
ಮಂಗೇಶ್ ಹಡಾವಲೇ ನಿರ್ದೇಶನದ 'ಚಲೋ ಜೀತೇ ಹೈ...' ಚಿತ್ರ ಪ್ರದರ್ಶನವನ್ನು ವೀಕ್ಷಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್ , ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ.
ಪ್ರಧಾನಿ ಮೋದಿಯವರ ಬಾಲ್ಯ ಜೀವನದಿಂದ ಪ್ರಭಾವಿತರಾಗಿ, 'ಮೋದಿ ಪ್ರಜಾಪ್ರಭುತ್ವ ರಾಷ್ಟ್ರದ ನೈಜ ನಾಯಕ..' ಎಂದು 'ಕ್ವೀನ್' ನಟಿ ಕಂಗನಾ ಶ್ಲಾಘಿಸಿದ್ದಾರೆ.
'ಸ್ವಜನಪಕ್ಷಪಾತವಿಲ್ಲದೇ ಮೋದಿ ಸರಕಾರ ನಡೆಸುತ್ತಿದ್ದು, ಪ್ರಧಾನಿಯಾಗಲು ಅರ್ಹ ಅಭ್ಯರ್ಥಿ. ಕುಟುಂಬ ರಾಜಕೀಯ ಹಿನ್ನೆಲೆಯಿಲ್ಲದೆಯೂ ಇಂಥದ್ದೊಂದು ಮಹಾನ್ ಹುದ್ದೆಯನ್ನು ಅಲಂಕರಿಸಿದ್ದಾರೆ. ದೇಶದ ಪ್ರಧಾನಿಯಾಗಿ ಅವರನ್ನು ಆಯ್ಕೆ ಮಾಡಿದ್ದು, ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಕಷ್ಟಪಟ್ಟು ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಆದ್ದರಿಂದ ಅವರ ವಿಶ್ವಾಸರ್ಹತೆ ಬಗ್ಗೆ ಯಾವುದೇ ಅನುಮಾನವೂ ಬೇಡ. ಭಾರತವನ್ನು ಪ್ರಗತಿಯ ಪಥದಲ್ಲಿ ಸಾಗಿಸಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು,' ಎಂದು ಆಶಿಸಿದ್ದಾರೆ.
'2019ರಲ್ಲಿ ನಡೆಯುವ ಚುನಾವಣೆಯಲ್ಲಿಯೂ ಮೋದಿಯೇ ಗೆದ್ದು, ಪ್ರಧಾನಿಯಾಗಬೇಕು,' ಎಂದು ಕಂಗನಾ ಆಪೇಕ್ಷಿಸಿದ್ದಾರೆ.
ಸದಾ ತಮ್ಮ ನೇರ, ನಿಷ್ಠುರ ನಡೆ, ನುಡಿಯಿಂದಲೇ ಪ್ರಖ್ಯಾತರಾದ ಕಂಗನಾ, ತಮ್ಮ ಈ ಗುಣದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದವರು. ಅಲ್ಲದೇ ಹಲವರ ವಿರೋಧವನ್ನೂ ಕಟ್ಟಿಕೊಂಡವರು.
ಇದನ್ನೂ ಓದಿ
ಕಂಗನ್ ಗಂಜಿ ಗಿರಾಕಿಯಾಗಿದ್ದು ಯಾವಾಗ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.