ಎಸ್ ನಾರಾಯಣ್ ಹೆಸರಲ್ಲಿ ನಕಲಿ ಖಾತೆ, ವಿವಾದಾತ್ಮಕ ಪೋಸ್ಟ್; ಪೊಲೀಸ್ ಆಯುಕ್ತರಿಗೆ ದೂರು

Published : Jul 30, 2025, 08:39 PM IST
S Narayan

ಸಾರಾಂಶ

ಇಂಥ ಕೆಲಸಗಳಿಂದ, ಸೋಷಿಯಲ್ ಮೀಡಿಯಾದಿಂದ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಇದು ಹೆಚ್ಚಾಗಿದೆ, ಕನ್ನಡಿಗರಿಗೆ ಅವಮಾನವಾಗುತ್ತಿದೆ. ಯಾರೇ ಆಗಲೀ, ಯಾವುದರಲ್ಲೇ ಆಗಲಿ, ಒಂದು ಚೌಕಟ್ಟನ್ನು ದಾಟಬಾರದು, ತೇಜೋವಧೆ ಮಾಡಬಾರದು.

ಕನ್ನಡದ ಹಿರಿಯ ನಟ-ನಿರ್ದೇಶಕ ಎಸ್ ನಾರಾಯಣ್ (S Narayan) ಅವರಿಂದ ನಗರ ಪೊಲೀಸ್ ಆಯುಕ್ತರಿಗೆ ದೂರು ಹೋಗಿದೆ. ಕಾರಣ, ಅವರ ಹೆಸರಲ್ಲಿ ಎಕ್ಸ್ (X) ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅದರಿಂದ ಹಲವು ಸ್ಟಾರ್ ನಟರಿಗೆ ಕೆಟ್ಟ ಮೆಸೇಜ್ ಮಾಡಲಾಗಿದೆ. ಈ ಬಗ್ಗೆ ನಿರ್ದೇಶಕ ಎಸ್ ನಾರಾಯಣ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಎಸ್ ನಾರಾಯಣ್ ಅವರು 'ನನ್ನ ಹೆಸರಲ್ಲಿ ನಕಲಿ ಅಕೌಂಟ್ ತೆಗೆದು ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ.. ಅಪ್ಪು, ಶಿವಣ್ಣ, ಸುದೀಪ್, ಯಶ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ದೂರು ಕೊಡಲು ಬಂದಿದ್ದೇನೆ. ನಾನು ನೋಡಿರಲಿಲ್ಲ, ನಂಗೆ ಇದು ಗೊತ್ತೇ ಇರಲಿಲ್ಲ. ನನ್ನ ಸ್ನೇಹಿತರು ಇದರ ಬಗ್ಗೆ ಗಮನಕ್ಕೆ ತಂದಿದ್ದಾರೆ. ಇದರ ಬಗ್ಗೆ ನನಗೆ ಐಡಿಯಾನೇ ಇಲ್ಲಾ. ಸುಮಾರು ಐದಾರು ತಿಂಗಳಿಂದ ಈ ರೀತಿ ಮಾಡಿದ್ದಾರೆ. ಇತ್ತೀಚಿನ ನಾಲ್ಕೈದು ದಿನಗಳಲ್ಲಿ ಈ ವಿಷಯ ನನಗೆ ಗೊತ್ತಾಗಿದೆ.

ನನ್ನ ಪ್ರಕಾರ, ಇಂಥ ಕೆಲಸಗಳಿಂದ, ಸೋಷಿಯಲ್ ಮೀಡಿಯಾದಿಂದ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಇದು ಹೆಚ್ಚಾಗಿದೆ, ಕನ್ನಡಿಗರಿಗೆ ಅವಮಾನವಾಗುತ್ತಿದೆ. ಯಾರೇ ಆಗಲೀ, ಯಾವುದರಲ್ಲೇ ಆಗಲಿ, ಒಂದು ಚೌಕಟ್ಟನ್ನು ದಾಟಬಾರದು, ತೇಜೋವಧೆ ಮಾಡಬಾರದು. ಚಿತ್ರರಂಗದಲ್ಲಿ ಎಲ್ಲರ ಜೊತೆ ನನಗೆ ಉತ್ತಮ ಸಂಬಂಧವಿದೆ.

