
ನಂಜನಗೂಡು: ಹಿರಿಯ ಸ್ಯಾಂಡಲ್ವುಡ್ ನಟ ಜೈಜಗದೀಶ್ ಅವರು ಕನ್ನಡ ಚಿತ್ರರಂಗದಲ್ಲ ಛಾಪು ಮೂಡಿಸಿದವರು. ನಟನಾಗಿ ಮಾತ್ರವಲ್ಲದೇ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿದ್ದಾರೆ. 3೦೦ಕ್ಕೂ ಚಿತ್ರಗಳನ್ನು ಮಾಡಿದ್ದಾರೆ. ಜೈಜಗದೀಶ್ - ವಿಜಯಲಕ್ಷ್ಮೀ ಸಿಂಗ್ ತಾರಾ ಜೋಡಿ ಈಚೆಗಷ್ಟೇ ಅರ್ಥಾತ್ ಜೂನ್ ತಿಂಗಳಿನಲ್ಲಿ 36ನೇ ಮದುವೆ ವಾರ್ಷಿಕೋತ್ಸವ ಅಚರಿಸಿಕೊಂಡಿದ್ದರು. ಜೂನ್ 4, 1990 ರಂದು ಮೈಸೂರಿನ ಸದರ್ನ್ ಸ್ಟಾರ್ ಹೋಟೆಲ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ದಂಪತಿ, ಅಂದು ಗಡಿಬಿಡಿಯಲ್ಲಿ ಮದುವೆಯಾಗಿತ್ತು ಎಂದು ತಮಾಷೆ ಕೂಡ ಮಾಡಿದ್ದರು.
1954ರಲ್ಲಿ ಹುಟ್ಟಿರುವ ಜೈಜಗದೀಶ್ ಅವರಿಗೆ ಈಗ 72 ವರ್ಷ ವಯಸ್ಸು. ಸಹಜವಾಗಿ ವಯೋ ಸಮಸ್ಯೆ ಬಂದಿರುತ್ತದೆ. ಆದರೆ, ಅವರ ವೈರಲ್ ವಿಡಿಯೋ ಒಂದು ಇದೀಗ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಅವರು ಪತ್ನಿ ವಿಜಯಲಕ್ಷ್ಮಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಆದರೆ ಅವರು ವ್ಹೀಲ್ಚೇರ್ನಲ್ಲಿ ಕುಳಿತುಕೊಂಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಶಾಕ್ ಆಗಿದ್ದಾರೆ. ಏಕೆಂದರೆ ಜೈಜಗದೀಶ್ ಎಂದರೆ, ಆ ಯಂಗ್ ಆ್ಯಂಡ್ ಎನರ್ಜೆಟಿಕ್ ಹೀರೋ ಕಣ್ಮುಂದೆ ಬರುತ್ತಾರೆ. ಇಂಥ ನಟನಿಗೆ ಅಭಿಮಾನಿಗಳು ಅಸಂಖ್ಯ. ಆದ್ದರಿಂದ ಈ ಪರಿಸ್ಥಿತಿಯಲ್ಲಿ ಅಭಿಮಾನಿಗಳು ನೋಡಿದಾಗ ಶಾಕ್ ಆಗುವುದು ಸತ್ಯ.
ಹಲವರು ನಟನಿಗೆ ಏನಾಯ್ತು ಎಂದು ಪ್ರಶ್ನಿಸಿದರೆ, ಮತ್ತೆ ಕೆಲವರು ಇದು ವಯೋಸಹಜಸಮಸ್ಯೆ ಅಷ್ಟೇ. ಸುಮ್ಮನೇ ಗಾಬರಿಯಾಗಬೇಡಿ ಎಂದು ಅಭಿಮಾನಿಗಳನ್ನು ಸಮಾಧಾನ ಪಡಿಸುತ್ತಿದ್ದಾರೆ. ಹಲವರು ಜೈಜಗದೀಶ್ ಅವರು ಹಲವು ಸಿನಿಮಾಗಳನ್ನು ಹೆಸರಿಗೆ ಅವರ ನಟನೆಯನ್ನು ಕೊಂಡಾಡುತ್ತಿದ್ದಾರೆ. ravi______07 ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ.
ಅಷ್ಟಕ್ಕೂ ಜೈಜಗದೀಶ್ - ವಿಜಯಲಕ್ಷ್ಮೀ ಸಿಂಗ್ ದಂಪತಿ ನಂಜನಗೂಡು ಶ್ರೀ ಅವರ ದರ್ಶನಕ್ಕೆ ಮಕ್ಕಳ ಸಹಿತ ಆಗಮಿಸಿದ್ದ ವೇಳೆ ಈ ವಿಡಿಯೋ ತೆಗೆಯಲಾಗಿದೆ. ಮೊದಲಿಗೆ ನಡೆದುಕೊಂಡೇ ಬಂದ ನಟ, ಕೊನೆಗೆ ಸುಸ್ತಾಗಿದ್ದರಿಂದ ವ್ಹೀಲ್ಚೇರ್ ಮೇಲೆ ಕುಳಿತುಕೊಂಡರು. ಆದರೂ ತಮ್ಮ ನೆಚ್ಚಿನ ನಟನ ಈ ಸ್ಥಿತಿ ನೋಡಿ ಹಲವರು ಭಾವುಕರಾಗಿದ್ದಾರೆ. ಅಂದಹಾಗೆ ದಂಪತಿಗೆ ವೈಭವಿ, ವೈಸಿರಿ, ವೈನಿಧಿ ಎನ್ನುವ ಮಕ್ಕಳಿದ್ದು, ಅವರೂ ಈ ಸಂದರ್ಭದಲ್ಲಿ ದರ್ಶನಕ್ಕೆ ಬಂದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.