
Ranveer Singh Yash friendship remark-Rocking Star Yash Aap Ki Adalat highlights-Yash vs Ranveer Singh news: ರಣವೀರ್ ಸಿಂಗ್ ಹೇಳಿದ್ದಾರೆ ಎಂಬ ಮಾತಿಗೆ ಯಶ್ ಕೊಟ್ಟ ಉತ್ತರ ಇದು!
ಇತ್ತೀಚೆಗೆ ರಾಷ್ಟ್ರಮಟ್ಟದ ಖ್ಯಾತ ಕಾರ್ಯಕ್ರಮ 'ಆಪ್ ಕಿ ಅದಾಲತ್'ನಲ್ಲಿ ಪತ್ರಕರ್ತ ರಜತ್ ಶರ್ಮಾ ಎದುರು ಕುಳಿತಿದ್ದರು ಕನ್ನಡದ ಪ್ಯಾನ್ ಇಂಡಿಯಾ ನಟ ಯಶ್. ಈ ವೇಳೆ ರಜತ್ ಶರ್ಮಾ ಅವರು 'ನಟ ರಣವೀರ್ ಸಿಂಗ್ ಅವರು ಯಶ್ ಜೊತೆ ಸ್ನೇಹ ಮಾಡ್ಬೇಡಿ, ಅವ್ರು ನಿಮ್ ಸಿನಿಮಾ ಬಿಡುಗಡೆ ವೇಳೆ ಕ್ಲಾಶ್ ಮಾಡ್ತಾರೆ ಎಂದು ಹೇಳಿದ್ದಾರೆ' ಎಂದು ಯಶ್‌ಗೆ ಹೇಳಿದ್ದಾರೆ. ಅದಕ್ಕೆ ಯಶ್ ಕೊಟ್ಟ ಉತ್ತರವೇನು? ಇಲ್ಲಿದೆ ನೋಡಿ..
ಹೌದು, ಯಶ್ ಅವರು ಭಾಗಿಯಾಗಿದ್ದ ಆಪ್ ಕಿ ಅದಾಲತ್ ಶೋ ಅದೆಷ್ಟು ಫೇಮಸ್ ಹಾಗೂ ಅದೆಷ್ಟು ಹಾಟ್ ಸೀಟ್ ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ, ಯಶ್ ಮಾತ್ರ ತುಂಬಾ ಕೂಲ್ ಅಗಿದ್ರು ಅಲ್ಲಿ, ತುಂಬಾ ಮೆಚ್ಯೂರ್ಡ್ ಆಗಿದ್ರು ಅನ್ನೋದು ಬಹಳಷ್ಟು ನೆಟ್ಟಿಗರ ಅನಿಸಿಕೆ. ಅದಿರಲಿ, ಆ ಶೋನಲ್ಲಿ ರಜತ್ ಶರ್ಮಾ ಅವರು ಯಶ್ ಅವರಿಗೆ 'ನಟ ರಣವೀರ್ ಸಿಂಗ್ ಅವರು ಯಶ್ ಜೊತೆ ಸ್ನೇಹ ಮಾಡ್ಬೇಡಿ, ಅವ್ರು ನಿಮ್ ಸಿನಿಮಾ ಬಿಡುಗಡೆ ವೇಳೆ ಕ್ಲಾಶ್ ಮಾಡ್ತಾರೆ ಎಂದು ಹೇಳಿದ್ದಾರೆ' ಎಂದು ಹೇಳಿದ ತಕ್ಷಣ ಯಶ್, 'ಹೌದಾ, ಹಾಗೆ ಹೇಳಿದ್ರಾ? ನಾನು ಎಲ್ಲಿಯೂ ಕೇಳಿಲ್ಲವಲ್ಲ' ಎಂದಿದ್ದಾರೆ. ಬಳಿಕ, ಪ್ರಶ್ನೆಗೆ ಉತ್ತರವನ್ನು ಹೇಳಲೇಬೇಕಲ್ಲಾ ಎನ್ನುವಂತೆ ಈ ಮುಂದಿನಂತೆ ಉತ್ತರಿಸಿದ್ದಾರೆ.
