನ್ನು ನಿಷೇಧ ಮಾಡುವುದು ನಮ್ಮ ಫೋಕಸ್ ಅಲ್ಲ, ಪಾಕಿಸ್ತಾನ ವಿನಾಶ......’ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.