ಸುದೀಪ್'ಗೂ ತಟ್ಟಿದ ಡಿಕೆಶಿ ಐಟಿ ಶಾಕ್ !

Published : Aug 03, 2017, 11:50 PM ISTUpdated : Apr 11, 2018, 01:11 PM IST
ಸುದೀಪ್'ಗೂ ತಟ್ಟಿದ ಡಿಕೆಶಿ ಐಟಿ ಶಾಕ್ !

ಸಾರಾಂಶ

ಸಚಿವ ಡಿ.ಕೆ. ಶಿವಕುಮಾರ್ ರೆಸಾರ್ಟ್'ನಲ್ಲಿ ಇದ್ದ ಕಾರಣ ಐಟಿ ಅಧಿಕಾರಿಗಳು ರೆಸಾರ್ಟ್ ಮೇಲೆ ದಾಳಿ ಮಾಡಿದ್ದರು.

ರಾಮನಗರ(ಆ.03): ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಕಳೆದ 2 ದಿನಗಳಿಂದ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆಯ ದಾಳಿ ನಟ ಕಿಚ್ಚ ಸುದೀಪ್ ಅವರಿಗೂ ತಟ್ಟಿದೆ.

ನಟ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ 'ರಾಜು ಕನ್ನಡ ಮೀಡಿಯಂ' ಚಿತ್ರದ ಚಿತ್ರೀಕರಣ  ಈಗಲ್ಟ್'ನ್ ರೆಸಾರ್ಟ್'ನಲ್ಲಿ ನಡೆಯುತ್ತಿದೆ. ರೆಸಾರ್ಟ್ ಸುತ್ತಲೂ ಐಟಿ ಅಧಿಕಾರಿಗಳು ಹಾಗೂ ಪೊಲೀಸ್ ಸರ್ಪಕಾವಲಿದೆ. ಸಚಿವ ಡಿ.ಕೆ. ಶಿವಕುಮಾರ್ ರೆಸಾರ್ಟ್'ನಲ್ಲಿ ಇದ್ದ ಕಾರಣ ಐಟಿ ಅಧಿಕಾರಿಗಳು ರೆಸಾರ್ಟ್ ಮೇಲೆ ದಾಳಿ ಮಾಡಿದ್ದರು.

ಈ ಕಾರಣದಿಂದ ರೆಸಾರ್ಟ್'ಗೆ ಬರುವ ಎಲ್ಲ ವಾಹನಗಳನ್ನು ಪರಿಶೀಲಿಸಿ ಒಳಗೆ ಬಿಡುತ್ತಿದ್ದರು. ರಾಜು ಕನ್ನಡ ಮೀಡಿಯಂ ಚಿತ್ರದ ಕಲಾವಿದರಿದ್ದ  ಚಿತ್ರೀಕರಣದ ಮೂರು ಕ್ಯಾರವಾನ್ ಹಾಗೂ ಒಂದು ಬಸ್'ಅನ್ನು ಗಂಟೆಗೂ ಹೆಚ್ಚು ಕಾಲ ಪರಿಶೀಲಿಸಿ ಒಳಗೆ ಬಿಟ್ಟಿದ್ದಾರೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?
ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?