
ಕೊನೆಗೂ ಘೋಷಣೆ ಆಯ್ತು ರಾಮಾಯಣ ಟ್ರೇಲರ್ ಬಿಡುಗಡೆಗೆ ಮುಹೂರ್ತ!
ಭಾರತೀಯ ಸಿನಿಮಾ ರಂಗದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರುವ ಸಿನಿಮಾ ಅಂದ್ರೆ ಅದು 'ರಾಮಾಯಣ! ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' (Ramayana) ಚಿತ್ರವನ್ನು ಮನಿಷ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣ ಮಾಡಿದ್ದಾರೆ. ಈ 'ರಾಮಾಯಣ' ಚಿತ್ರದಲ್ಲಿ ನಟ ಯಶ್ ಅವರು ನಿರ್ಮಾಣದ ಜೊತೆಗೆ 'ರಾವಣ'ನ ಪಾತ್ರವನ್ನೂ ಕೂಡ ಮಾಡಿದ್ದಾರೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲಾ ವಿಷಯಗಳೂ ಈಗಾಗಲೇ ಜಗತ್ತಿಗೆಲ್ಲಾ ಬಹುತೇಕ ಗೊತ್ತಿದೆ. ಆದರೆ ಇದೀಗ ಹೊಸದೊಂದು ಸಂಗತಿ ಸ್ಫೋಟವಾಗಿದ್ದು ಜಾಗತಿಕವಾಗಿ ಹೊಸ ಸಂಚಲನ ಸೃಷ್ಟಿಸಿದೆ. ಅದೇನು ನೋಡಿ...
ಹೌದು, ಈ ವರ್ಷದ (2026) ದೀಪಾವಳಿಗೆ ಬಿಡುಗಡೆ ಆಗಲಿರುವ ರಾಮಾಯಣ ಸಿನಿಮಾದ ಟ್ರೇಲರ್ ಇದೇ ತಿಂಗಳು 24 ಜುಲೈಗೆ ಬಿಡುಗಡೆ ಆಗಬೇಕಿತ್ತು. ಆದರೆ, ವ್ಯವಹಾರಿಕ ದೃಷ್ಟಿಯಿಂದ ಟ್ರೇಲರ್ ಮುಂದೂಡಿದ್ದ ರಾಮಾಯಣ ಚಿತ್ರತಂಡ, ಕೊನೆಗೂ ಹೊಸ ಬಿಡುಗಡೆ ದಿನಾಂಕ ಘೋಷಿಸಿದೆ. ಸದ್ಯ ಚಿತ್ರತಂಡ ಬಿಡಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಮಾಯಣ ಚಿತ್ರದ ಟ್ರೇಲರ್ 30 ಜುಲೈ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಆದರೆ, ಯಾವ ಮುಹೂರ್ತದಲ್ಲಿ ಗೊತ್ತಾ?
ಹೌದು, ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಬ್ರಹ್ಮ ಮುಹೂರ್ತದಲ್ಲಿ ಆಗಲಿದೆ. ಜುಲೈ 30ರಂದು ಬೆಳ್ಳಂಬೆಳಿಗ್ಗೆ 4 ಗಂಟೆ 15 ನಿಮಿಷಕ್ಕೆ (4.15 AM) ಸನಾತನ ಧರ್ಮದ ಪ್ರಕಾರ, ಬ್ರಹ್ಮ ಮಹೂರ್ತದಲ್ಲಿ ನಮ್ಮ ರಾಮಾಯಣದ ಟ್ರೇಲರ್ ಬಿಡುಗಡೆ ಆಗಲಿದೆ ಎಂದು ರಾಮಾಯಣ ಚಿತ್ರತಂಡ ಘೋಷಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರದ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಇದನ್ನು ಘೋಷಿಸುತ್ತಿರುವಂತೆ, ನೆಟ್ಟಿಗರು ಬಹಳಷ್ಟು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ, 'ಇದೇ ಸರಿಯಾದ ಸಮಯ, ಇದೇ ಸೂಕ್ತ ನಿರ್ಧಾರ' ಎಂದು ಹೇಳುವ ಮೂಲಕ ಹಲವರು ಕಾಮೆಂಟ್ ಸೆಕ್ಷನ್ ತುಂಬಿಸಿದ್ದಾರೆ.
ಸದ್ಯಕ್ಕೆ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ನಟ ಯಶ್, ರಣಬೀರ್ ಕಪೂರ್ ಸೇರಿದಂತೆ ಇಡೀ ಚಿತ್ರತಂಡ, ಸದ್ಯಕ್ಕೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ರಾಮಾಯಣ ಸಿನಿಮಾದ ಪ್ರಮೋಶನ್ ಮಾಡಿದ್ದಾರೆ. ನಟ ಯಶ್ ಅವರು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಟ ರಣಬೀರ್ ಕಪೂರ್ ಅವರೊಂದಿಗೆ ತಮ್ಮ 'ರಾಮಾಯಣ' ಸಿನಿಮಾದ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾದ 'ಕಾಮಿಕ್ ಕಾನ್' ಕಾರ್ಯಕ್ರಮದಲ್ಲಿನಟ ಯಶ್ ಹಾಗೂ ರಣಬೀರ್ ಕಪೂರ್ ಭಾಗಿಯಾಗಿ ಗಮನಸೆಳೆದರು.
ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ರಾಮಾಯಣ ಸಿನಿಮಾವನ್ನು ಪ್ರಚಾರ ಮಾಡುತ್ತಿರುವ ನಟ ಯಶ್ ಹಾಗೂ ರಣಬೀರ್ ಕಪೂರ್ ಅವರು ತಮ್ಮ ಚಿತ್ರತಂಡದೊಂದಿಗೆ ಅಮೆರಿಕಾದಲ್ಲಿ ಬೀಡುಬಿಟ್ಟಿದ್ದಾರೆ. 'ಕಾಮಿಕ್ ಕಾನ್'ನಲ್ಲಿ ರಾಮಾಯಣ ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಚಿತ್ರತಂಡವು ಅಮೆರಿಕಾದ ಹಲವು ಕಡೆ ಪ್ರಚಾರದಲ್ಲಿ ನಿರತವಾಗಿದೆ. ಇದೀಗ ಜಗತ್ತು ಬಹುನಿರೀಕ್ಷೆಯಿಂದ ಕಾಯುತ್ತಿರುವ ರಾಮಾಯಣದ ಟ್ರೇಲರ್ ಬಿಡುಗಡೆ ಜುಲೈ 30ರ ಮುಂಜಾನೆ ನಿಗದಿಯಾಗಿದೆ. ವಿಶ್ವದಾದ್ಯಂತ ಸಿನಿಪ್ರೇಕ್ಷಕರು ಈ ಸುಮುಹೂರ್ತವನ್ನೇ ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.