
ಈಗ ‘ಪದ್ಮಾವತಿ’ ಚಿತ್ರದಲ್ಲಿ ಹಾಡಿದ್ದಾರೆ ಗಂಗಮ್ಮ. ದಾಮೋದರ್ ನಿರ್ಮಾಣದ ಈ ಚಿತ್ರವನ್ನು ಮಿಥುನ್ ಚಂದ್ರಶೇಖರ್ ನಿರ್ದೇಶಿಸಿದ್ದಾರೆ. ವಿಕ್ರಂ ಆರ್ಯ ನಾಯಕ ನಟ. ಈ ಚಿತ್ರದ ಎರಡು ಹಾಡಿಗೆ ಗಂಗಮ್ಮ ಧ್ವನಿ ನೀಡಿದ್ದಾರೆ.
ಕೊಪ್ಪಳದ ಆರ್ಕೆಸ್ಟ್ರಾವೊಂದರಲ್ಲಿ ಗಾಯಕಿ ಆಗಿರುವ ಗಂಗಮ್ಮ, ತಮ್ಮ ಮಧುರವಾದ ಕಂಠದೊಂದಿಗೆ ಸಂಗೀತ ಪ್ರಿಯರ ಗಮನ ಸೆಳೆದಿದ್ದು ಫೇಸ್‌ಬುಕ್ ಮೂಲಕ. ಇತ್ತೀಚೆಗಷ್ಟೇ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ಅವರ ಗಾಯನದ ವಿಡಿಯೋ ವೈರಲ್ ಆಗಿತ್ತು. ಅಲ್ಲಿಂದ ಬೆಳಕಿಗೆ ಬಂದು ಸಿನಿಮಾದತ್ತ ಮುಖ ಮಾಡಿರುವ ಅವರಿಗೆ ಇಲ್ಲಿ ಅವಕಾಶಗಳು ಹೆಚ್ಚುತ್ತಿರುವುದು ವಿಶೇಷ.
"
‘ಗಾಯಕಿ ಗಂಗಮ್ಮ ಅವರ ಬಗ್ಗೆ ನಮಗೂ ಗೊತ್ತಾಗಿದ್ದು ಫೇಸ್‌ಬುಕ್ ಮೂಲಕವೇ. ತುಂಬಾ ಸೊಗಸಾಗಿತ್ತು ಅವರ ಕಂಠ ಸಿರಿ. ಆ ವೇಳೆಗಾಗಲೇ ಚಿತ್ರದ ಒಂದು ಹಾಡಿಗೆ ನಾವು ಸಾಕಷ್ಟು ಗಾಯಕರನ್ನು ಭೇಟಿ ಮಾಡಿ, ಹಾಡುವಂತೆ ಕೇಳಿಕೊಂಡಿದ್ದೆವು. ಆದ್ರೆ, ಅವರ ಧ್ವನಿ ಚಿತ್ರದಲ್ಲಿನ
ಸಾಹಿತ್ಯಕ್ಕೆ ಸರಿ ಹೊಂದದ ಕಾರಣ, ಗಾಯಕರ ಹುಡುಕಾಟ ನಡೆದೇ ಇತ್ತು. ಆಗ ಆ ಹಾಡಿಗೆ ಸೂಕ್ತ ಎನಿಸಿದವರು ಕೊಪ್ಪಳದ ಗಂಗಮ್ಮ. ತಕ್ಷಣವೇ ಅವರ ಸಂಪರ್ಕ ಮಾಡಿ, ಚಿತ್ರಕ್ಕೆ ಹಾಡುವಂತೆ ಕೇಳಿಕೊಂಡಿದ್ದೇವು. ಅದಕ್ಕವರು ಒಪ್ಪಿಕೊಂಡರು. ಒಂದು ಹಾಡಿನ ಬದಲಿಗೆ ಈಗ ಎರಡು ಹಾಡಿಗೆ ಅವರು ಧ್ವನಿ ನೀಡುತ್ತಿದ್ದಾರೆ. ಅವರು ಚಿತ್ರಕ್ಕೆ ಹಾಡಿರುವುದಕ್ಕೆ ಖುಷಿ ಆಗುತ್ತಿದೆ. ಹಳ್ಳಿ ಹಕ್ಕಿಗೆ ಅವಕಾಶ ಕೊಟ್ಟಿದ್ದಕ್ಕೂ ಸಂತೋಷವಾಗುತ್ತಿದೆ’ ಎನ್ನುತ್ತಾರೆ ಪದ್ಮಾವತಿ ಚಿತ್ರದ ನಾಯಕ ನಟ ವಿಕ್ರಂ ಆರ್ಯ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.