'ಎಕ್ಕ' ಸಿನಿಮಾ ನೋಡಿ ನಾನು ರಾಘಣ್ಣಗೆ ಫೋನ್ ಮಾಡಿ ಮಾತನಾಡಿದ್ದೆ. ಈ ರೀತಿ ಚಿತ್ರರಂಗ ಬೇರೆ ಕಡೆ ಹೋಗುತ್ತಿರೋದು ಸರಿಯಲ್ಲ.

ಈ ಹಿಂದೆ ಫ್ಯಾನ್ಸ್ ವಾರ್ ಇತ್ತು, ಆದ್ರೆ ಲಿಮಿಟ್ ಮೀರಿ ಹೋಗುತ್ತಿರಲಿಲ್ಲ. ಇದು ಅಸಹ್ಯಕಾರಿ ಬೆಳವಣಿಗೆ, ನಾವು ತಲೆತಗ್ಗಿಸುವಂತೆ ಆಗುತ್ತಿದೆ.

ಪ್ರತಿಯೊಬ್ಬರೂ ಕೂಡ ನಾಗರೀಕರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಮಾನವರು ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ವಾಣಿಜ್ಯ ಮಂಡಳಿ ಈ ಬಗ್ಗೆ ಏನ್ ಮಾಡುತ್ತದೆ ಎಂಬುದನ್ನು ನೋಡಬೇಕು. ಉದ್ಯಮ ಇಂತಹ ಸಂದರ್ಭದಲ್ಲಿ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು. ಯಾವುದೇ ಕಲಾವಿದರ ಅಭಿಮಾನಿಗಳು ನನ್ನನ್ನು ಟಾರ್ಗೆಟ್ ಮಾಡಿಲ್ಲ. ನಗರ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿದ್ದೇನೆ. ಇಂಥದ್ದನೆಲ್ಲಾ ಯಾರೂ ಕೂಡ ಯಾರಿಗೂ ಮಾಡಬಾರದು' ಎಂದಿದ್ದಾರೆ.

ಬಹಳಷ್ಟು ಜನರಿಗೆ ಗೊತ್ತಿರುವಂತೆ, ಸದ್ಯ ಟ್ರೆಂಡಿಂಗ್‌ನಲ್ಲಿರೋ ಸುದ್ದಿ ಅಂದ್ರೆ ಅದು ನಟಿ ರಮ್ಯಾ (Ramya) ಹಾಗೂ ನಟ ದರ್ಶನ್ (Darshan Thoogudeepa) ಫ್ಯಾನ್ಸ್ ಗಲಾಟೆ. ನಟಿ ರಮ್ಯಾ ಅವರು 'ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿ, ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ 'ಭಾರತದ ಸಾಮಾನ್ಯ ಜನರಿಗೂ ನ್ಯಾಯ ಸಿಗುವ ಆಶಾಕಿರಣ ಮೂಡಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ' ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದರು. ಅದರಿಂದ ರೊಚ್ಚಿಗೆದ್ದ ನಟ ದರ್ಶನ್ ಫ್ಯಾನ್ಸ್, 'ಡಿ ಬಾಸ್ ಫ್ಯಾನ್ಸ್‌' ಹೆಸರಿನ ಕೆಲವು ಫೇಕ್ ಅಕೌಂಟ್‌ಗಳಿಂದ ನಟಿ ರಮ್ಯಾಗೆ ಬೈದು ಕೆಟ್ಟ ಅಂದರೆ ಅಶ್ಲೀಲ ಮೆಸೇಜ್ ಮಾಡಿದ್ದರು.

