
'ರಾಮಾಯಣ: ಭಾಗ 1' ಈಗಾಗಲೇ ಭರ್ಜರಿ ಯಶಸ್ಸು ಕಂಡಿದ್ದು, ಇದೀಗ ಎಲ್ಲರ ಚಿತ್ತ 'ರಾಮಾಯಣ ಭಾಗ 2'ರ ಮೇಲಿದೆ. ಭಾಗ 2ರಲ್ಲಿ ರಾವಣ (ಯಶ್) ಮತ್ತು ವಿಭೀಷಣನ ನಡುವಿನ ಸನ್ನಿವೇಶಗಳು ಬಹಳ ಮುಖ್ಯವಾಗಿವೆ. ಏಕೆಂದರೆ ವಿಭೀಷಣನ ಪಾತ್ರದಲ್ಲಿ ಬಹುಭಾಷಾ ನಟ ಹರೀಶ್ ಉತ್ತಮನ್ ನಟಿಸಿದ್ದಾರೆ. ಈ ಹಿಂದೆ 10 ವರ್ಷದ ಹಿಂದೆ ಯಶ್ ಜತೆ ನಟಿಸಬೇಕಿದ್ದ ಈ ನಟ ಆಡಿಷನ್ ಇಲ್ದೆ ರಾಮಾಯಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದು ರಾಕಿ ಭಾಯ್ ಶಿಫಾರಸ್ಸಿನಿಂದ ಎನ್ನುವುದು ಈಗ ಬೆಳಕಿಗೆ ಬಂದಿದೆ. ಈ ಕೂರಿತು ಕಂಪ್ಲಿಟ್ ಡಿಟೇಲ್ಸ್ ಇಲ್ಲಿದೆ.
ಹರೀಶ್ ಉತ್ತಮನ್ ಕನ್ನಡ ಪ್ರೇಕ್ಷಕರಿಗೆ ಹೊಸಬರಲ್ಲ. 2015ರಲ್ಲಿ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ರನ್ನ'ದಲ್ಲಿ ಪ್ರಮುಖ ವಿಲನ್ ಆಗಿ ನಟಿಸಿ ಕನ್ನಡಿಗರ ಮನಗೆದ್ದಿದ್ದರು. ಅದೇ ಸಮಯದಲ್ಲಿ (2015-16ರಲ್ಲಿ) ಯಶ್ ಅವರ ಸಿನಿಮಾವೊಂದರಲ್ಲೂ ನಟಿಸಲು ಹರೀಶ್ ಅವರಿಗೆ ಆಫರ್ ಬಂದಿತ್ತು. ಆದರೆ ಕಾರಣಾಂತರಗಳಿಂದ ಆ ಅವಕಾಶ ಕೈತಪ್ಪಿತ್ತು. ಯಶ್ ಜೊತೆ ತೆರೆ ಹಂಚಿಕೊಳ್ಳುವ ಆಸೆ ಅಂದು ಈಡೇರಿರಲಿಲ್ಲ. ಸುಮಾರು 10 ವರ್ಷಗಳ ನಂತರ, ಭಾರತದ ಅತಿದೊಡ್ಡ ಪ್ಯಾನ್-ವರ್ಲ್ಡ್ ಸಿನಿಮಾ 'ರಾಮಾಯಣ'ಕ್ಕೆ ಯಶ್ ರಾವಣನಾದರು ಹಾಗೂ ಸಹ-ನಿರ್ಮಾಪಕರಾದರು. ವಿಭೀಷಣನ ಪಾತ್ರಕ್ಕೆ ಸೂಕ್ತ ನಟನ ಹುಡುಕಾಟ ನಡೆದಾಗ, ಸ್ವತಃ ಯಶ್ ಅವರೇ ಹರೀಶ್ ಉತ್ತಮನ್ ಅವರ ಹೆಸರನ್ನು ನಿರ್ದೇಶಕ ನಿತೇಶ್ ತಿವಾರಿ ಅವರಿಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
ಯಶ್ ಅವರ ಶಿಫಾರಸಿನ ಮೇರೆಗೆ ಯಾವುದೇ ಆಡಿಷನ್ ಇಲ್ಲದೆ ಹರೀಶ್ ಉತ್ತಮನ್ ಈ ಬೃಹತ್ ಪ್ರಾಜೆಕ್ಟ್‌ಗೆ ಆಯ್ಕೆಯಾದರು. ನನ್ನ ಮೊದಲ ದೃಶ್ಯದ ಶೂಟಿಂಗ್ ದಿನವೂ ಯಶ್ ಅವರ ಬೆಂಬಲ ನನಗೆ ದೊಡ್ಡ ಶಕ್ತಿ ನೀಡಿತು ಎಂದು ಸ್ವತಃ ಹರೀಶ್ ಅವರೇ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅಂದು ವಿಲನ್ ಪಾತ್ರದ ಮೂಲಕ ಯಶ್ ಜೊತೆ ನಟಿಸುವ ಅವಕಾಶ ಮಿಸ್ ಮಾಡಿಕೊಂಡಿದ್ದ ಹರೀಶ್, ಇಂದು ಸ್ವತಃ ರಾವಣನ ತಮ್ಮ 'ವಿಭೀಷಣ'ನಾಗಿ ಯಶ್ ಜೊತೆ ತೆರೆ ಹಂಚಿಕೊಂಡಿದ್ದಾರೆ. 'ರಾಮಾಯಣ: ಭಾಗ 2'ರಲ್ಲಿ ಇವರಿಬ್ಬರ ನಡುವಿನ ಭಾವನಾತ್ಮಕ ಮತ್ತು ಸಂಘರ್ಷದ ದೃಶ್ಯಗಳು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲಿವೆ.
