ಸುಶ್ಮಿತಾ ಸೇನ್‌ಳನ್ನು ಬದುಕಿಸಿದ ನುಂಚಕ್‌!

Published : Jul 30, 2025, 10:10 PM IST
SN Sushmita sen reveals about her addison disease

ಸಾರಾಂಶ

ಮಾರಕ ಅಡ್ರಿನಲ್ ಕಾಯಿಲೆಯಿಂದ ಬಳಲುತ್ತಿದ್ದ ಸುಶ್ಮಿತಾ ಸೇನ್, ನುಂಚಕ್ ಕಲೆಯಿಂದಾಗಿ ಗುಣಮುಖರಾಗಿದ್ದಾರೆ. ಅಡ್ರಿನಲ್ ಗ್ರಂಥಿಯ ಸಮಸ್ಯೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿದ್ದ ಅವರು, ನುಂಚಕ್ ಕಸರತ್ತು ಮತ್ತು ಧ್ಯಾನದ ಮೂಲಕ ಸಹಜ ಸ್ಥಿತಿಗೆ ಮರಳಿದ್ದಾರೆ.

ಬಾಲಿವುಡ್‌ ನಟಿ ಸುಶ್ಮಿತಾ ಸೆನ್ ಒಂದು ಮಾರಕ ಕಾಯಿಲೆಯಿಂದ ಬಚಾವ್ ಆಗಿದ್ದಾರೆ. ಅದು ಅಡ್ರಿನಲ್‌ ಎಂಬ ಕಾಯಿಲೆ. ಅವರಿಗೆ 2014ರಲ್ಲೇ ಅಡ್ರಿನಲ್ ಕಾಯಿಲೆ ಶುರುವಾಗಿತ್ತು. ತಾನು ಏನೆಲ್ಲ ಸಮಸ್ಯೆ ಎದುರಿಸಿದೆ ಅನ್ನೋದನ್ನು ಸುಶ್ಮಿತಾ ಹೀಗೆ ಹೇಳುತ್ತಾರೆ. 'ಇದೊಂಥರ ಅಟೊ ಇಮ್ಯೂನ್ ಸಮಸ್ಯೆ. ನಮ್ಮ ದೇಹದಲ್ಲಿರೋ ಪ್ರತಿರೋಧ ಶಕ್ತಿ ಎಲ್ಲ ಸೋರಿ ಹೋದ ಹಾಗೆ. ಯಾವ ಪರಿ ಸುಸ್ತಾಗುತ್ತಿದ್ದೆ ಅಂದ್ರೆ ಇದರ ವಿರುದ್ಧ ಹೋರಾಡಲು ನನ್ನಿಂದ ಸಾಧ್ಯವೇ ಇಲ್ಲ ಅಂತ ಅನಿಸಿ ಬಿಟ್ಟಿತ್ತು. ಬಳಲಿಕೆ ಜೊತೆಗೆ ಪ್ರಸ್ಟೇಷನ್, ಅಸಹಜ ಸಿಟ್ಟು, ಅಸಹಾಯಕತೆ, ಕಣ್ಣ ಕೆಳಗಿನ ಚರ್ಮ ಕಪ್ಪಾಗುತ್ತಿತ್ತು. ಇದೊಂಥರ ನನ್ನ ಬದುಕಿನ ಕರಾಳತೆಗೆ ಸಾಕ್ಷಿಯಾದ ಹಾಗಿತ್ತು. ಹಾರ್ಮೋನಲ್ ಟಾಬ್ಲೆಟ್ಸ್ ತಗೊಳ್ತಿದ್ದೆ. ಇದರ ಸೈಡ್ ಎಫೆಕ್ಟ್‌ಗಳು ನನ್ನನ್ನು ಹೈರಾಣಾಗಿಸುತ್ತಿದ್ದವು. ಇಂಥಾ ಬದುಕೂ ಬೇಕಾ ಅಂತ ಅನಿಸಿ ಬಿಟ್ಟಿತು. ಆ ಟೈಮ್‌ನಲ್ಲಿ ದೇವರಂತೆ ಬಂದದ್ದು ನುಂಚಕು!ʼ

ಈ ನುಂಚಕುಗೆ ಮೊದಲು ಅಡ್ರಿನಲ್‌ ಕಾಯಿಲೆ ಅಂದರೆ ಏನು ಅಂತ ನೋಡೋಣ. ನಮ್ಮ ಕಿಡ್ನಿಯ ಮೇಲ್ಬಾಗದಲ್ಲಿ ಅಡ್ರಿನಲ್ ಗ್ರಂಥಿ ಇದೆ. ಇವುಗಳು ದೇಹಕ್ಕೆ ಅತ್ಯವಶ್ಯಕವಾದ ಅನೇಕ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತವೆ. ಕಾರ್ಟಿಸೋಲ್ ಗಳೂ ಅವುಗಳಲ್ಲೊಂದು. ಒತ್ತಡದ ಸನ್ನಿವೇಶಗಳನ್ನು ನಿಭಾಯಿಸೋದು, ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಭಾಯಿಸೋದು, ಉರಿಯೂತದ ಸಮಸ್ಯೆ ನಿವಾರಿಸೋದು, ಮರೆವನ್ನು ತಗ್ಗಿಸೋದು ಇತ್ಯಾದಿ ಕೆಲಸಗಳನ್ನು ಈ ಹಾರ್ಮೋನ್ ಮಾಡುತ್ತದೆ. ಜೊತೆಗೆ ಸೆಕ್ಸ್‌ ಹಾರ್ಮೋನ್‌ಗಳನ್ನು ಉತ್ಪಾದಿಸುವ ಅಲ್ಲೋಸ್ಟೆರೋನ್ ಇತ್ಯಾದಿಗಳು ಅಡ್ರಿನಲ್ ಗ್ರಂಥಿಯ ಕೊಡುಗೆ. ಸುಶ್ಮಿತಾ ಸೇನ್‌ಗೆ ಈ ಅಡ್ರಿನಲ್ ಗ್ರಂಥಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಅಡ್ರಿನಲ್ ಕಾಯಿಲೆ ಶುರುವಾಗಿ ಆಕೆ ಕುಸಿದುಹೋದಳು.

