ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ದರ್ಶನ್

Published : Feb 15, 2019, 12:52 PM ISTUpdated : Feb 15, 2019, 12:59 PM IST
ಪುಲ್ವಾಮಾ ದಾಳಿ: ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ದರ್ಶನ್

ಸಾರಾಂಶ

ಪುಲ್ವಾಮಾ ಉಗ್ರ ಆತ್ಮಾಹುತಿ ದಾಳಿಗೆ ಭಾರತೀಯ ಯೋಧರು ಬಲಿ | ಉಗ್ರರ ರಾಕ್ಷಸೀ ಕೃತ್ಯಕ್ಕೆ ವ್ಯಾಪಕ ಆಕ್ರೋಶ | ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ದರ್ಶನ್ 

ಬೆಂಗಳೂರು (ಫೆ.15): ಪಾಕಿಸ್ತಾನಿ ಪ್ರೇರಿತ ಕಾಶ್ಮೀರಿ ಉಗ್ರನ ಆತ್ಮಾಹುತಿ ದಾಳಿಗೆ ಭಾರತೀಯ ಸೇನೆ ಯ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. 

ಪಾಪಿ ಉಗ್ರರನ್ನು ಸದೆಬಡಿಯಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ: ಮೋದಿ

ಎರಡು ದಶಕಗಳಲ್ಲಿ ನಡೆದ ಅತೀ ದೊಡ್ಡ ಉಗ್ರ ದಾಳಿ ಇದಾಗಿದೆ. ನಮ್ಮ ಯೋಧರ ಸಾವಿಗೆ ಇಡೀ ದೇಶವೇ ಮರುಗಿದೆ. ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಮ್ಮ ಸೈನಿಕರ ಹನಿ ಹನಿ ರಕ್ತಕ್ಕೂ ಪ್ರತಿಕಾರ ತೆಗೆದುಕೊಳ್ಳುವೆವು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. 

ಭಾರತದ ಬೆಂಬಲಕ್ಕೆ ಬಂತು ಜಗತ್ತು: ಪಾಕ್‌ಗೆ ಕಾದಿದೆ ಆಪತ್ತು!

ಯೋಧರ ಸಾವಿಗೆ ಸಂತಾಪಗಳ ಸುರಿಮಳೆಯೇ ಹರಿದಿದೆ. ನಟ ದರ್ಶನ್ ಕೂಡಾ ನಮನ ಸಲ್ಲಿಸಿದ್ದಾರೆ. ಪುಲ್ವಾಮಾ ದಾಳಿ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಮಡಿದ ಯೋಧರ ಹಾಗೂ ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ಭಯೋತ್ಪಾದನೆ ಮಾನವ ಸಮಾಜಕ್ಕೆ ಕಂಟಕಪ್ರಾಯವಾಗಿದೆ. ಭಯೋತ್ಪಾದನೆ ಸಂಪೂರ್ಣವಾಗಿ ತೊಲಗಬೇಕು ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?