
ಆರ್. ಕೇಶವಮೂರ್ತಿ
1. ಗೋಕಾಕ್ ಚಳವಳಿ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಕೂಗು. ಡಾ ರಾಜ್‌ಕುಮಾರ್ ಆಗಮನದ ನಂತರ ಕನ್ನಡಿಗರ ಜನಾಂದೋಲನದ ಕಾವು ಹೆಚ್ಚಾಯಿತು. ಅಲ್ಲದೆ ಈ ಹೋರಾಟ ಚಿತ್ರರಂಗದ ಇತಿಹಾಸದ ಭಾಗವಾಗಿ ಉಳಿದಿದೆ.
ಎರಡು ವರ್ಷದ ಬಳಿಕ ಎರಡು ಶೇಡ್‌ನಲ್ಲಿ ಶಾನ್ವಿ!
2. ಪ್ರತಿ ವರ್ಷ ನ.1 ಹಾಗೂ ಡಾ ರಾಜ್‌ಕುಮಾರ್ ಜನ್ಮದಿನ ಬಂದರೆ ಗೋಕಾಕ್ ಚಳವಳಿ ನೆನಪಾಗುತ್ತದೆ. ಇದೊಂದು ಐತಿಹಾಸಿಕ ಹೋರಾಟ. ಡಾ ರಾಜ್‌ಕುಮಾರ್ ಅವರಂತೆಯೇ ಸಾಹಿತಿಗಳು, ರೈತರು, ಮಾಧ್ಯಮಗಳು... ಹೀಗೆ ಎಲ್ಲರು ಭಾಗಿಯಾಗಿದ್ದಾರೆ. ಆದರೆ, ಗೋಕಾಕ್ ಚಳವಳಿಯನ್ನು ತೆರೆ ಮೇಲೆ ಯಾರೂ ನೋಡಿಲ್ಲ. ಹಾಗೆ ನೋಡದೆ ಉಳಿದು ಹೋಗಿರುವ ಆ ದಿನಗಳ ಕನ್ನಡಿಗರ ಹೋರಾಟವನ್ನು ಈ ಚಿತ್ರದ ಮೂಲಕ ತೆರೆ ಮೇಲೆ ತರಲಾಗುತ್ತಿದೆ.
3. ಈ ಕಾರಣಕ್ಕೆ ‘ಗೀತಾ’, ಪ್ರತಿಯೊಬ್ಬ ಕನ್ನಡಿಗನೂ ನೋಡಬೇಕಾದ ಚಿತ್ರ. ಗೋಕಾಕ್ ಚಳವಳಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಇದುವರೆಗೂ ಯಾವ ಕನ್ನಡ ಚಿತ್ರವೂ ಬಂದಿಲ್ಲ. ಆ ದಿನಗಳ ಹೋರಾಟದ ವರ್ಜಿನಲ್ ದೃಶ್ಯಗಳನ್ನು ಬಳಸಿಕೊಂಡಿರುವುದು ಈ ಚಿತ್ರದ ಮತ್ತೊಂದು ಹೈಲೈಟ್.
ಕನ್ನಡಿಗರನ್ನು ಬಡಿದೆಬ್ಬಿಸಿದ ಸ್ವಾಭಿಮಾನಿ ಗಣೇಶ್!
4. ಚಿತ್ರೋದ್ಯಮದ ಆಚೆಗೂ ನಡೆದರೂ ಅದು ಚಿತ್ರರಂಗದ ಭಾಗವಾಗಿರುವ ಈ ಗೋಕಾಕ್ ಚಳವಳಿ ಇಂದಿಗೂ ಹತ್ತಾರು ಕತೆಗಳು ಹೇಳುತ್ತವೆ. ಸಿಟ್ಟು, ಅಕ್ರೋಶ, ಹೋರಾಟದ ಹೊರತಾಗಿಯೂ ಗುರುತಿಸಬಹುದಾದ ಹಲವು ತಿರುವುಗಳು ಈ ಹೋರಾಟದಲ್ಲಿ ಕಾಣಲು ಸಾಧ್ಯವೇ ಎಂದುಕೊಂಡಾಗ ‘ಗೀತಾ’ ಹುಟ್ಟಿಗೆ ಕಾರಣವಾಯಿತು.
5. 80ರ ದಶಕದ ಹಿನ್ನೆಲೆಯಲ್ಲಿ ಎರಡು ಜನರೇಷನ್ ಕತೆಯನ್ನು ಹೇಳಲಾಗಿದೆ. ಅಪ್ಪನ ಪ್ರೇಮ ಕತೆಯಲ್ಲಿ ತೆರೆದುಕೊಳ್ಳುವ ಮಗನ ಪ್ರೀತಿಯ ಕತೆ. ಇಲ್ಲಿ ಅಪ್ಪ ಯಾರು, ಮಗ ಯಾರು? ಅಪ್ಪನ ಪ್ರೇಮ ಪಯಣ ಗೋಕಾಕ್ ಚಳವಳಿಯಲ್ಲಿ ನಡೆದಿದೆ. ಅದು ಹೇಗಿರುತ್ತದೆ. ಅವತ್ತಿನ ಪ್ರೇಮ, ಇವತ್ತಿನ ಪ್ರೀತಿ ಮತ್ತು ಸ್ನೇಹ ಎರಡೂ ಸೇರಿಕೊಂಡಿದೆ.
ಗೀತಾ ಚಿತ್ರಕ್ಕೆ U/A ಸರ್ಟಿಫಿಕೆಟ್!
6. ಆಗ ಗೋಕಾಕ್ ಚಳವಳಿ ಯಾವ ಕಾರಣಕ್ಕೆ ನಡೆಯಿತೋ ಅದೇ ಕಾರಣಗಳಿಗೆ ಈಗಲೂ ಕನ್ನಡಿಗರೂ ಧ್ವನಿ ಎತ್ತುತ್ತಿದ್ದಾರೆ. ಉದ್ಯೋಗ, ಕನ್ನಡದಲ್ಲಿ ಪರೀಕ್ಷೆ, ಕನ್ನಡ ಭಾಷೆ ಮೇಲೆ ಬೇರೆ ಭಾಷೆಯ ಸವಾರಿ... ಹೀಗೆ ಹಲವು ಸದ್ದು ಮಾಡುತ್ತಿರುವ ಹೊತ್ತಿನಲ್ಲಿ ಗೋಕಾಕ್ ಚಳವಳಿಯನ್ನು ನೆನಪಿಸುವ ‘ಗೀತಾ’, ಈಗಿನ ಕನ್ನಡಿಗರಿಗೆ ವೇದಿಕೆ ಆಗಲಿದೆಯಂತೆ. ಇದುದೊಂದು ಗೋಲ್ಡನ್ ಡೇಸ್ ಕತೆ. ಅದೇ ಈ ಚಿತ್ರದ ಶಕ್ತಿ.
ಸೆ.27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.