
ಬೆಂಗಳೂರು (ಸೆ.4): ಪ್ರಸ್ತುತ ದೇಶಾದ್ಯಂತ ಬಾಕ್ಸ್ ಆಫೀಸ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ 'ಹನುಮಾನ್ ಅಂಶ್' (Hanuman Ansh) ಸಿನಿಮಾದ್ದೇ ಹವಾ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಎಲ್ಲರ ಗಮನ ಸೆಳೆದಿದೆ. ಸಿನಿಮಾ ನೋಡಲು ಬಂದ ಮುಸ್ಲಿಂ ವೃದ್ಧರೊಬ್ಬರು ನಡೆದುಕೊಂಡ ರೀತಿ ಈಗ ನೆಟ್ಟಿಗರ ಮನಗೆದ್ದಿದೆ.
ನೀಮ್ ಕರೋಲಿ ಬಾಬಾ ಅವರ ದಿವ್ಯ ಜೀವನ ಹಾಗೂ ಮಹಿಮೆಯನ್ನು ಆಧರಿಸಿ ನಿರ್ಮಾಣವಾಗಿರುವ 'ಹನುಮಾನ್ ಅಂಶ್' ಸಿನಿಮಾ ನೋಡಲು ಮುಸ್ಲಿಂ ವೃದ್ಧರೊಬ್ಬರು ಥಿಯೇಟರ್‌ಗೆ ಬಂದಿದ್ದರು. ಬಿಳಿ ಬಣ್ಣದ ಕುರ್ತಾ-ಪೈಜಾಮಾ ಹಾಗೂ ಸಾಂಪ್ರದಾಯಿಕ ಮುಸ್ಲಿಂ ಟೋಪಿ ಧರಿಸಿದ್ದ ಈ ವೃದ್ಧರು, ಸಿನಿಮಾ ಪ್ರಸಾರವಾಗುತ್ತಿದ್ದಾಗ ಗೌರವಪೂರ್ವಕವಾಗಿ ತಮ್ಮ ಸಾಕ್ಸ್ ಹಾಗೂ ಚಪ್ಪಲಿಯನ್ನು ಬಿಚ್ಚಿ ಪಕ್ಕಕ್ಕಿಟ್ಟು ಸಿನಿಮಾ ವೀಕ್ಷಿಸಿದ್ದಾರೆ. ನೀಮ್ ಕರೋಲಿ ಬಾಬಾ ಅವರ ಮೇಲಿನ ಭಕ್ತಿ ಮತ್ತು ಗೌರವದಿಂದ ಮುಸ್ಲಿಂ ವೃದ್ಧರು ತೋರಿದ ಈ ಶ್ರದ್ಧೆಯ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಯಾವುದೇ ರಾಜಕೀಯವಿಲ್ಲದ ನೈಜ ಭಾರತ ಇದು ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ದಶಕಗಳ ರಾಜಕೀಯ ಧ್ರುವೀಕರಣದ ಪ್ರಯತ್ನಗಳ ನಡುವೆಯೂ ಈ ಹಿರಿಯರ ಶುದ್ಧ ಮನಸ್ಸು ಕಲುಷಿತಗೊಂಡಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ, ಈ ಸಿನಿಮಾದ ಮೇಲೆ ಹಾಗೂ ನೀಮ್ ಕರೋಲಿ ಬಾಬಾ ಅವರ ಮೇಲೆ ಜನರಿಗಿರುವ ಅಪಾರ ಶ್ರದ್ಧೆಯನ್ನು ಗೌರವಿಸಿ 'ಮಿರಾಜ್ ಸಿನಿಮಾಸ್' (Mirage Cinemas) ಮಲ್ಟಿಪ್ಲೆಕ್ಸ್ ಸಂಸ್ಥೆಯು ಪ್ರತಿಯೊಂದು ಪ್ರದರ್ಶನದಲ್ಲೂ ಬಾಬಾರಿಗಾಗಿ 'ಸೀಟ್ ನಂಬರ್ 9' ಅನ್ನು ಕಾಯ್ದಿರಿಸಿ (Reserve) ಗೌರವ ಸಲ್ಲಿಸುತ್ತಿರುವುದು ವಿಶೇಷ.
ವರದಿಗಳ ಪ್ರಕಾರ, ಕೇವಲ 1.8 ರಿಂದ 2 ಕೋಟಿ ರೂಪಾಯಿಗಳ ಅತ್ಯಲ್ಪ ಬಜೆಟ್‌ನಲ್ಲಿ ನಿರ್ಮಾಣವಾದ 'ಹನುಮಾನ್ ಅಂಶ್' ಚಿತ್ರವು ಭಾರತದಲ್ಲಿ ಬಿಡುಗಡೆಯಾದ ಮೊದಲ ದಿನ ಸುಮಾರು ₹10 ಲಕ್ಷ ಗಳಿಕೆ ಮಾಡಿತ್ತು. ಆದರೆ ಪ್ರೇಕ್ಷಕರ ಮೌತ್ ಪಬ್ಲಿಸಿಟಿಯಿಂದ ಹಬ್ಬಿದ ಧನಾತ್ಮಕ ವಿಮರ್ಶೆಗಳಿಂದಾಗಿ (Word of Mouth), ಬಿಡುಗಡೆಯಾದ 28 ದಿನಗಳ ವೇಳೆಗೆ ಈ ಸಿನಿಮಾ ₹62 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಪ್ರೇಕ್ಷಕರ ಅಭೂತಪೂರ್ವ ಬೆಂಬಲದಿಂದಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಲೇ ಇದೆ.
You watched or not ? pic.twitter.com/m99ePJffK2
— Bhagavad Gita 🪷 (@Geetashloks) September 2, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.