
ನಟ ಉಪೇಂದ್ರ ಅವರ ಸಿನಿಮಾ ಎಂದರೆ ಅಲ್ಲೇನೋ ಬೇರೆಯದ್ದೇ ಸ್ಟೋರಿ ಇರತ್ತೆ, ವಿಭಿನ್ನ ಗೆಟಪ್ ಇರುತ್ತೆ ಎನ್ನುವ ಮಾತಿದೆ. ಸ್ಯಾಂಡಲ್‌ವುಡ್ ಸಿನಿಮಾಗೆ ಮತ್ತೊಂದು ರೀತಿಯಲ್ಲಿ ವಿಭಿನ್ನ ಕಲಾಸೃಷ್ಟಿಯನ್ನು ಮಾಡಿದವರೇ ಉಪೇಂದ್ರ ಅವರು. ಅವರಿಗೆ ಈಗ 58 ವರ್ಷ ವಯಸ್ಸು. ಈಗಲೂ ಯಂಗ್ and ಎನರ್ಜಿಟಿಕ್ ಆಗಿರುವ ಉಪೇಂದ್ರ ಅವರು ಹೀರೋ ಆಗಿಯೇ ಸದ್ದು ಮಾಡುತ್ತಲೇ ಇದ್ದಾರೆ. ಪ್ರಜಾಕೀಯ ಎನ್ನುವ ಪಕ್ಷ ತೆರೆದು ವಿಭಿನ್ನ ರೀತಿಯಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದರೂ, ಅವರನ್ನು ನಟನೆಯಲ್ಲಿಯೇ ನೋಡಲು ಇಷ್ಟಪಟ್ಟ ಅಸಂಖ್ಯ ಅಭಿಮಾನಿಗಳು, ರಾಜಕೀಯವಾಗಿ ಅವರ ಕೈ ಹಿಡಿಯಲಿಲ್ಲ.
ಆದ್ದರಿಂದ ಅವರು ಸಿನಿಮಾ ಇಂಡಸ್ಟ್ರಿಯಲ್ಲಿಯೇ ಮುಂದುವರೆಯಲು ಇಷ್ಟಪಟ್ಟಿರುವಂತಿದೆ. ಬಣ್ಣದ ಲೋಕದಲ್ಲಿಯೇ ಸದ್ಯ ಉಪೇಂದ್ರ ಅವರು ಬಿಜಿಯಾಗಿದ್ದಾರೆ. ಅವಾರ್ಡ್ ಫಂಕ್ಷನ್ ಒಂದರಲ್ಲಿ ಕಾಣಿಸಿಕೊಂಡಿದ್ದ ಉಪೇಂದ್ರ ಅವರು, ಇದೀಗ ಇನ್ನೊಂದು ವಿಷ್ಯವನ್ನು ರಿವೀಲ್ ಮಾಡಿದ್ದಾರೆ. ಅದೇನೆಂದರೆ, ತಮಗೆ ನಿರ್ದೇಶನ ಎಂದರೆ ಇಷ್ಟ. ಈ ಹಿನ್ನೆಲೆಯಲ್ಲಿ, 90 ವರ್ಷವಾದರೂ ನಿರ್ದೇಶನವನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ರಾಜಕಾರಣಕ್ಕಿಂತಲೂ ಬಣ್ಣದ ಲೋಕದಲ್ಲಿಯೇ ನಟ ಸಕ್ರಿಯವಾಗಿ ಇರಲು ಬಯಸಿರುವುದು ತಿಳಿದುಬಂದಿದೆ.
ಈಚೆಗೆ ನಟ, ʼನಗರʼ ಎಂಬ ಆಪ್ ಕ್ರಿಯೇಟ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಆಟೋ ಹಾಗೂ ಕ್ಯಾಬ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಬೆಂಗಳೂರಿನ ಆಟೋ ಚಾಲಕರು ಹಾಗೂ ಕ್ಯಾಬ್ ಚಾಲಕರೆಲ್ಲರೂ ಸೇರಿ ಮಾಡಿರುವ ಅಪ್ಲಿಕೇಷನ್ ಇದಾಗಿದೆ. ಆ ಆಪ್ ಮೂಲಕ ಇನ್ಮುಂದೆ ಪ್ರಯಾಣಿಕರು ಆಟೋ ಮತ್ತು ಕ್ಯಾಬ್ ಬುಕ್ ಮಾಡಿಕೊಂಡು ಹೋಗಬಹುದು.
ವಿಶೇಷ ಅಂದ್ರೆ ಇದನ್ನು ಆಟೋ ಚಾಲಕರು ಮತ್ತು ಕ್ಯಾಬ್ ಚಾಲಕರೇ ಸೇರಿ ಅಭಿವೃದ್ಧಿಪಡಿಸಿರುವ ಆಪ್ ಆಗಿದೆ. ಈ ಆಪ್ ಮೂಲಕವೂ ನೀವು ಸುರಕ್ಷಿತವಾಗಿ ತಲುಪಬೇಕಾಗಿದ್ದ ಸ್ಥಳವನ್ನು ಸೇರಬಹುದು. ನಮ್ಮವರೇ ಅಭಿವೃದ್ಧಿಪಡಿಸಿರುವ ನಗರ ಆಪ್ ತಿಳಿದು ತುಂಬಾ ಖುಷಿ ಆಯಿತು ಎಂದು ಉಪೇಂದ್ರ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.