
ಬಿಗ್ ಬಾಸ್ ಹಲವಾರು ಪ್ರತಿಭೆಗಳಿಗೆ ವೇದಿಕೆಯಾಗಿದ್ದು ನಿಜ. ಇದರಲ್ಲಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜನಪ್ರಿಯರಾಗಿದ್ದರೂ ಸಹ ಬಿಗ್ ಬಾಸ್ ಬಂದ ಮೇಲೆ ಕನ್ನಡ ಮನರಂಜನಾ ಜಗತ್ತಿನಲ್ಲಿ ದೊಡ್ಡ ಸ್ಥಾನವನ್ನೇ ಪಡೆದರು. ಅಂಥವರಲ್ಲಿ ಒಬ್ಬರು ಪ್ರಥಮ್. ಒಳ್ಳೆ ಹುಡುಗ ಪ್ರಥಮ್ ಎಂದೇ ಖ್ಯಾತಿ ಪಡೆದಿದ್ದಾರೆ ಇವರು. ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಹೀಗೆಯೇ ಬರೆದುಕೊಳ್ಳುತ್ತಾರೆ. ಮೈಸೂರು ಸಮೀಪದ ಸಣ್ಣ ಹಳ್ಳಿಯಿಂದ ಬಂದ ಪ್ರಥಮ್ 'ಬಿಗ್ ಬಾಸ್ ಕನ್ನಡ ಸೀಸನ್ 4' ಗೆಲ್ಲುವ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೆ ಏರಿದರು. ಅವರ ಸ್ಪರ್ಧಾತ್ಮಕ ಮನೋಭಾವ ಮತ್ತು ಮಾತು, ಟಾಸ್ಕ್ ಎಲ್ಲವೂ ಜನರಿಗೆ ಅಪಾರ ಮೆಚ್ಚುಗೆಯನ್ನು ಗಳಿಸಿತು. ಇತ್ತೀಚೆಗೆ, ಅವರು ಬಿಗ್ ಬಾಸ್ ಶೋನ ಪ್ರಸ್ತುತ ಸೀಸನ್ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು. ಬಿಗ್ ಬಾಸ್ ಬಳಿಕ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.
ಇಂತಿಪ್ಪ ಪ್ರಥಮ್ ಭಾರಿ ವಿವಾದಕ್ಕೆ ಗುರಿಯಾದದ್ದು ದರ್ಶನ್ ವಿರುದ್ಧ ಮಾತನಾಡಿದ್ದ ಸಂದರ್ಭದಲ್ಲಿ. ಪ್ರಥಮ್ ಅವರ ಮೇಲೆ ನಟ ದರ್ಶನ್ ಅಭಿಮಾನಿಗಳು ಹೋಟೆಲ್‌ನಲ್ಲಿ ಹಲ್ಲೆ ಮಾಡಲು ಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ನೀಡಿದ್ದ ಪ್ರಥಮ್, ಇದು 2ನೇ ಸಲ ದರ್ಶನ್ ಅಭಿಮಾನಿಗಳು ನನ್ನ ಮೇಲೆ ಹಲ್ಲೆಗೆ ಪ್ರಯತ್ನ ಮಾಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ಮೊದಲ ಸಲ ಹಲ್ಲೆ ಯತ್ನ ನಡೆದಿತ್ತು. ಆಗ ನಾನೇ ಬೇಡ ಅಂತ ದೂರು ನೀಡಿರಲಿಲ್ಲ. ಆದರೆ, ಹೋಟೆಲ್ ನಲ್ಲಿ ಊಟಕ್ಕೆ ಹೋಗಿದ್ದಾಗ ದರ್ಶನ್ ಅಭಿಮಾನಿಗಳೇ ಬಂದು ಬಂದು ಕಿರುಚಾಡಿ ಗಲಾಟೆ ಮಾಡಿ, ಹಲ್ಲೆಗೆ ಮುಂದಾಗಿದ್ದರು ಎಂದಿದ್ದ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಡಿ ಬಾಸ್ಗೆ ಜೈ ಹೇಳು ಎನ್ನುತ್ತಲೇ ತನ್ನಮೇಲೆ ಅಟ್ಯಾಕ್ ಮಾಡಿದ್ರು ಅಂತ ಪ್ರಥಮ್ ಹೇಳಿದ್ರು.
