ನಿಮ್ಗೆ ಇಷ್ಟವಾದ ಹುಡ್ಗಿ ಮನೆ ಮುಂದೆ ಹೋಗಿ ಕಾಯಿರಿ, ಪರ್ವಾಗಿಲ್ಲ'.. ಹೀಗ್ 'ಮಾಸ್ ಮೆಸೇಜ್' ಕೊಟ್ಟಿದ್ದೇಕೆ ಅಲ್ಲು ಅರ್ಜುನ್?

Published : Jul 29, 2026, 02:19 PM IST
Allu Arjun

ಸಾರಾಂಶ

ಸದ್ಯಕ್ಕೆ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ಅಟ್ಲೀ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಲೋಕೇಶ್ ಕನಕರಾಜ್ ಜೊತೆಗಿನ ಬಹುನಿರೀಕ್ಷಿತ 'AA23' ಚಿತ್ರಕ್ಕೂ ತಯಾರಿ ನಡೆಸುತ್ತಿದ್ದಾರೆ.

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ‘ಮಾಸ್’ ಮೆಸೇಜ್: "ಹುಡುಗಿ ಮನೆ ಮುಂದೆ ಕಾಯಿರಿ ಪರವಾಗಿಲ್ಲ, ಆದ್ರೆ ಟ್ರೋಲ್ ಮಾತ್ರ ಮಾಡ್ಬೇಡಿ!"

ಟಾಲಿವುಡ್‌ನ ‘ಪುಷ್ಪರಾಜ್’ ಅಲಿಯಾಸ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೇವಲ ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಸಖತ್ ‘ಸ್ಟೈಲಿಶ್’ ಮತ್ತು ‘ಖಡಕ್’. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ‘ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್’ ಸಭೆಯಲ್ಲಿ ಬನ್ನಿ ನೀಡಿದ ಭಾಷಣ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಟ್ರೇಡ್‌ಮಾರ್ಕ್ ಕಪ್ಪು ಉಡುಪಿನಲ್ಲಿ ಮಿಂಚಿದ ಅರ್ಜುನ್, ಫ್ಯಾನ್ಸ್‌ಗೆ ಮಾತ್ರವಲ್ಲ, ತಮ್ಮನ್ನು ದ್ವೇಷಿಸುವವರಿಗೂ (Haters) ಒಂದು ಮಸ್ತ್ ಮೆಸೇಜ್ ಕೊಟ್ಟಿದ್ದಾರೆ.

ಪ್ರೀತಿ ಇರಲಿ, ನೆಗೆಟಿವಿಟಿ ಬೇಡ!

ಸಿನಿಮಾ ಅಂದಮೇಲೆ ಫ್ಯಾನ್ ವಾರ್ ಕಾಮನ್. ಆದರೆ, ಇದು ಅತಿರೇಕಕ್ಕೆ ಹೋಗಬಾರದು ಅನ್ನೋದು ಅಲ್ಲು ಅರ್ಜುನ್ ಆಶಯ. ವೇದಿಕೆ ಮೇಲೆ ಮೈಕ್ ಹಿಡಿದ ಬನ್ನಿ, "ನನ್ನ ಅಭಿಮಾನಿಗಳು, ವಿರೋಧಿಗಳು ಮತ್ತು ದ್ವೇಷಿಸುವವರಿಗೆ ಒಂದು ಮಾತು ಹೇಳಬೇಕಿದೆ. ನಿಮಗೆ ಯಾರನ್ನಾದರೂ ಇಷ್ಟವಾಗದಿದ್ದರೆ, ಅವರನ್ನು ದ್ವೇಷಿಸಿ ಅಥವಾ ಟ್ರೋಲ್ ಮಾಡಿ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಹತ್ತಿರ 100 ರೂಪಾಯಿ ಹಣ ಇದ್ದರೆ, ಅದನ್ನು ನಿಮಗೆ ಇಷ್ಟವಿಲ್ಲದ ವಸ್ತುವಿನ ಮೇಲೆ ಖರ್ಚು ಮಾಡ್ತೀರಾ? ಇಲ್ಲ ತಾನೇ? ಹಾಗೆಯೇ ನಿಮ್ಮ ಸಮಯ ಕೂಡ," ಎಂದು ತರ್ಕಬದ್ಧವಾಗಿ ಮಾತನಾಡಿದರು.

