
ಬೆಂಗಳೂರು (ಆ.18) ತುಳು ನಾಡಿನ ಸೂಪರ್ ಸ್ಟಾರ್ ಅರ್ಜುನ್ ದೇವ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ಚಿತ್ರ ಟಾಸ್ ಸೆಪ್ಟೆಂಬರ್ 18ಕ್ಕೆ ಬಿಡುಗಡೆಯಾಗಹುತ್ತಿದೆ. ಡಾ.ದೇವದಾಸ್ ಕಾಪಿಕಾಡ್ ಕಥೆ,ಚಿತ್ರಕಥೆ, ಸಂಭಾಷಣೆ ಬರೆದ ಈ ಸಿನಿಮಾ ವಿಶೇಷ ಅಂದರೆ ತುಳು ಹಾಗೂ ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣಗೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ , ಜೋಯೆಲ್ ಶರ್ಮನ್ ಡಿಸೋಜಾ ಛಾಯಾಗ್ರಹಣ,ಯಾಶ್ವಿನ್ ಕೆ ಶೆಟ್ಟಿಗೇರ್ ಸಂಕಲನ ಟಾಸ್ ಚಿತ್ರಕ್ಕಿದೆ. ಅದ್ಧೂರಿ ಸಿನಿಮಾಗೆ ಶಿಲ್ಪಾ ಗಣೇಶಾ ಸಾರಥ್ಯದ ಗೋಲ್ಡನ್ ಮೂವೀಸ್ ಅರ್ಪಿಸು ಅಿಕಾ ಪ್ರೊಡಕ್ಷನ್ ಹಾಗೂ ಬಿ.ಆರ್.ಬಿ ಪ್ರೊಡಕ್ಷನ್ಸ್ ನಿರ್ಮಾಣ ಜವಾಬ್ದಾರಿ ಹೊತ್ತಿಕೊಂಡಿದೆ.
ಸುಫ್ರಮ್ ಸೋ ಖ್ಯಾತಿಯಾ ಶನೀಲ್ ಗೌತಮ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರೋದು ವಿಶೇಷ. ಟಾಸ್ ಸಿನಿಮಾ ನೋಡಿ ಮೆಚ್ಚಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ ರವರು ಈ ಚಿತ್ರವನ್ನ ಗೋಲ್ಡನ್ ಮೂವೀಸ್ ಬ್ಯಾನರ್ ಮೂಲಕ ಅರ್ಪಿಸ್ತಿದ್ದಾರೆ. ಪ್ರಚಾರ ಆರಂಭಿಸಿರೋ ಚಿತ್ರತಂಡ ಚಿತ್ರದ ಮೊದಲ ಹಾಡನ್ನ ಬಿಡುಗಡೆ ಮಾಡಿದ್ದಾರೆ..
ಹೆಲೋ ಹೆಲೋ ನೀಲಾಂಬರಿ ಅನ್ನೋ ಮೆಲೋಡಿ ಡ್ಯುಯೆಟ್ ಹಾಡಲ್ಲಿ ಅರ್ಜುನ್ ದೇವ್ ಮತ್ತು ನಾಯಕಿ ಸುತೇಜ್ ಶೆಟ್ಟಿ ಕೆಮಿಸ್ಟ್ರಿ ಆಕರ್ಷಕವಾಗಿದೆ.. ಮಣಿಕಾಂತ್ ಕದ್ರಿ ಟ್ಯೂನ್, ಯೋಗರಾಜ್ ಭಟ್ ಸಾಹಿತ್ಯವಿರೋ ಈ ಹಾಡನ್ನ ಅರ್ಮಾನ್ ಮಾಲೀಕ್ ಹಾಡಿದ್ದಾರೆ..ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಹಾಡು ಲಭ್ಯವಿದೆ.
ಟಾಸ್ ಸಿನಿಮಾದ ಹಾಡು ಮತ್ತು ಮೇಕಿಂಗ್ ಗುಣಮಟ್ಟ ನಿರೀಕ್ಷೆ ಹುಟ್ಟಿಸ್ತಿದೆ... ಅಂದ್ಹಾಗೆ ಈ ಹಾಡಿನ ಮೂಲಕಪ್ರಚಾರ ಕೆಲಸಕ್ಕೆ ಚಾಲನೆ ಕೊಟ್ಟಿರೋ ಚಿತ್ರತಂಡ ಸದ್ಯದಲ್ಲೇ ಪತ್ರಿಕಾಗೋಷ್ಠಿ ಮೂಲಕ ಉಳಿದ ವಿಷ್ಯಗಳನ್ನ ಹಂಚಿಕೊಳ್ಳೊ ಯೋಜನೆಯಲ್ಲಿದ್ದು, ಚಿತ್ರವನ್ನ ಸೆಪ್ಟೆಂಬರ್ 18ಕ್ಕೆ ಬಿಡುಗಡೆ ಮಾಡೋ ಸನ್ನಾಹದಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.