ಸಂಗೀತಾ ಭಟ್ ಜೀವನದಲ್ಲಿ ‘ಕಪಟನಾಟಕ ಪಾತ್ರಧಾರಿ’ ಆದ್ರಾ ಬಾಲು ನಾಗೇಂದ್ರ?

By Web DeskFirst Published Sep 27, 2019, 10:37 AM IST
Highlights

ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದ ಚಿತ್ರತಂಡ ‘ಕಪಟನಾಟಕ ಪಾತ್ರಧಾರಿ’. ಅದು ಚಿತ್ರದ ಟ್ರೇಲರ್‌ ಬಿಡುಗಡೆ ನೆಪದಲ್ಲಿ ಹಾಜರಾಯಿತು. ನಾಯಕ, ನಾಯಕಿಯ ಹೊರತಾಗಿ ನಡೆದ ಈ ಪತ್ರಿಕಾಗೋಷ್ಟಿಗೆ ನಿರ್ದೇಶಕ ಕ್ರಿಷ್‌ ಅವರೇ ಸಾರಥಿ. 

ಅತಿಥಿಗಳಾಗಿ ಬಂದಿದ್ದ ನಿರ್ದೇಶಕರಾದ ತರುಣ್‌ ಸುಧೀರ್‌, ಸಿಂಪಲ್‌ ಸುನಿ, ನಟಿ ಸೋನು ಗೌಡ ಚಿತ್ರದ ಟ್ರೇಲರ್‌ ಹಾಗೂ ವಿಶೇಷವಾಗಿ ರೂಪಿಸಿರುವ ಪೋಸ್ಟರ್‌ ಮೆಚ್ಚಿಕೊಂಡರು. ಕನ್ನಡ ಚಿತ್ರರಂಗದ ಮಟ್ಟಿಗೆ ಆಟೋ ಮತ್ತು ಆಟೋ ಚಾಲಕ ಬ್ರಾಂಡ್‌ ಅಂಬಾಸೀಡರ್‌ ಇದ್ದಂತೆ ಎಂಬುದನ್ನು ನಟ ಶಂಕರ್‌ನಾಗ್‌ ಅವರು ತುಂಬಾ ಹಿಂದೆಯೇ ತೋರಿಸಿದ್ದಾರೆ.

#MeToo ನಂತರ ಕಪಟ ನಾಟಕ ಸೂತ್ರಧಾರಿಯಾದ್ರಾ ಸಂಗೀತಾ ಭಟ್?

ಈ ಕಾರಣಕ್ಕೋ ಏನೋ ಮತ್ತೆ ಮತ್ತೆ ಆಟೋ ಸ್ಟೋರಿಗಳು ತೆರೆ ಮೇಲೆ ಮೂಡುತ್ತಲೇ ಇವೆ. ಅದೇ ಸಾಲಿಗೆ ಸೇರುವ ‘ಕಪಟನಾಟಕ ಪಾತ್ರಧಾರಿ’ ಚಿತ್ರ ಒಂದು ಮಧ್ಯಮ ವರ್ಗದ ಪ್ರೇಮ ಕತೆಯನ್ನು ಒಳಗೊಂಡಿದೆ. ಇಲ್ಲಿ ಆಟೋ ಚಾಲನಕನೇ ಹೀರೋ. ಹೆಸರು ಬಾಲುನಾಗೇಂದ್ರ. ಇವರನ್ನು ಪ್ರೀತಿಸುವ ಹುಡುಗಿ ಸಂಗೀತಾ ಭಟ್‌. ಈ ಇಬ್ಬರ ಮೂಲಕ ಆಟೋ ಪ್ರೇಮ್‌ ಕಹಾನಿಯನ್ನು ಹೇಳುವ ಪ್ರಯತ್ನ ಮಾಡಿರುವ ಕ್ರಿಷ್‌ ಅವರ ನಿರ್ದೇಶನದ ಸಾಹಸಕ್ಕೆ ಗರುಡ ಕ್ರಿಯೇಷನ್‌ ಮೂಲಕ ಒಂದಿಷ್ಟುಗೆಳೆಯರ ತಂಡ ಸೇರಿ ಹಣ ಹೂಡುವ ಮೂಲಕ ನಿರ್ಮಾಪಕರೆನಿಸಿಕೊಂಡಿದ್ದಾರೆ.

