ಶಾರುಖ್ ಖಾನ್ ಮನೆಯಲ್ಲಿ ಕಾಣಿಸಿಕೊಂಡ 8 ಅಡಿ ಉದ್ದದ ಬೃಹತ್ ಹಾವು, ಕಂಗಾಲದ ಮನ್ನತ್

Published : Aug 18, 2026, 04:17 PM IST
Snake Found at Mannat Shah Rukh Khan Home

ಸಾರಾಂಶ

ಬಾಲಿವುಡ್ ನಟ ಶಾರುಖ್ ಖಾನ್ ಮನ್ನತ್ ಮನೆಯಲ್ಲಿ ಬೃಹತ್ ಹಾವು ಕಾಣಿಸಿಕೊಂಡಿದೆ. ಹಾವು ಪ್ರತ್ಯಕ್ಷವಾದ ಬೆನ್ನಲ್ಲೇ ಮನೆಯಲ್ಲಿದ್ದ ಎಲ್ಲರು ಕಂಗಾಲಾಗಿದ್ದಾರೆ. ಸಿಬ್ಬಂದಿಗಳು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ, ಉರಗ ತಜ್ಞರು ದೌಡಾಯಿಸಿದ ಘಟನೆ ನಡೆದಿದೆ.

ಮುಂಬೈ (ಆ.18) ಬಾಲಿವುಡ್ ನಟ ಶಾರುಖ್ ಖಾನ್ ಅವರ ಮನೆಯಲ್ಲಿ ಹಾವು ಕಾಣಿಸಿಕೊಂಡು ಕೋಲಾಹಲ ಸೃಷ್ಟಿಯಾದ ಘಟನೆ ನಡೆದಿದೆ. ಮುಂಬೈನ ಬಾಂದ್ರಾದಲ್ಲಿರುವ ಮನ್ನತ್ ಮನೆಯಲ್ಲಿ ಹಾವು ಕಾಣಿಸಿಕೊಂಡಿದೆ. ಹಾವು ಕಾಣಿಸಿಕೊಂಡ ಬೆನ್ನಲ್ಲೇ ಸಿಬ್ಬಂದಿಗಳು ಅಲರ್ಟ್ ಆಗಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇತ್ತ ಅರಣ್ಯ ಇಲಾಖೆ ಸಿಬ್ಬಂದಿ ಉರಗ ತಜ್ಞರು ಸ್ಥಳಕ್ಕೆ ಆಗಮಿಸಿ 8 ಅಡಿ ಉದ್ದದ ಬೃಹತ್ ಹಾವನ್ನು ರಕ್ಷಿಸಿದ್ದಾರೆ.

ಮನೆಯ ಸಿಬ್ಬಂದಿಗಳಿಂದ ಸೂಚನೆ

ಮನ್ನತ್ ಮನೆಯ ಹೊರಾಂಗಣದ ಮೆಟ್ಟಿಲುಗಳ ಪಕ್ಕದಲ್ಲಿ ಹಾವು ಕಾಣಿಸಿಕೊಂಡಿದೆ. ಹಾವು ಕಾಣಿಸಿಕೊಂಡ ಬೆನ್ನಲ್ಲೇ ಸಿಬ್ಬಂದಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇತ್ತ ಮನೆಯಲ್ಲಿದ್ದ ಸದಸ್ಯರು ಹಾವಿನಿಂದ ಆತಂಕಗೊಂಡಿದ್ದಾರೆ. ಇತ್ತ ಸಿಬ್ಬಂದಿಗಳು ಹಾವು ಮನೆಯೊಳಗೆ ಸೇರಿ ಅಡಗಿಕೊಂಡರೆ ಸಮಸ್ಯೆಯಾಗಲಿದೆ ಎಂದು ಸೂಕ್ಷ್ಮವಾಗಿ ಹಾವನ್ನು ಗಮನಿಸಿದ್ದಾರೆ. ಇಷ್ಟೇ ಅಲ್ಲ ಹಾವು ಮೆಟ್ಟಿಲುಗಳಂದ ನೇರವಾಗಿ ಮನ್ನತ್ ಮನೆಯೊಳಗೆ ಸೇರದಂತೆ ನೋಡಿಕೊಂಡಿದ್ದಾರೆ.

