
ಬಿಡುಗಡೆಯ ಖುಷಿಯ ಜತೆಗೆ ಚಿತ್ರದ ಪೋಸ್ಟರ್ ಬಿಡುಗಡೆಯನ್ನು ಚಿತ್ರತಂಡ ಆಯೋಜಿಸಿತ್ತು. ‘ಬಿ ಪಾಸಿಟಿವ್’ ಎನ್ನುವ ಉಪ ಶೀರ್ಷಿಕೆಯನ್ನು ಒಳಗೊಂಡಿರುವ ಈ ಚಿತ್ರದ ನಿರ್ದೇಶಕರು ಅಭಿಷೇಕ್ ಜೈನ್. ಅರ್ವ ಹಾಗೂ ಅನುಷಾ ಚಿತ್ರದ ಜೋಡಿ. ನಿರ್ದೇಶನದ ಜತೆಗೆ ಅಭಿಷೇಕ್ ಜೈನ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
ತಂತ್ರಜ್ಞಾನ ಬೆಳೆದಂತೆ ಚಿತ್ರರಂಗದಲ್ಲಿ ಅದರ ಪ್ರಯೋಗಗಳು ಕೂಡ ವಿಭಿನ್ನವಾಗಿ ನಡೆಯುತ್ತಿದೆ. ಅದರ ಭಾಗವಾಗಿಯೇ ‘ಡಿಂಗ’ ರೂಪಗೊಂಡಿದೆ. ‘ಐವತ್ತೈದು ಲಕ್ಷ ವೆಚ್ಚದಲ್ಲಿ ಮಾಡಿರುವ ಸಿನಿಮಾ ಇದು. ಇನ್ನೇನು ಸಿನಿಮಾ ಬಿಡುಗಡೆ ಆಗಬೇಕಿದೆ. ಇಂಥದ್ದೊಂದು ಪ್ರಯತ್ನ ಭಾರತದಲ್ಲೇ ಮೊದಲು.
ಕನ್ನಡಿಗರು ಸ್ವಾಗತಿಸಿದ ರೀತಿಗೆ ಪೈಲ್ವಾನ್ ಬೆಡಗಿ ಫುಲ್ ಫಿದಾ!
ವಿದೇಶದಿಂದ ಉಪಕರಣಗಳನ್ನು ತರಿಸಿಕೊಂಡು ಶೂಟ್ ಮಾಡಲಾಗಿದೆ. ಒಬ್ಬ ಕ್ಯಾನ್ಸರ್ ರೋಗಿ ತಾನು ಸಾಯುವ ಮುನ್ನ ತನ್ನಷ್ಟೆಪ್ರೀತಿಯಿಂದ ನೋಡಿಕೊಳ್ಳುವ ವ್ಯಕ್ತಿ ತಾನು ಸಾಕಿರುವ ನಾಯಿಯನ್ನು ಕೊಡಲು ಮುಂದಾಗುತ್ತಾನೆ. ಇದು ಆತನ ಕೊನೆಯ ಆಸೆ ಕೂಡ. ತನ್ನ ಪ್ರೀತಿಯ ನಾಯಿನನ್ನು ನೋಡಿಕೊಳ್ಳುವ ವ್ಯಕ್ತಿಯ ಹುಡುಕಾಟದಲ್ಲೇ ಕತೆ ತೆರೆದುಕೊಳ್ಳುತ್ತದೆ. ತುಂಬಾ ಆಪ್ತವಾಗಿ ಸಾಗುವ ಸಿನಿಮಾ ಇದು’ ಎಂಬುದು ನಿರ್ದೇಶಕರ ವಿವರಣೆ.
ಎರಡು ವರ್ಷದ ಬಳಿಕ ಎರಡು ಶೇಡ್‌ನಲ್ಲಿ ಶಾನ್ವಿ!
ಚಿತ್ರದ ಇಬ್ಬರು ನಾಯಕರ ಪೈಕಿ ಅರ್ವ ಅವರಿಗೆ ಇಲ್ಲಿ ಒಳ್ಳೆಯ ಪಾತ್ರವಿದೆಯಂತೆ. ಪಾತ್ರಕ್ಕೆ ತಕ್ಕಂತೆ ಸಿಗರೇಟು ಸೇದುವ, ಪಬ್‌ಗೆ ಹೋಗುವ ಹವ್ಯಾಸ, ಆಗತಾನೆ ಪ್ರೀತಿಗೆ ಬಿದ್ದು ಭಾವನೆಗಳನ್ನು ನೋಡಿರುವ, ಏಳು ಬೀಳುಗಳನ್ನು ಕಂಡಿರುವ. ಮದ್ಯ ವಯಸ್ಸಿನ ಅನುಭ ಮಳೆ ಹೀಗೆ ಎರಡು ಶೇಡ್‌ಗಳಲ್ಲಿ ಅರ್ವ ಕಾಣಿಸಿಕೊಂಡಿದ್ದಾರಂತೆ.
ಬಡತನದಿಂದ ಬಂದ ಸರಿಗಮಪ ಹುಡುಗ ಕರುನಾಡಿನ ಮನೆಮಾತಾದ ಕಥೆ!
ನಾಯಕಿಗೂ ಇದು ಹೊಸ ರೀತಿಯ ಪಾತ್ರವಂತೆ. ಉಳಿದಂತೆ ರಾಘುರಮಣಕೊಪ್ಪ, ನಾಗೇಂದ್ರಷಾ, ವಿಜಯ್‌ಈಶ್ವರ್ ನಟನೆ ಜತೆಗೆ ಹಾಡು ಬರೆದಿದ್ದಾರೆ. ಡಾ ವಿ ನಾಗೇಂದ್ರಪ್ರಸಾದ್ ಬರೆದಿರುವ ಶೀರ್ಷಿಕೆ ಹಾಡಿಗೆ ಅರ್ಜುನ್ ಜನ್ಯಾ, ನವೀನ್ ಸಜ್ಜು, ಸಂಚಿತ್ ಹೆಗ್ಡೆ ಧ್ವನಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.