ಬೆಳ್ಳಿ ತೆರೆಗೆ ರಾಜ್ ಕುಟುಂಬದ ಮತ್ತೊಂದು ಕುಡಿ

Published : Aug 03, 2017, 08:31 PM ISTUpdated : Apr 11, 2018, 12:53 PM IST
ಬೆಳ್ಳಿ ತೆರೆಗೆ ರಾಜ್ ಕುಟುಂಬದ ಮತ್ತೊಂದು ಕುಡಿ

ಸಾರಾಂಶ

ಡಾ ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಬರೋದಿಕ್ಕೆ ಕಲರ್ ಫುಲ್ ವೇದಿಕೆ ಸಜ್ಜಾಗಿದೆ. ಈಗಾಗಲೇ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ನಂತರ ಅಣ್ಣಾವ್ರ ಕಿರಿಯ ಮಗಳು ಪೂರ್ಣಿಮಾ ಹಾಗೂ ರಾಮ್ ಕುಮಾರ್ ಮಗ ಧೀರನ್ ರಾಮ್ ಕುಮಾರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡೋದಿಕ್ಕೆ ರೆಡಿಯಾಗಿದ್ದಾರೆ.

ಬೆಂಗಳೂರು (ಆ.03): ಡಾ ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಬರೋದಿಕ್ಕೆ ಕಲರ್ ಫುಲ್ ವೇದಿಕೆ ಸಜ್ಜಾಗಿದೆ. ಈಗಾಗಲೇ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ನಂತರ ಅಣ್ಣಾವ್ರ ಕಿರಿಯ ಮಗಳು ಪೂರ್ಣಿಮಾ ಹಾಗೂ ರಾಮ್ ಕುಮಾರ್ ಮಗ ಧೀರನ್ ರಾಮ್ ಕುಮಾರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡೋದಿಕ್ಕೆ ರೆಡಿಯಾಗಿದ್ದಾರೆ.

ಗೆಜ್ಜೆನಾದ, ಹಬ್ಬ, ಸ್ನೇಹಲೋಕ ಅಂತಹ ಹಿಟ್ ಸಿನಿಮಾಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮಾಡಿಸಿರೋ, ರಾಮ್ ಕುಮಾರ್ ಮುದ್ದಿನ ಮಗನೇ ಧೀರನ್.ಡಾ.ರಾಜ್​ಕುಮಾರ್. ಚಿಕ್ಕ ವಯಸ್ಸಿನಿಂದಲೇ ತಾತ, ಅಪ್ಪ ಹಾಗೂ ಮಾವಂದಿರ ನಟನೆ ಹಾಗೂ ಸಿಂಪ್ಲಿಸಿಟಿ, ಹಾರ್ಡ್​ ವರ್ಕಿಂಗ್ ನೇಚರ್ ನೋಡಿ ಧೀರನ್ ರಾಮ್ ಕುಮಾರ್ ಅಪ್ಪನ ಹಾದಿಯನ್ನ ಸೆಲೆಕ್ಟ್ ಮಾಡಿಕೊಂಡಿದ್ದಾರೆ.

ಈಗಷ್ಟೇ ಇಂಜಿನಿಯರಿಂಗ್ ಮುಗಿಸಿರೋ ಧೀರನ್ ರಾಮ್ ಕುಮಾರ್ , ಅಭಿನಯ ತರಂಗದ ಗೌರಿ ದತ್ತು ಹತ್ತಿರ ಆಕ್ಟಿಂಗ್ ಹಾಗೂ ಡ್ಯಾನ್ಸ್ ಟ್ರೇನಿಂಗ್ ಮಾಡ್ತಾ ಇದ್ದಾರಂತೆ. ಆಗಾಗ ಮನೆಯ ಫಂಕ್ಷನ್'ಗಳಲ್ಲಿ ಡ್ಯಾನ್ಸ್ ಮಾಡಿ ರಂಜಿಸುತ್ತಿದ್ದ ಧೀರನ್ ಗೆ ಈಗ ಸಿನಿಮಾಕ್ಕೆ ಬರೋದಿಕ್ಕೆ ಸಜ್ಜಾಗಿದ್ದಾರೆ. ಈಗಾಗ್ಲೇ ಮೂರು ಸಿನಿಮಾಗಳಿಗೆ ಆಫರ್ ಬಂದಿದ್ದು, ಧೀರನ್ ರಾಮ್ ಕುಮಾರ್ ಇಮೇಜಿಗೆ ತಕ್ಕಂತೆ ಕಥೆ ಆಯ್ಕೆಯಾದ ನಂತರ ರಾಮ್ ಕುಮಾರ್ ಮಗನ ಸಿನಿಮಾ ಟೈಟಲ್ ಏನು, ಯಾರು ಈ ಸಿನಿಮಾವನ್ನ ನಿರ್ದೇಶನ ಮಾಡ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ. ತಾತ, ಅಪ್ಪ ಹಾಗೂ ಮಾವಂದಿರ ತರ ಧೀರನ್ ರಾಮ್ ಕುಮಾರ್ ಅಭಿಮಾನಿಗಳನ್ನ ಮೋಡಿ ಮಾಡ್ತಾರ ಅನ್ನೋದು ಕಾಲ ನಿರ್ಧರಿಸಲಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
BBK 12 : ಬಿಗ್ ಬಾಸ್‌ನಲ್ಲಿ ಗಿಲ್ಲಿ ಗಿಮಿಕ್, ದಾಖಲೆಯಾಯ್ತು ಇನ್ಸ್ಟಾ ಫಾಲೋವರ್ಸ್‌