ಯಶ್ ಅವರು 'ಸರ್, ನಾನು ನನ್ನ ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕವನ್ನು 8 ತಿಂಗಳು ಮೊದಲೇ ಹೇಳಿದ್ದೆ. (ಧುರಂಧರ್ 2 ಸಿನಿಮಾ ಬಿಡುಗಡೆ 19 ಮಾರ್ಚ್ 2026 ರಂದು ಆಗಿದೆ. ಅಂದೇ ಯಶ್ ನಟನೆಯ ಟಾಕ್ಸಿಕ್ ಬಿಡುಗಡೆ ಡೇಟ್ ಕೂಡ ಈ ಮೊದಲು ಒಮ್ಮೆ ಅನೌನ್ಸ್ ಆಗಿತ್ತು). ನೀವು ಹೇಳಿದಂತೆ ಯಾವುದೇ ಸಿನಿಮಾದ ಡೇಟ್ ಜೊತೆ ನಾನು ಸೀದಾ ಹೋಗಿ ಕ್ಲಾಶ್ ಮಾಡಿದ್ದು ಯಾವುದೂ ಇಲ್ಲ. ನನ್ನ ಸಿನಿಮಾ ಡೇಟ್ ಅನೌನ್ಸ್ ಆದಮೇಲೆ ಯಾರದೇ ಸಿನಿಮಾ ಬಂದರೂ ಅದು ನನ್ನ ಸಿನಿಮಾದ ಜೊತೆಗೆ ಕ್ಲಾಶ್ ಅಗುತ್ತೆ ಅಷ್ಟೇ.. ಅಲ್ಲಿ ಯಶ್ ಅವರು, ನಟ ರಣವೀರ್ ಸಿಂಗ್ ಅವರು ಹೆಸರನ್ನೂ ಹೇಳದೇ, ಯಾರೊಬ್ಬರ ಹೆಸರು ಕೂಡ ಹೇಳದೇ ನನ್ನ ಸಿನಿಮಾ ಬಿಡುಗಡೆ ಘೋಷಣೆ ಬಳಿಕ ಯಾರೇ ಘೋಷಣೆಯನ್ನು ಮಾಡಿದರೂ ಆಗ ಆಗುವ ಕ್ಲಾರ್ಶ ಅವರಿಂದಲೇ ಆಗಿರುತ್ತದೆ ಎಂಬುದನ್ನು ತುಂಬಾ ಸೂಚ್ಯವಾಗಿ, ಸೂಕ್ಷ್ಮವಾಗಿ ಹೇಳಿದ್ದಾರೆ ಎಂದು ಅನೇಕ ನೆಟ್ಟಿಗರು ಯಶ್ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
ಇವೆಲ್ಲಕ್ಕಿಂತ ಹೆಚ್ಚಾಗಿ ಯಶ್ ಕೊಟ್ಟ ಇನ್ನೂ ಒಂದು ಕ್ಲಾರಿಟಿ ಹಲವು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 'ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಜೊತೆ ನಿಮ್ಮ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗುತ್ತಿದೆ ಅಂದಾಗ ಹಲವರು ಭಯಭೀತರಾಗಿದ್ದರು' ಎಂಬ ಮಾತಿಗೆ ಯಶ್ ಮಾರ್ಮಿಕ ಉತ್ತರ ನೀಡಿದ್ದಾರೆ. 'ಹಲವರು ಭಯಭೀತರಾಗಿದ್ದರು' ಎಂಬ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಂಡ ಯಶ್ ಅವರು 'ಹೌದು, ಧುರಂಧರ್ ಎದುರು ಟಾಕ್ಸಿಕ್ ಸಿನಿಮಾ ಬಿಡುಗಡೆ ಮಾಡಲು ಯಶ್ ಅವರು ಹೆದರಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಎಂದು ಹಲವರು ನನಗೂ ಹೇಳಿದ್ದಾರೆ. ಆದರೆ ನನಗೆ ನನ್ನ ಜೀವನದಲ್ಲಿ ಭಯ ಎಂದರೇನು ಎಂಬುದೇ ಗೊತ್ತಿಲ್ಲ ಎಂದು ಹೇಳಿ ಅಲ್ಲಿದ್ದವರೆಲ್ಲರ ಚಪ್ಪಾಳೆ ಗಿಟ್ಟಿಸಿದ್ದಾರೆ.
ಆದರೆ, ಇಲ್ಲೊಂದು ಟ್ವಿಸ್ಟ್ ಇದೆ- ರಜತ್ ಶರ್ಮಾ ಅವರು 'ಆಪ್ ಕಿ ಅದಾಲತ್' ಶೋದಲ್ಲಿ ಹೇಳಿದಂತೆ ನಟ ರಣವೀರ್ ಸಿಂಗ್ ಅವರು 'ಯಶ್ ಜೊತೆ ಸ್ನೇಹ ಮಾಡ್ಬೇಡಿ, ಅವ್ರು ನಿಮ್ ಸಿನಿಮಾ ಬಿಡುಗಡೆ ವೇಳೆ ಕ್ಲಾಶ್ ಮಾಡ್ತಾರೆ' ಎಂಬ ಮಾತನ್ನು ಎಂದೂ ಹೇಳಿಯೇ ಇಲ್ಲ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡುವ ಅಗತ್ಯವಿದೆ ಎಂಬುದು ಹಲವರ ವಾದ. ಅದೇನೇ ಇದ್ದರೂ ಕೇಳಿರುವ ಪ್ರಶ್ನೆಗೆ ಯಶ್ ಕೊಟ್ಟಿರುವ ಉತ್ತರ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. 'ಯಶ್ ನಿಜವಾಗಿಯೂ ಜಂಟಲ್‌ಮ್ಯಾನ್. ಯಾವುದೇ ಪ್ರಶ್ನೆಗಳಿಗೆ ಕೋಪ, ಅಸಹನೆ ಹಾಗೂ ಅಹಂಕಾರ ಎಲ್ಲವನ್ನೂ ಬದಿಗಿಟ್ಟು 'ನಾವೆಲ್ಲರೂ ಒಂದೇ, ವಸುದೈವ ಕುಟುಂಬಕಂ ಎಂಬಂತೆ ಮಾತನ್ನಾಡುತ್ತಾರೆ ಎಂದು ಬಹಳಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.