ಇದೇ ವೇಳೆ ಅಭಿಮಾನಿಗಳಿಗೆ ಒಂದು ತಮಾಷೆಯ ಕಿವಿಮಾತು ಹೇಳಿದ ನಟ, "ನಿಮಗೆ ಯಾರಾದರೂ ಇಷ್ಟವಾದರೆ, ಬೇಕಿದ್ದರೆ ಆ ಹುಡುಗಿಯ ಮನೆ ಮುಂದೆ ಹೋಗಿ ಕಾಯಿರಿ, ಪರವಾಗಿಲ್ಲ! ಕನಿಷ್ಠ ಆ ಸಮಯದಲ್ಲಾದರೂ ನೀವು ಖುಷಿಯಾಗಿರುತ್ತೀರಿ. ಆದರೆ ದಯವಿಟ್ಟು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಹರಡಬೇಡಿ' ಎಂದು ನಗುತ್ತಲೇ ಜವಾಬ್ದಾರಿಯುತ ಸಂದೇಶ ರವಾನಿಸಿದರು.

ಅಭಿಮಾನಿಗಳಿಗಾಗಿ 6 ಗಂಟೆಗಳ ಕಾಲ ನಿಂತೇ ಫೋಟೋ ನೀಡಿದ ನಟ!

ಅಲ್ಲು ಅರ್ಜುನ್ ಅವರಿಗೆ ಅಭಿಮಾನಿಗಳೆಂದರೆ ಪ್ರಾಣ. ಈ ಕಾರ್ಯಕ್ರಮದಲ್ಲಿ ಕೇವಲ ಭಾಷಣ ಅಷ್ಟೇ ಅಲ್ಲ, ದೂರದ ಊರುಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಸತತ 6 ಗಂಟೆಗಳ ಕಾಲ ನಿಂತಲೇ ಇದ್ದರು. ಅಷ್ಟೇ ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ತಮ್ಮ ಅಭಿಮಾನಿ ಸಂಘದ ಸದಸ್ಯರಿಗಾಗಿ 'ಅಪಘಾತ ವಿಮೆ' ಘೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜ್ಯ ಸಮಿತಿ ಸದಸ್ಯರಿಗೆ 5 ಲಕ್ಷ ಹಾಗೂ ಜಿಲ್ಲಾ ಸದಸ್ಯರಿಗೆ 3 ಲಕ್ಷ ರೂಪಾಯಿ ವಿಮೆ ಸೌಲಭ್ಯವನ್ನು ಅವರು ಘೋಷಿಸಿದ್ದಾರೆ.

ಬ್ಯುಸಿ ಶೆಡ್ಯೂಲ್ ನಡುವೆಯೂ ಫ್ಯಾನ್ಸ್ ಜೊತೆ ಸೆಲ್ಫಿ

ಕಾರ್ಯಕ್ರಮ ಮುಗಿದ ನಂತರ ತಮ್ಮ ಅಧಿಕೃತ ಪೇಜ್‌ನಲ್ಲಿ ಅಭಿಮಾನಿಗಳೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡ ಅವರು, "ನಿಮ್ಮ ಪ್ರೀತಿ ಕಂಡು ನನ್ನ ಹೃದಯ ತುಂಬಿ ಬಂದಿದೆ," ಎಂದು ಬರೆದುಕೊಂಡಿದ್ದಾರೆ.

ಸದ್ಯಕ್ಕೆ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ಅಟ್ಲೀ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಲೋಕೇಶ್ ಕನಕರಾಜ್ ಜೊತೆಗಿನ ಬಹುನಿರೀಕ್ಷಿತ 'AA23' ಚಿತ್ರಕ್ಕೂ ತಯಾರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಬನ್ನಿ ಈಗ ಕೇವಲ ಸಿನಿಮಾದಿಂದ ಮಾತ್ರವಲ್ಲ, ತಮ್ಮ ಈ ಹೊಸ ಚಿಂತನೆಯಿಂದಲೂ ಸುದ್ದಿಯಲ್ಲಿದ್ದಾರೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಮಹಾಮಾರಿ ಕಾಯಿಲೆ ವಿರುದ್ಧ ಹೋರಾಟ: ಕೂದಲಿಲ್ಲದ ಭೂಮಿ ನೋಡೋಕಾಗಲ್ಲ ಎಂದ ವೀಕ್ಷಕರು
ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