ಇದೀಗ ದರ್ಶನ್ ಜೊತೆ ಸುದೀಪ್ ಅವರ ಬಗ್ಗೆಯೂ ಕೇಳದಂತೆ ಪ್ರಥಮ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕೀರ್ತಿ ಎಂಟರೇನ್ಮೆಂಟ್ ಚಾನೆಲ್ ಜೊತೆ ನಡೆಸಿದ ಸಂದರ್ಶನದಲ್ಲಿ ಪ್ರಥಮ್ ಅವರು ಈ ಮಾತನ್ನು ಹೇಳಿದ್ದಾರೆ. ಕೀರ್ತಿ ಅವರು ನಿಮಗೆ ಯಾವ ಪ್ರಶ್ನೆ ಕೇಳಬಾರದು, ಅದನ್ನು ನಾನು ಕೇಳಲ್ಲ. ಆ ಪ್ರಶ್ನೆ ಯಾವುದು ಎಂದು ಹೇಳಿ ಎಂದಿದ್ದಾರೆ. ಅದಕ್ಕೆ ಪ್ರಥಮ್, ಎಲ್ಲಾ ಯೂಟ್ಯೂಬರ್ ಬಂದು ನನಗೆ ಕೇಳೋದು ಒಂದೇ, ದರ್ಶನ್ ಬಗ್ಗೆ ಹೇಳಿ, ಸುದೀಪ್ ಬಗ್ಗೆ ಹೇಳಿ ಎಂದು. ಅದನ್ನು ಮಾತ್ರ ನೀವು ಕೇಳಬೇಡಿ ಎಂದಿದ್ದಾರೆ. ಇಬ್ಬರೂ ನನ್ನ ಹೃದಯಲ್ಲಿ ಇದ್ದಾರೆ. ಇಬ್ಬರೂ ಚಿತ್ರರಂಗದ ಹೆಮ್ಮೆ. ಇಬ್ಬರ ಬಗ್ಗೆ ಹೇಳುವುದು ಏನೂ ಇಲ್ಲ. ಇಬ್ಬರೂ ಸಾಧನೆ ಮಾಡಿದ್ದಾರೆ. ಅದರಿಗೆ ಅಭಿನಂದನೆ ಎನ್ನುತ್ತಲೇ ತಮ್ಮ ಮಾತಿಗೆ ಸಮರ್ಥನೆಯನ್ನೂ ಹೇಳಿದ್ದಾರೆ ಪ್ರಥಮ್.
ಅದೇನೆಂದರೆ, ಅವರ ಬಗ್ಗೆ ಏನೋ ಉದಾಹರಣೆ ಕೊಡುತ್ತಾ ಏನೋ ಒಂದು ವಿಷಯ ಹೇಳಿಬಿಡುತ್ತೇನೆ. ಆಗ ಅವರ ಅಭಿಮಾನಿಗಳು ತಿರುಗಿ ಬಿದ್ದು ನಮ್ ಬಾಸ್ಗೆ ಹೀಗೆ ಹೇಳಿಬಿಟ್ಟಾ ಕಣೋ ಎಂದು ರೇಗುತ್ತಾರೆ. ಅದೆಲ್ಲಾ ಬೇಡಪ್ಪಾ ಬೇಡ. ಇಬ್ಬರೂ ಒಳ್ಳೆಯವರು, ಇಬ್ಬರೂ ನಮ್ಮವರು, ಇಬ್ಬರೂ ಚೆನ್ನಾಗಿರಲಿ ಎಂದಿದ್ದಾರೆ ಪ್ರಥಮ್. ಅಂದಹಾಗೆ ಪ್ರಥಮ್, ಈ ಹಿಂದೆ ಮದುವೆಯಿಂದಲೂ ಸಕತ್ ಸದ್ದು ಮಾಡಿದ್ದರು. ಹಲವು ಸಂದರ್ಶನಗಳಲ್ಲಿ ಪ್ರಥಮ್ ನಾನು ಸರಳವಾಗಿ ಹಳ್ಳಿಯ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಅದರಂತೆ ಸರಳವಾಗಿ ಮದುವೆಯಾಗಿದ್ದು, ಮದುವೆಗೂ ಮುನ್ನ ನಡೆದ ಆರತಕ್ಷತೆಯಲ್ಲಿ ಕುಟುಂಬಸ್ಥರು, ಆಪ್ತರು ಮತ್ತು ಚಿತ್ರರಂಗದ ಹಲವು ಮಂದಿ ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದರು. ಆದರೆ ಇಲ್ಲೊಂದು ಟ್ವಿಸ್ಟ್ ಕೊಟ್ಟಿದ್ದ ನಟ, ಅದೇ ಸಂದರ್ಭದಲ್ಲಿ ಫಸ್ಟ್ ನೈಟ್ ವಿತ್ ದೆವ್ವ ರಿಲೀಸ್ ಮಾಡಿದ್ದರು. ಅಲ್ಲಿ ಸಿನಿಮಾ ನಟಿಯ ಜೊತೆ ಫೋಟೋ ಶೇರ್ ಮಾಡಿದ್ದರು. ತಮ್ಮ ಮದುವೆಯ ದಿನವೂ ಅಸಲಿ ಪತ್ನಿಯ ಜೊತೆಗಿನ ಫೋಟೋ ಹಾಕಿಕೊಳ್ಳುವ ಬದಲು ಪ್ರಥಮ್ ಅವರು ಸಿನಿಮಾ ಪ್ರಮೋಷನ್ ಮಾಡಿಕೊಳ್ಳಲು ಸಿನಿಮಾದ ಹೀರೊಯಿನ್ ನಿಖಿತಾ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದರು. ಆದ್ದರಿಂದ ಇವರ ರಿಯಲ್ ಪತ್ನಿ ಹಾಗೂ ರೀಲ್ ಪತ್ನಿಯ ನಡುವೆ ಕನ್ಫ್ಯೂಸ್ ಆಗಿರುವ ಫ್ಯಾನ್ಸ್, ಮದುವೆಯ ದಿನವೇ ಈ ಫೋಟೋ ನೋಡಿ ನಾಯಕಿಯನ್ನೇ ಮದುಮಗಳು ಎಂದು ತಿಳಿದು ಮದುವೆಯ ಶುಭ ಹಾರೈಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.