
ಏನಾಗ್ತಿದೆ ದರ್ಶನ್-ವಿಜಯಲಕ್ಷ್ಮೀ ಹಾಗೂ ಧನ್ವೀರ್ ಮಧ್ಯೆ?
Dhanveer Gowda Post after Darshan Thoogudeepa Meet: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್ ಅವರನ್ನು ನಿನ್ನೆ (28 ಜುಲೈ 2026) ದರ್ಶನ್ ಆಪ್ತ ಸ್ನೇಹಿತ ಹಾಗೂ ನಟ ಧನ್ವೀರ್ ಗೌಡ (Dhanveer Gowda) ಭೇಟಿಯಾಗಿ ಮಾತನ್ನಾಡಿಕೊಂಡು ಬಂದಿದ್ದಾರೆ. ಈ ಮೊದಲು ಕೂಡ ಧನ್ವೀರ್ ಅವರು ದರ್ಶನ್ (Darshan Thoogudeepa) ಅವರನ್ನು ಭೇಟಿಯಾಗಿ ಬಂದಿದ್ದರು. ಆದರೆ, ಈ ಭೇಟಿಯ ಬಳಿಕ ನಟ ಧನ್ವೀರ್ ಗೌಡ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಮಾಡಿರೋ ಪೋಸ್ಟ್ ಇದೀಗ ತೀವ್ರ ಕುತೂಹಲ ಹಾಗೂ ಸಂಚಲನ ಸೃಷ್ಟಿಸಿದೆ. ಹಾಗಿದ್ದರೆ ನಟ ಧನ್ವೀರ್ ಗೌಡ ಅದೇನು ಪೋಸ್ಟ್ ಮಾಡಿದ್ದಾರೆ. ಅದೇನು ಅಂತ ಮುಂದೆ ನೋಡಿ..
ಹೌದು, ನಿನ್ನೆ ತಮ್ಮ ಆಪ್ತ ಸ್ನೇಹಿತ ದರ್ಶನ್ ತೂಗುದೀಪ ಅವರನ್ನು ಜೈಲಿಗೆ ಹೋಗಿ ಭೇಟಿ ಮಾಡಿ ವಾಪಸ್ ಆದ ಬಳಿಕ ನಟ ಧನ್ವೀರ್ ಗೌಡ ಅವರು ಮಾಡಿರೋ ಪೋಸ್ಟ್ ಹೀಗಿದೆ. ಕೃಷ್ಣನ ಫೋಟೋ ಕಾರ್ಡ್‌ನಲ್ಲಿ 'ಪಡೆದುಕೊಂಡ ಮೇಲೆ.... ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ.... ಅದು ವಸ್ತುವಾಗಲಿ, ವ್ಯಕ್ತಿಯಾಗಲಿ....' ಎಂದು ಬರೆದಿರುವ ಪೋಸ್ಟ್ ಮಾಡಿದ್ದಾರೆ ಧನ್ವೀರ್ ಗೌಡ. ಇದೇ ಪೋಸ್ಟ್ ಅನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ಕೆಲವು ದಿನಗಳ ಹಿಂದೆ ಜೈಲಿನಲ್ಲಿ ಪತಿ ದರ್ಶನ್ ಭೇಟಿ ಮಾಡಿ ಬಂದ ಬಳಿಕ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಪೋಸ್ಟ್ ಮಾಡಿದ್ದರು. ಒಂದೇ ರೀತಿಯಲ್ಲಿ ಈ ಇಬ್ಬರೂ, ಅಂದರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಗೌಡ ಪೋಸ್ಟ್ ಮಾಡುವ ಮೂಲಕ ಹೊಸ ಕುತೂಹಲ ಹಾಗೂ ಸಂಶಯಕ್ಕೆ ಕಾರಣರಾಗಿದ್ದಾರೆ.