ಕೆಲ ಹೊತ್ತಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಉರಗ ತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ. ಉರಗ ತಜ್ಞ ವಿಕಿ ದುಬೆ ಹಾವು ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೆಲ ಹೊತ್ತಲ್ಲಿ ಹಾವು ಹಿಡಿದಿದ್ದಾರೆ. ಧಾಮನ್ ತಳಿಗೆ ಸೇರಿದ್ದ ಈ ಹಾವು ವಿಷಪೂರಿತವಲ್ಲ ಎಂದು ಉರಗ ತಜ್ಞ ಹೇಳಿದ್ದಾರೆ. ಚೀಲದಲ್ಲಿ ಬಂಧಿಸಿದ ಹಾವನ್ನು ಅರಣ್ಯ ಇಲಾಖೆ ನಿಯಮದಂತೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಎರಡು ಹಾವಿನಲ್ಲಿ ಒಂದು ನಾಪತ್ತೆ

ಎರಡು ಹಾವುಗಳು ಕಾಣಿಸಿಕೊಂಡಿದೆ ಎಂಬ ಮಾಹಿತಿ ಬಂದಿತ್ತು. ಆದರೆ ಒಂದು ಹಾವು ಮಾತ್ರ ರಕ್ಷಣೆ ಮಾಡಲಾಗಿದೆ. ಮತ್ತೊಂದು ಹಾವು ಕಾಣಿಸಿಕೊಂಡಿಲ್ಲ. ಮುಂಬೈನಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದ ಹಲವೆಡೆ ಹಾವುಗಳು ಕಾಣಿಸಿಕೊಂಡಿದೆ. ಮಳೆ ಕಾರಣದಿಂದ ಹಾವುಗಳು ಹರಿದು ಬರುದು ಸಾಮಾನ್ಯ. ಇದೇ ರೀತಿ ಮನ್ನತ್ ಆವರಣಕ್ಕೆ ಲಗ್ಗೆ ಇಟ್ಟಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ವಿಷಕಾರಕ ಹಾವಲ್ಲ ಅನ್ನೋದು ಪತ್ತೆಯಾದ ಬೆನ್ನಲ್ಲೇ ಶಾರುಖ್ ಕುಟುಂಬಸ್ಥರು ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇತ್ತೀಚೆಗೆ ಹಲೆವೆಡೆ ಹಾವು ಕಡಿತ ವರದಿಯಾಗಿದೆ. ವಿಷಕಾರಿ ಹಾವಿನಿಂದ ಕೆಲವರು ಪ್ರಾಣಕ್ಕೂ ಸಂಚಕಾರ ಬಂದಿದೆ. ಇತ್ತೀಚೆಗೆ ಮಧ್ಯಪ್ರದೇಶದ ಪೊಲೀಸ್ ಪೇದೆಗೆ ಹಾವು ಕಡಿದು ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಇನ್ನು ಇಬ್ಬರು ಸಹೋದರರು ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಡಿದಿತ್ತು. ಸಹೋದರನ ಬದುಕಿಸಲು ಅಣ್ಣ ಶತಪ್ರಯತ್ನ ಮಾಡಿದ ಘಟನೆಯೂ ವರದಿಯಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಅಗ್ನಿಪರೀಕ್ಷೆ ಬಗ್ಗೆ ನೀವು ಅಂದ್ಕೊಂಡಿರೋದೆಲ್ಲಾ ಸುಳ್ಳು: ಗಿನ್ನೆಸ್​ ದಾಖಲೆ ಹರಿದ ಅಭ್ಯರ್ಥಿ ಏನಂದ್ರು ಕೇಳಿ
ಅರ್ಜುನ್ ದೇವ್ ತಳು-ಕನ್ನಡ ಸಿನಿಮಾ ಟಾಸ್‌ಗೆ ಶಿಲ್ಪಾ ಗಣೇಶ್ ಸಾರಥ್ಯ, ಮೊದಲ ಹಾಡು ರಿಲೀಸ್