ಅಯ್ಯಯ್ಯೋ! ಮೀಟೂ ನಾಯಕಿ ಆದ್ರಾ 'ಕಪಟನಾಟಕ ಪಾತ್ರಧಾರಿ'?

ಹಾಗೆ ನೋಡಿದರೆ ಇದೊಂದು ಪಕ್ಕಾ ಥ್ರಿಲ್ಲರ್‌ ಜಾನರ್‌ ಸಿನಿಮಾ. ಸಸ್ಪೆನ್ಸ್‌, ಹಾರರ್‌ ಥ್ರಿಲ್‌ ಎಲ್ಲವೂ ಇದೆ. ತುಂಬಾ ಆಪ್ತವಾಗಿ ಸಾಗುವ ಪ್ರೇಮ ಕತೆಗೆ ಏನೆಲ್ಲ ಬೇಕು ಆ ಎಲ್ಲ ಅಂಶಗಳನ್ನೂ ಕತೆಗೆ ಅಳವಡಿಸಿಕೊಂಡು ಸಿನಿಮಾ ಮಾಡಲಾಗಿದೆ. ಒಬ್ಬ ಆಟೋ ಚಾಲಕನ ಜೀವನ ಪಯಣದಲ್ಲಿ ಎದುರಾಗುವ ಅನಿರೀಕ್ಷಿತ ಸನ್ನಿವೇಶಗಳು ಹೇಗೆಲ್ಲ ಆತನ ಜೀವನದಲ್ಲಿ ಪ್ರವೇಶಿಸುತ್ತವೆ. ಅದರಿಂದ ಮುಂದೆ ಏನಾಗುತ್ತದೆ ಎಂಬುದು ಚಿತ್ರದ ಕತೆ... ಇವಿಷ್ಟುಚಿತ್ರದ ಒಳಗಿನ ಅಂಶಗಳೆಂದು ಹೇಳಿಕೊಂಡಿದ್ದು ನಿರ್ದೇಶಕರು.

#MeToo ನಂತರ ಸಂಗೀತಾ ಭಟ್ ಮದ್ವೆ ಫೋಟೋ ರಿವೀಲ್ !

ಚಿತ್ರದ ಟ್ರೇಲರ್‌ ಜತೆಗೆ ಒಂದು ಲಿರಿಕಲ್‌ ವಿಡಿಯೋ ಹಾಡನ್ನೂ ಸಹ ಬಿಡುಗಡೆ ಮಾಡಲಾಯಿತು. ‘ನಾನು ಈ ಚಿತ್ರದ ಫೋಸ್ಟರ್‌ಗಳನ್ನು ನೋಡಿಯೇ ಫಿದಾ ಆಗಿದ್ದೆ. ಹೊಸ ರೀತಿಯಲ್ಲಿ ಮಾಡಿದ್ದಾರೆಂಬ ನಂಬಿಕೆ ಮತ್ತು ಭರವಸೆ ಇದೆ. ಆ ಕಾರಣಕ್ಕೆ ಈ ಚಿತ್ರದ ಟ್ರೇಲರ್‌ ಲಾಂಚ್‌ಗೆ ಬಂದೆ. ಅಲ್ಲದೆ ಸಿನಿಮಾ ಕೂಡ ಚೆನ್ನಾಗಿ ಮಾಡಿದ್ದಾರೆ. ಈಗಾಗಲೇ ನಾನು ಸಿನಿಮಾ ನೋಡಿದ್ದೇನೆ. ನಿರೂಪಣೆ ತುಂಬಾ ಮಜವಾಗಿದೆ. ಸಿನಿಮಾ ಎಲ್ಲರಿಗೂ ಇಷ್ಟವಾಗಲಿದೆ’ ಎಂದು ಚಿತ್ರತಂಡಕ್ಕೆ ಶುಭ ಕೋರಿದ್ದು ಸಿಂಪಲ್‌ ಸುನಿ. ಸಂಗೀತ ನಿರ್ದೇಶಕ ಆದಿಲ್‌ ನದಾಫ್‌ ಸಂಗೀತ ನೀಡಿದ್ದು, ನಾಲ್ಕು ಹಾಡುಗಳು ಈ ಚಿತ್ರದಲ್ಲಿವೆ.

click me!