ಇದರಿಂದ ಸಿಟ್ಟಿಗೆದ್ದ ನಟಿ ರಮ್ಯಾ ಅವರು ಇದೀಗ ದರ್ಶನ್ ಫ್ಯಾನ್ಸ್ ವಿರುದ್ಧ ಸಮರ ಸಾರಿದ್ದಾರೆ. ಮೊದಲಿಗೆ ಮಹಿಳಾ ಆಯೋಗಕ್ಕೆ ದೂರು ನೀಡಿರುವ ನಟಿ ರಮ್ಯಾ, ಆ ಬಳಿಕ ಕಮೀಷನರ್‌ಗೆ ದೂರು ನೀಡಿದ್ದಾರೆ. 43 ದರ್ಶನ್ ಫ್ಯಾನ್ಸ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಟ ಶಿವರಾಜ್‌ಕುಮಾರ್ ಸೇರಿದಂತೆ, ದೊಡ್ಮನೆ ಕುಟುಂಬ, ನಟ ಪ್ರಥಮ್ ಹಾಗೂ ನಟಿ ಅನುಪಮಾ ಗೌಡ ಸೇರಿದಂತೆ ಹಲವರು ನಟಿ ರಮ್ಯಾ ಪರ ಬ್ಯಾಟ್ ಬೀಸಿದ್ದಾರೆ. ಆದರೆ, ದರ್ಶನ್ ಪತ್ನಿ ವಿಯಲಕ್ಷ್ಮೀ ಅವರು ನಟಿ ರಮ್ಯಾ ವಿರುದ್ಧ ಸಿಟ್ಟೊಗೆದ್ದಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದಂತೆ, ಕನ್ನಡದ ಖ್ಯಾತ ನಿರ್ಮಾಪಕರಾದ ಕೆ ಮಂಜು (K Manju) ಅವರು ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ ನೋಡಿ.. ಹೌದು, ಕೆ ಮಂಜು ಅವರು ದರ್ಶನ್ ಫ್ಯಾನ್ಸ್ ಪರ ಮಾತನಾಡಿಲ್ಲ. ಆದರೆ, ನಟಿ ರಮ್ಯಾ ಮೇಲೆ ಸಣ್ಣ ಆರೋಪ ಮಾಡಿದ್ದಾರೆ. ರಮ್ಯಾ ದರ್ಶನ್ ಫ್ಯಾನ್ಸ್ ಗಲಾಟೆ ಬಗ್ಗೆ ನಿರ್ಮಾಪಕ ಕೆ ಮಂಜು ಹೇಳಿಕೆ ಹೀಗಿದೆ.. 'ರಮ್ಯಾ ಅವ್ರು ಸ್ವಲ್ಪ ಯೋಚನೆ ಮಾಡಬೇಕಿತ್ತು. ಎಲ್ಲದಕ್ಕೂ ಮೊದಲು, ನಟ ದರ್ಶನ್ ಬಗ್ಗೆ ಅವ್ರು ಪೋಸ್ಟ್ ಮಾಡಿದು ತಪ್ಪು.. ರೇಣುಕಾಸ್ವಾಮಿ ಕೇಸ್ ಆದಾಗ ಎಲ್ಲರೂ ಮಾತಾಡಿದ್ದು ಆಗಿದೆ. ಈಗ ಈ ಕೇಸ್ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಸದ್ಯ ನ್ಯಾಯಾಲಯದಲ್ಲಿ ಇರುವ ಕೇಸ್ ಬಗ್ಗೆ ಈಗ ಮತ್ತೆ ಮಾತಾಡಬಾರದಿತ್ತು.

ರಮ್ಯಾ ಅವರು ಈಗ ಮೆಸೇಜ್ ಮಾಡಿದ್ದಕ್ಕೆ ಈಗ ಹೀಗೆಲ್ಲಾ ಆಗಿದೆ. ಆದರೆ, ರಮ್ಯಾ ಪೋಸ್ಟ್‌ಗೆ ದರ್ಶನ್ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡಿದ್ದು ಕೂಡ ತಪ್ಪು . ಅಭಿಮಾನಿಗಳ ಅತಿರೇಕದ ವರ್ತನೆ ಸರಿ ಅಲ್ಲ. ಯಾವ ಸ್ಟಾರ್ ಆದ್ರೂ ತಮ್ಮ ಅಭಿಮಾನಿಗಳಿಗೆ ಗಲಾಟೆ ಮಾಡಿ ಅಂತ ಹೇಳಲ್ಲ. ರಮ್ಯಾ ಹೇಳಿದ ತಕ್ಷಣ ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತಾ? ಹೀಗಂತ ಕನ್ನಡದ ನಿರ್ಮಾಪಕ ಕೆ. ಮಂಜು ಅವರು ರಮ್ಯಾ ಮಾಡಿದ್ದು ಹಾಗೂ ಫ್ಯಾನ್ಸ್ ಮಾಡಿದ್ದು ಎರಡೂ ತಪ್ಪು ಅಂತ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?