ಹರೀಶ್ ಉತ್ತಮನ್ ಅವರು ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ('ರನ್ನ') ಸಿನಿಮಾಗಳಲ್ಲಿ ಹೆಚ್ಚಾಗಿ ಕ್ರೂರ ಖಳನಾಯಕನ ಪಾತ್ರಗಳಲ್ಲೇ ಗುರುತಿಸಿಕೊಂಡವರು. ಆದರೆ 'ರಾಮಾಯಣ'ದಲ್ಲಿ ಅದಕ್ಕೆ ತದ್ವಿರುದ್ಧವಾದ, ಅಂದರೆ ಸತ್ಯ ಮತ್ತು ಧರ್ಮದ ಪರವಾಗಿ ನಿಲ್ಲುವ ಸೌಮ್ಯ ಸ್ವಭಾವದ ವಿಭೀಷಣನ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಅವರ ವೃತ್ತಿಜೀವನದ ದೊಡ್ಡ ಬದಲಾವಣೆಯಾಗಿದೆ. ಯಶ್ ಅವರ 'ರಾವಣ' ಅವತಾರದ ಬಗ್ಗೆ ಹರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಯಶ್ ಅವರ ನಟನೆಯನ್ನು ಕಣ್ಣಾರೆ ಕಂಡ ಹರೀಶ್ ಉತ್ತಮನ್, "ಯಶ್ ಅವರು ರಾವಣನ ವೇಷ ಧರಿಸಿ ಕ್ಯಾಮೆರಾ ಮುಂದೆ ನಿಂತರೆ, ನಿಜವಾಗಿಯೂ ಒಬ್ಬ ಮಹಾಶಕ್ತಿಶಾಲಿ ರಾವಣನೇ ಎದುರು ನಿಂತಂತೆ ಭಾಸವಾಗುತ್ತದೆ" ಎಂದು ಯಶ್ ಅವರ ಡೆಡಿಕೇಶನ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಅನ್ನು ಕೊಂಡಾಡಿದ್ದಾರೆ.
'ರಾಮಾಯಣ: ಭಾಗ 1'ರಲ್ಲಿ ವಿಭೀಷಣನ ಪಾತ್ರದ ಪರಿಚಯವಷ್ಟೇ ಇತ್ತು. ಆದರೆ ಮುಂದೆ ಬರಲಿರುವ 'ರಾಮಾಯಣ: ಭಾಗ 2'ರಲ್ಲಿ ಅಶೋಕವನ, ಹನುಮಂತನ ಲಂಕಾ ದಹನ, ರಾಮ-ರಾವಣ ಯುದ್ಧದ ತಂತ್ರಗಾರಿಕೆ ಹಾಗೂ ಧರ್ಮ-ಅಧರ್ಮದ ವಿಚಾರವಾಗಿ ಅಣ್ಣ ರಾವಣ (ಯಶ್) ಮತ್ತು ತಮ್ಮ ವಿಭೀಷಣನ (ಹರೀಶ್) ನಡುವೆ ನಡೆಯುವ ತೀವ್ರ ವಾಗ್ವಾದ ಮತ್ತು ಭಾವನಾತ್ಮಕ ದೃಶ್ಯಗಳು ಚಿತ್ರದ ಪ್ರಮುಖ ಹೈಲೈಟ್ ಆಗಿರಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.