ಕುರುಕ್ಷೇತ್ರದಲ್ಲಿ ದರ್ಶನ್ ಧುರ್ಯೋಧನ ಲುಕ್ ಹೇಗಿದೆ ಗೊತ್ತಾ?

Published : Aug 03, 2017, 08:46 PM ISTUpdated : Apr 11, 2018, 12:53 PM IST
ಕುರುಕ್ಷೇತ್ರದಲ್ಲಿ ದರ್ಶನ್ ಧುರ್ಯೋಧನ ಲುಕ್ ಹೇಗಿದೆ ಗೊತ್ತಾ?

ಸಾರಾಂಶ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

ಬೆಂಗಳೂರು (ಆ.03): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

ಕನ್ನಡ ಚಿತ್ರರಂಗದಲ್ಲಿ ಬಾಹುಬಲಿ ಶೈಲಿಯಲ್ಲಿ ನಿರ್ಮಾಣ ಆಗುತ್ತಿರುವ ಪೌರಾಣಿಕ ಸಿನಿಮಾ ಕುರುಕ್ಷೇತ್ರ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೇ ಮೊದಲ ಬಾರಿಗೆ ಅಭಿಮಾನಿಗಳಿಗೆ ರೋಮಾಂಚನ ನೀಡುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುದಿನಗಳಿಂದ ಅಭಿಮಾನಿಗಳೆಲ್ಲ ಕಾದು ಕುಳಿತಿದ್ದ ದರ್ಶನ್ ಅಭಿನಯದ ದುರ್ಯೋಧನನ ಲುಕ್ ಹೊರಬಿದ್ದಿದೆ.

ದುರ್ಯೋಧನ ಪಾತ್ರಕ್ಕಾಗಿ ದರ್ಶನ್ ಕಟ್ಟು ಮಸ್ತಾದ ದೇಹ ಹುರಿಗೊಳಿಸಿರೋದು ಸದ್ಯ ರಿವೀಲ್ ಆಗಿರೋ ಫೋಟೋಗಳಲ್ಲಿ ಗೊತ್ತಾಗುತ್ತಿದೆ. ದರ್ಶನ್ ಮೈ ತುಂಬಾ ಆವರಿಸಿಕೊಂಡಿರುವ ಚಿನ್ನಭಾರಣಗಳು, ದರ್ಶನ್ ತಲೆಯ ಅಂಧವನ್ನ ಹೆಚ್ಚಿಸುವ ಕೀರಿಟ, ಗಾಂಭೀರ್ಯದಿಂದ ಗಧೆ ಹಿಡಿದಿರುವ ಠೀವಿ ಎಲ್ಲವೂ  ದರ್ಶನ್ ಥೇಟ್ ದುರ್ಯೋಧನನ ತರ ಕಾಣುವಂತೆ ಮಾಡಿವೆ

ದರ್ಶನ್ ನಂತರ ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಕತ್ತಿ, ಗುರಾಣಿ ಹಿಡಿದು ಅಭಿಮನ್ಯು ಗೆಟಪ್ ನಲ್ಲಿ ನೋಡುಗರನ್ನ ಬೋಲ್ಡ್ ಮಾಡಿದ್ದಾರೆ. ಸದ್ಯಕ್ಕೆ ಗ್ರ್ಯಾಂಡ್ ಆಗಿ ಲಾಂಚ್ ಆಗೋದಿಕ್ಕೆ ರೆಡಿಯಾಗಿರೋ ಕುರುಕ್ಷೇತ್ರ ಚಿತ್ರದ ಇನ್ವಿಟೇಷನ್ ಕಾರ್ಡ್ ​ದರ್ಶನ್ ಮತ್ತು ಅಭಿಮನ್ಯು ಗೆಟಪ್ ರಿವೀಲ್ ಮಾಡಿದೆ.

ದರ್ಶನ್‌ ಸಿನಿ ಕೆರಿಯರ್'ನ  50ನೇ ಸಿನಿಮಾದಲ್ಲಿ  ಬಿಗ್ ಸ್ಟಾರ್ ಗಳ ಸಮಾಗಮ ಆಗಲಿದೆ..ಶ್ರೀ ಕೃಷ್ಣ ಪಾತ್ರದಲ್ಲಿ ರವಿಚಂದ್ರನ್, ಭೀಷ್ಮಾಚಾರ್ಯನಾಗಿ ಅಂಬರೀಷ್. ಧೃತರಾಷ್ಟ್ರನಾಗಿ ಶ್ರೀನಾಥ್,  ದ್ರೋಣಾಚಾರ್ಯನಾಗಿ ಶ್ರೀನಿವಾಸ್ ಮೂರ್ತಿ, ಗಂಧರ್ವ ರಾಜನಾಗಿ ಅವಿನಾಶ್, ದ್ರೌಪದಿ ಪಾತ್ರದಲ್ಲಿ, ಬಹುಭಾಷಾ ನಟಿ ಸ್ನೇಹಾ, ಶಕುನಿ ಪಾತ್ರದಲ್ಲಿ ಸಾಯಿಕುಮಾರ್,ಅರ್ಜುನನ ಪಾತ್ರದಲ್ಲಿ ಅರ್ಜುನ್ ಸರ್ಜಾ, ನರ್ತಕಿಯಾಗಿ ಹರಿಪ್ರಿಯಾ, ರೆಜಿನಾ , ಕುಂತಿಯಾಗಿ ಹಿರಿಯ ನಟಿ ಲಕ್ಷ್ಮೀ ಹೀಗೆ  ದೊಡ್ಡ ಸ್ಟಾರ್ ತಾರಾಗಣವೇ ಈ ಚಿತ್ರದಲ್ಲಿದೆ.

ನಿರ್ಮಾಪಕ ಮುನಿರತ್ನ ಬರೋಬ್ಬರಿ 50ರಿಂದ 60 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡ್ತಾ ಇರೋ ಕುರುಕ್ಷೇತ್ರ ಸಿನಿಮಾವನ್ನ, ಸಿಎಂ ಸಿದ್ದರಾಮಯ್ಯ ಇದೇ ತಿಂಗಳು 6 ರಂದು ಲಾಂಚ್ ಮಾಡಲಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಖ್ಯಾತಿಯ ನಾಗಣ್ಣ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಅದ್ದೂರಿ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗ ತಾರೆಯರು ಹಾಗು ರಾಜಕೀಯ ಗಣ್ಯರು ಸಾಕ್ಷಿಯಾಗಲಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 : ಬಿಗ್ ಬಾಸ್‌ನಲ್ಲಿ ಗಿಲ್ಲಿ ಗಿಮಿಕ್, ದಾಖಲೆಯಾಯ್ತು ಇನ್ಸ್ಟಾ ಫಾಲೋವರ್ಸ್‌
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?