ಹಾಗಿದ್ದರೆ ಈ ಪೋಸ್ಟ್ ಅಸಲಿಯತ್ತೇನು? ಅದ್ಯಾಕೆ ಇಬ್ಬರೂ (ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಗೌಡ) ಒಂದೇ ಪೋಸ್ಟ್ ಹಂಚಿಕೊಂಡಿದ್ದಾರೆ ಎಂಬ ಸತ್ಯ ಸಂಗತಿ ಅವರಿಗೇ ಗೊತ್ತು. ಆದರೆ ಇಬ್ಬರೂ ಹಾಕಿರುವ ಒಂದೇ ಪೋಸ್ಟ್ ಇದೀಗ, ಇಲ್ಲಸಲ್ಲದ ಚರ್ಚೆಗೆ, ಕುತೂಹಲಕ್ಕೆ ಹಾಗು 'ಅವರ ನಡುವೆ ಏನೋ ಸರಿಯಿಲ್ಲ ಅಥವಾ ಎಲ್ಲವೂ ಸರಿಯಿಲ್ಲ' ಎಂಬ ಮಾತುಗಳಿಗೆ ಕಾರಣವಾಗಿದೆ. ಹಾಗಿದ್ದರೆ ಅಸಲೀಯತ್ತು ಏನು? ಏಕೆ ಇಬ್ಬರೂ ಒಂದೇ ರೀತಿಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಅದೂ ಕೂಡ ಜೈಲಿನ್ಲಲಿ ನಟ ದರ್ಶನ್ ಅವರನ್ನು ಬೇಟಿಯಾಗಿ ಬಂದ ಮೇಲೆ!?
ದರ್ಶನ್ ಭೇಟಿಯಾಗಿ ಬಂದ ನಟ ಧನ್ವೀರ್ ಕ್ಯಾಮೆರಾ ಮುಂದೆ ಹೇಳಿರೋ ಮಾತು ಒಂದೇ ಶಬ್ದ. 'ದರ್ಶನ್ ಹೇಗಿದ್ದಾರೆ ಎಂಬ ಮಾಧ್ಯಮದ ಅನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿರುವ ನಟ ಧನ್ವೀರ್ ಗೌಡ, 'ಪರವಾಗಿಲ್ಲ' ಎಂದಷ್ಟೇ ಹೇಳಿದ್ದಾರೆ. ಹಾಗಿದ್ರೆ ನಿಜವಾಗಿಯೂ ದರ್ಶನ್-ಧನ್ವೀರ್ ಮಧ್ಯೆ ಏನಾಗುತ್ತಿದೆ? ನಿನ್ನೆ ಧನ್ವೀರ್ ಗೌಡ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಏಕೆ ಹೋಗಿಲ್ಲ. ವಿಜಯಲಕ್ಷ್ಮೀ ಹಾಗೂ ಧನ್ವೀರ್ ಮಧ್ಯೆ ಸಮಸ್ಯೆ ಆಗಿದೆಯಾ ಅಥವಾ ದರ್ಶನ್ ಧನ್ವೀರ್ ಮಧ್ಯೆ ಮನಸ್ತಾಪ ಮೂಡಿದೆಯಾ? ಹೀಗೆ ಹಲವಾರು ಪ್ರಶ್ನೆಗಳು ಈಗ ಕನ್ನಡದ ಸಿನಿರಸಿಕರು, ದರ್ಶನ್ ಆಪ್ತರು ಸೇರಿದಂತೆ ದರ್ಶನ್ ಅಭಿಮಾನಿಗಳ ವಲಯದಲ್ಲಿ ಮೂಡತೊಡಗಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಷ್ಟೇ!
ಒಟ್ಟಿನಲ್ಲಿ, ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್ ಅವರ ಕ್ಲೋಸ್ ಸರ್ಕಲ್‌ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೇಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ ‘ಸ್ನೇಹವೆಂದರೆ ಸ್ನೇಹ, ಪ್ರೀತಿ ಎಂದರೆ ಪ್ರೀತಿ-ನಮ್ಮಿಬ್ಬರ ನಡುವಿನ ಗೌರವಾದರ ಹಾಗೇ ಇದೆ’ ಎಂಬುದನ್ನು ಈ ಮೂಲಕ ಜಗತ್ತಿಗೆ ಹೇಳುತ್ತಿದ್ದಾರಾ? ಅಥವಾ ಬೇರೇನೋ ಆಗ್ತಿದ್ಯಾ? ಕಾಲವೇ ಉತ್ತರ ಕೊಡಬೇಕಿದೆ ಎನ್ನೋದು ಸೂಕ್ತ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.