ಅಡ್ರಿನಲ್ ಕಾಯಿಲೆ ಬಂದಾಗ ಏನಾಗುತ್ತೆ? ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಾಡುವ ರೋಗವಿದು. ಇದು ತೀವ್ರಗತಿಗೆ ಹೋದಾಗ ಇದು ಮಾರಣಾಂತಿಕವೂ ಆಗಬಹುದು. ಸಾಮಾನ್ಯವಾಗಿ ಡಿಪ್ರೆಶನ್, ನಿದ್ರಾ ಹೀನತೆ, ಶಕ್ತಿ ಹೀನತೆ, ಸ್ನಾಯುಗಳಲ್ಲಿ ಬಳಲಿಕೆ, ಸುಸ್ತು, ಆಯಾಸ ಕಾಣಿಸುತ್ತೆ. ಚರ್ಮ ಕಪ್ಪಾಗುತ್ತೆ. ಆಮೇಲೂ ಮುಂದುವರಿದರೆ ಚಿತ್ತಭ್ರಮೆಯಂಥಾ ಸ್ಥಿತಿ ಬರಬಹುದು. ಕೊನೆಯ ಹಂತದಲ್ಲಿ ಅತಿಯಾದ ಭಯ, ಗೊಂದಲ, ಉದ್ವೇಗ, ಪ್ರಜ್ಞಾಹೀನತೆ, ಅತಿಯಾದ ಜ್ವರ, ಆಘಾತ ಕೊನೆಗೆ ಸಾವೂ ಬರಬಹುದು.

ಇದರಿಂದ ಪಾರಾಗಲು ಸುಶ್ಮಿತಾ ಬಳಸಿದ್ದು ನುಂಚಕು. ನುಂಚಕ್ ಅಂದರೆ ಚೈನ್ ಸ್ಟಿಕ್ ಅಂತ. ಒಂದು ಚೈನ್‌ನ ಎರಡೂ ಬದಿಗೆ ದಪ್ಪದ ಕಡ್ಡಿಗಳು. ಇವುಗಳ ಮೂಲಕ ಮಾಡುವ ಕಸರತ್ತು. ಧ್ಯಾನ ಮಾಡುತ್ತಾರೆ. ಬ್ರೂಸ್ ಲೀ ಸಿನಿಮಾಗಳ ಮಾರ್ಷಲ್ ಆರ್ಟ್ ನೋಡಿದ್ರೆ ನಿಮಗೆ ಈ ನುಂಚಕ್ ಹೇಗಿರಬಹುದು ಅನ್ನೋ ಐಡಿಯಾ ಬರುತ್ತೆ. ನೂಪುರ್ ಶಿಖಾ‌ ಅನ್ನುವ ಗುರುವಿನಿಂದ ಸುಶ್ಮಿತಾ ನುಂಚಕ್ ಕಸರತ್ತು, ಧ್ಯಾನ ಕಲಿತರು. ಕಾರ್ಯನಿರ್ವಹಿಸೋದನ್ನೇ ಮರೆತುಬಿಟ್ಟಿದ್ದ ಅಡ್ರಿನಲ್ ಗ್ಲಾಂಡ್ ನಿಧಾನಕ್ಕೆ ಎಚ್ಚೆತ್ತುಕೊಂಡಿತು. ಹಿಂದಿನಂತೆ ಕಾರ್ಯನಿರ್ವಹಣೆಗೆ ಶುರು ಮಾಡಿತು. ಆಯಾಸ, ಸಿಟ್ಟು, ಕಪ್ಪು ಕಲೆ ಇತ್ಯಾದಿಗಳ ಜಾಗವನ್ನು ಚೈತನ್ಯ, ಲವಲವಿಕೆ, ಕಾಂತಿಯುಕ್ತ ಚರ್ಮಗಳು ಆವರಿಸಿಕೊಂಡವು.

ನುಂಚಕು ಇದೊಂದು ಜಪಾನೀ ಮೂಲದ ಸಮರ ಕಲೆ. ಯುದ್ಧಗಳು ಇದರ ಮೂಲಕ ನಡೆಯುತ್ತಿದ್ದವು. ಒಂದು ಚೈನ್‌ನ ಎರಡೂ ಬದಿಗೆ ದಪ್ಪದ ಮರದ ಕೋಲು ಕಟ್ಟಿ ಮಾಡುವ ಕಸರತ್ತಿದು. ನುಂಚಕು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಅನೇಕ ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ದೈಹಿಕ ಸಮತೋಲನಕ್ಕೆ ಸಹಕಾರಿ. ಶಕ್ತಿ, ಸಾಮರ್ಥ್ಯ ಹೆಚ್ಚಾಗುತ್ತದೆ. ಫಿಟ್‌ನೆಸ್‌ಗೆ ಸಹಕಾರಿ, ಹಿಂಭಾಗದ ಕೊಬ್ಬು ಕರಗಿಸುತ್ತೆ. ಆನ್‌ಲೈನ್ ಮೂಲಕವೂ ನುಂಚಕು ಕಲಿಯಬಹುದು. ಇದಕ್ಕೆ ಬೇಕಾದ ಸಾಧನವೂ ಆನ್‌ಲೈನ್‌ ಮಾರ್ಕೆಟ್ ನಲ್ಲಿ ಸಿಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?